ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸೆ:೨೨ ರಂದು(ನಾಳೆ) ಓತಿಹಾಳ ಐಪಿ, ಕನ್ನೋಳ್ಳಿ ಐಪಿ, ಬಮ್ಮನಜೋಗಿ ಐಪಿ ಲಿಂಕ್‌ಲೈನ್ ಕಾಮಗಾರಿ ಕೈಗೊಂಡಿರುವುದರಿಂದ ೧೧೦/೧೧ ಕೆ.ವ್ಹಿ ದೇವರಹಿಪ್ಪರಗಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಇಂಗಳಗಿ, ದೇವರಹಿಪ್ಪರಗಿ, ದೇವೂರ,ಕನ್ನೋಳ್ಳಿ ಎನ್‌ಜೆವಾಯ್ ಮತ್ತು ಮಣ್ಣೂರ, ಜಾಲವಾದ, ಕನ್ನೋಳ್ಳಿ, ಓತಿಹಾಳ, ಬಮ್ಮನಜೋಗಿ, ಪಡಗಾನೂರ, ಹರನಾಳ ಐಪಿ ಪೀಢರ್‌ಗಳ ಮೇಲೆ ಬೆಳಿಗ್ಗೆ ೮.೦೦ ಗಂಟೆಯಿಂದ ಸಾಯಂಕಾಲ ೫.೦೦ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಾರಣ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ದೇವರಹಿಪ್ಪರಗಿ ಇವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
