ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ‘ಸ್ವಚ್ಛತೆಯೇ ಸೇವೆ’ ಅಭಿಯಾನದಡಿ ಪಟ್ಟಣ ಪಂಚಾಯತ ಹಾಗೂ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಸ್ವಭಾವ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ ಎಂಬ ಕಾರ್ಯಕ್ರಮ ನಡೆಯಿತು.
ದೈಹಿಕ ಶಿಕ್ಷಣ ಶಿಕ್ಷಕ ಅಶೋಕ ಬೂದಹಾಳ ಮಾತನಾಡಿ, ಸ್ವಚ್ಛತೆ ಹಾಗೂ ಶುಚಿತ್ವಕ್ಕೆ ಎಲ್ಲರೂ ಶ್ರಮಿಸಬೇಕು. ಮತ್ತು ಸಾರ್ವಜನಿಕರಿಗೆ ವಿವಿಧ ಬಗೆಯ ಅಭಿಯಾನಗಳ ಮೂಲಕ ಅರಿವು ಮೂಡಿಸಬೇಕು. ಎಲ್ಲರೂ ತಮ್ಮ ತಮ್ಮ ಮನೆಯ ಸುತ್ತಲೂ ಇರುವ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಾನವ ಸರಪಳಿ ಮಾಡಿ ಘೋಷವಾಕ್ಯಗಳನ್ನು ಹೇಳಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ರುದ್ರಗೌಡ ಸೋಲಾಪುರ್, ಅರೋಗ್ಯ ನೀರಿಕ್ಷಕ ಬಸವರಾಜ್ ಕಾಜಿಬಿಳಗಿ, ಶಿಕ್ಷಕರಾದ ಎಸ್. ಎ. ಗಂಗನಗೌಡರ, ಮಹಮ್ಮದ್ ಪಟೇಗಾರ್, ಹರೀಶ್ ಬಬಲೇಶ್ವರ್, ಉಮಾ ಜಾಧವ, ಗಂಗಾ ಕೋಲಕಾರ್, ಗೀತಾ ಕೋಲಾಕಾರ ಸ್ವೇತಾ ಇನಾಮದಾರ್, ಸೌಭಾಗ್ಯ ಮಿರ್ಜಿ ಹಾಗೂ ಪೌರಾಕಾರ್ಮಿಕರು ಭಾಗವಹಿಸಿದ್ದರು.

