ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 77 ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಪ್ರಯುಕ್ತ ಪ್ರಿನ್ಸಿಪಾಲ್ ಪ್ರೊ ನಾಗಪ್ಪ ಚಾವಲ್ಕರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತದ ಒಕ್ಕೂಟಕ್ಕೆ ಹೈದ್ರಾಬಾದ್ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದ ಬೀದರ್, ಕಲಬುರ್ಗಿ, ರಾಯಚೂರು, ಬಳ್ಳಾರಿ ಕೊಪ್ಪಳ, ಯಾದಗಿರಿ, ವಿಜಯನಗರ ಏಳು ಜಿಲ್ಲೆಗಳನ್ನು ವಿಲೀನಗೊಳಿಸಲು ಶ್ರಮಿಸಿದ ಸಮಸ್ತ ಹೋರಾಟಗಾರ ತ್ಯಾಗ ಬಲಿದಾನವನ್ನು ಸ್ಮರಿಸಿ, ಗೌರವಪೂರ್ವಕ ನಮನಗಳನ್ನು ಸಲ್ಲಿಸಿದರು.
ಇದೇ ವೇಳೆ ಉಪನ್ಯಾಸಕರಾದ ಡಾ ಸಿದ್ದಲಿಂಗ ರಾಠೋಡ್, ಗುಲಾಂ ಮೈಹಿಬೂಬಸಾಬ್, ಡಾ ಬಸಮ್ಮ ಎಸ್, ನಸ್ರೀನ್ ತಾಜ್, ಡಾ ಪೂಜ್ಯಾ ಹೊನ್ನುಟಗಿ, ಡಾ ಯಂಕನಗೌಡ ಎಸ್, ಶರಣಪ್ಪ ನಡಕೂರ, ಸಂಗಪ್ಪ ಪಟ್ಟಣಕರ್, ಮಾಸುಮ ಅಲಿ ನಾಶಿ, ಮಾಳಪ್ಪ, ಹರ್ಷದ್, ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಶ್ರೀ ವಿಶ್ವಕರ್ಮ ಜಯಂತಿಯ ಅಂಗವಾಗಿ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.

