Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಡ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ಶುಲ್ಕ ಭರಿಸಿದ ಸಚಿವ ಎಂ.ಬಿ.ಪಾಟೀಲ
(ರಾಜ್ಯ ) ಜಿಲ್ಲೆ

ಬಡ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ಶುಲ್ಕ ಭರಿಸಿದ ಸಚಿವ ಎಂ.ಬಿ.ಪಾಟೀಲ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದಿದ್ದರೂ ಶುಲ್ಕ ಭರಿಸಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಇಬ್ಬರು ಇಬ್ಬರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಹಾಯ ಹಸ್ತ ಚಾಚಿದ್ದಾರೆ.
ಸೋಮವಾರ ವಿಜಯಪುರದಲ್ಲಿರುವ ಗೃಹ ಕಚೇರಿಗೆ ಆಗಮಿಸಿದ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ವಿದ್ಯಾರ್ಥಿ ಶ್ರೀಧರ ಬಸವರಾಜ ಕಲ್ಯಾಣಿ ಮತ್ತು ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ವಿದ್ಯಾರ್ಥಿ ಯಮನಪ್ಪ ಕಾಡಪ್ಪ ಮಾದರ ಅವರಿಗೆ ಸಚಿವರು ಎಂ. ಬಿ. ಬಿ. ಎಸ್. ಕೋರ್ಸಿನ ಮೊದಲ ವರ್ಷದ ಬೋಧನಾ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಊಟದ ಶುಲ್ಕಕ್ಕೆ ಅಗತ್ಯವಾಗಿರುವ ರೂ. 1,29,400 (ಒಂದು ಲಕ್ಷದ 29 ಸಾವಿರದ 400 ರೂಪಾಯಿ) ಹಣದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್. ವಿ ಕುಲಕರ್ಣಿ, ವಿದ್ಯಾರ್ಥಿ ಶ್ರೀಧರ ಬಸವರಾಜ ಕಲ್ಯಾಣಿ ಅವರ ತಾಯಿ ಕಲಾವತಿ ಉಪಸ್ಥಿತರಿದ್ದರು.
ಎಂ.ಬಿ.ಬಿ.ಎಸ್ ಕೋರ್ಸಿಗೆ ಬೋಧನೆ, ಹಾಸ್ಟೇಲ್ ಮತ್ತು ಊಟದ ಖರ್ಚು ಸೇರಿ ಒಟ್ಟು ರೂ. 517600(ಐದು ಲಕ್ಷ 17 ಸಾವಿರದ 600 ರೂಪಾಯಿ) ವೆಚ್ಚ ತಗುಲಲಿದ್ದು, ಈ ಎಲ್ಲ ಹಣವನ್ನು ಸಚಿವರು ಬಿ.ಎಲ್.ಡಿ.ಇ ಸಂಸ್ಥೆಯಿಂದ ಭರಿಸಲಿದ್ದಾರೆ. ಅಲ್ಲದೇ, ಇದರ ಮೊದಲ ಕಂತಿನ ಹಣದ ಚೆಕ್ ನ್ನು ಇಂದು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಶ್ರೀಧರ ಬಸವರಾಜ ಕಲ್ಯಾಣಿ, ನೀಟ್ ನಲ್ಲಿ ನನಗೆ 36400 ಸ್ಥಾನ ಬಂದಿದ್ದು, ಕಲಬುರಗಿ ಜಿಮ್ಸ್ ಕಾಲೇಜ್ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್ ಸೀಟು ಸಿಕ್ಕಿದೆ. ಪ್ರವೇಶ ಶುಲ್ಕ ಭರಿಸಲು ಪರದಾಡುತ್ತಿದ್ದ ನಮಗೆ ಸಚಿವ ಎಂ. ಬಿ. ಪಾಟೀಲ ಅವರು ಆಪದ್ಬಾಂಧವರಾಗಿದ್ದಾರೆ. ನಮಗೆ ಸಹಾಯ ಮಾಡುವ ಮೂಲಕ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಮುಂದೆ ಎಂ.ಡಿ ಓದಿ ವಿಜಯಪುರದಲ್ಲಿಯೇ ಎಂ. ಬಿ. ಪಾಟೀಲ ಅವರ ಹೆಸರಿನಲ್ಲಿ ಆಸ್ಪತ್ರೆ ಪ್ರಾರಂಭಿಸಿ ಬಡಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.
ಶ್ರೀಧರ ಬಸವರಾಜ ಕಲ್ಯಾಣಿ ತಾಯಿ ಕಲಾವತಿ ಮಾತನಾಡಿ, ನಮಗೆ ಎರಡು ಎಕರೆ ಜಮೀನಿದ್ದು, ನನ್ನ ಪತಿಗೆ ಆರೋಗ್ಯ ಸರಿಯಿಲ್ಲ. ನಮಗೆ ಶ್ರೀಧರ, ವೈಭವ ಮತ್ತು ಪ್ರದೀಪ ಮೂರು ಜನ ಮಕ್ಕಳಿದ್ದಾರೆ. ಕಿರಿಯರಿಬ್ಬರೂ ಪಿಯುಸಿ ಓದುತ್ತಿದ್ದ, ಹಿರಿಯ ಮಗ ಶ್ರೀಧರ 10ನೇ ತರಗತಿಯವರೆಗೆ ಕಾಖಂಡಕಿ ಸರಕಾರಿ ಶಾಲೆಯಲ್ಲಿಯೇ ಓದಿದ್ದಾನೆ. ವಿಜಯಪುರದ ತುಂಗಳ ಕಾಲೇಜಿನಲ್ಲಿ ಪಿಯುಸಿ ಓದಿರುವ ಈತನಿಗೆ ಮೆಡಿಕಲ್ ಸೀಟು ಸಿಕ್ಕಿದೆ. ಆದರೆ, ಮನೆಯ ಪರಿಸ್ಥಿತಿ ನಾಜೂಕಾಗಿರುವ ಕಾರಣ ಹಣವಿಲ್ಲದ ಕಾರಣ ವೈದ್ಯನಾಗಬೇಕೆಂಬ ಮಗನ ಕನಸು ನನಸಾಗದೇ ದಿಕ್ಕು ತೋಚದಂತಾಗಿದ್ದೆವು. ಆಗ ಸಚಿವ ಎಂ. ಬಿ. ಪಾಟೀಲ ಅವರನ್ನು ಬಂದು ಭೇಟಿ ಮಾಡಿದಾಗ ಸಹಾಯ ಹಸ್ತ ಚಾಚಿದ್ದಾರೆ. ನಮಗೆ ಬಹಳ ಹೌಸ(ಸಂತೋಷ) ಆಗಿದೆ. ದೇವರು ಶಿವನ ರೂಪದಲ್ಲಿ ಬಂದು ನೆರವಾಗಿರುವ ಎಂ. ಬಿ. ಪಾಟೀಲರಿಗೆ ನಾವು ಜೀವನಪೂರ್ತಿ ಋಣಿಯಾಗಿರುತ್ತೇವೆ. ಕೊಡುಗೈ ದಾನಿಯಾಗಿರುವ ಅವರಿಗೆ ದೇವರು ಇನ್ನೂ ಹೆಚ್ಚಿನ ಆಶೀರ್ವಾದ ಮಾಡಿ ಉನ್ನತ ಸ್ಥಾನಕ್ಕೇರಿಸಲಿ ಎಂದು ಮನದಾಳದಿಂದ ಆಶೀರ್ವದಿಸಿದರು.
ಮತ್ತೋರ್ವ ವಿದ್ಯಾರ್ಥಿ ಯಮನಪ್ಪ ಕಾಡಪ್ಪ ಮಾದರ ಮಾತನಾಡಿ, ನನಗೆ ತಂದೆ ಇಲ್ಲ. ತಾಯಿ ಕೂಲಿ ಕೆಲಸ ಮಾಡುತ್ತಾಳೆ. ಮೂರು ಜನ ಅಕ್ಕಂದಿರು ಮದುವೆಯಾಗಿ ಪತಿ ಮನೆಯಲ್ಲಿ ವಾಸವಾಗಿದ್ದಾರೆ. ನೀಟ್ ಪರೀಕ್ಷೆಯಲ್ಲಿ ನನಗೆ 187253 ಸ್ಥಾನ ಬಂದಿದೆ. ಆದರೆ, ಬಡತನದ ಹಿನ್ನೆಲೆಯಲ್ಲಿ ನೀಟ್ ಪಾಸಾದರೂ ಎಂ.ಬಿ.ಬಿ.ಎಸ್ ಪ್ರವೇಶ ಪಡೆಯಲು ಸಂಕಷ್ಟ ಪಡುತ್ತಿದ್ದ ನನಗೆ ಎಂ. ಬಿ. ಪಾಟೀಲರು ದೇವರ ರೂಪದಲ್ಲಿ ಬಂದು ನೆರವಾಗಿದ್ದಾರೆ. ಅವರಿಗೆ ನಾನು ಮತ್ತು ನನ್ನ ತಾಯಿ ಸದಾ ಋಣಿಯಾಗಿರುತ್ತೇವೆ. ಭವಿಷ್ಯದಲ್ಲಿ ಉತ್ತಮ ವೈದ್ಯನಾಗಿ ವಿಜಯಪುರದಲ್ಲಿಯೇ ಬಡಜನರ ಸೇವೆ ಮಾಡುವ ಮಹದಾಸೆ ಇದೆ ಎಂದು ಹೇಳಿದರು.
ನಾನು 1 ರಿಂದ 6ನೇ ತರಗತಿಯವರೆಗೆ ಮದಭಾವಿ ಸರಕಾರಿ ಶಾಲೆಯಲ್ಲಿ ಓದಿದ್ದೇನೆ. ಮಲ್ಲಾಬಾದಿನಲ್ಲಿ ಹಾಸ್ಟೇಲಿನಲ್ಲಿದ್ದುಕೊಂಡು 7ನೇ ತರಗತಿ ಮುಗಿಸಿದ್ದೇನೆ. ನಂತರ 8 ರಿಂದ 10ನೇ ತರಗತಿಯವರೆಗೆ ಬಿಜ್ಜರಗಿ ಸರಕಾರಿ ಶಾಲೆಯಲ್ಲಿ ಓದಿದ್ದೇನೆ. ವಿಜಯಪುರ ನಗರದಲ್ಲಿರುವ ಸರಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಓದಿದ್ದೇನೆ. ಈಗ ಹಾವೇರಿಯ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಸೀಟು ಸಿಕ್ಕಿದ್ದು, ಸಚಿವರ ಸಹಾಯದಿಂದ ತುಂಬಾ ಸಂತಸವಾಗಿದೆ ಎಂದು ಯಮನಪ್ಪ ಕಾಡಪ್ಪ ಮಾದರ ಹರ್ಷ ವ್ಯಕ್ತಪಡಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.