ಸೆ.೫ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ
ವಿಜಯಪುರ: ೨೦೨೪-೨೫ನೇ ಸಾಲಿನ ವಿಜಯಪುರ ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಸೆಪ್ಟೆಂಬರ್ ೫ರಂದು ನಗರದ ಕಂದಗಲ್ಲ ಶ್ರೀ ಹನಂತರಾಯ ರಂಗಮಂದಿರದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಮುದ್ದೇಬಿಹಾಳ ತಾಲೂಕಿನ ಎಲ್.ಪಿ.ಎಸ್ ಗಡಿಸೋಮನಾಳ ಎಲ್.ಟಿ-೧ ಶಾಲೆಯ ಸಹ ಶಿಕ್ಷಕ ಹುಲಿಗೆಪ್ಪ ಎಸ್, ವಿಜಯಪುರ ಜಲನಗರದ ಯು.ಬಿ.ಎಲ್.ಪಿ.ಎಸ್ ನಂ.೨೦ನೇ ಶಾಲೆಯ ಸಹ ಶಿಕ್ಷಕರಾದ ಶ್ರೀಮತಿ ಯಾಸ್ಮೀನಬಾನು ಜಿ ಇನಾಮದಾರ, ಬಸವನ ಬಾಗೇವಾಡಿ ತಾಲೂಕಿನ ದಿಂಡವಾರದ ಎಲ್.ಪಿ.ಎಸ್ ತಿಮ್ಮಾಪೂರ ಬಡಾವಣೆ ಶಾಲೆಯ ಮುಖ್ಯಗುರುಗಳಾದ ಮೈಹಿಬುಬ ನದಾಫ್, ಚಡಚಣ ತಾಲೂಕಿನ ಎಲ್.ಪಿ.ಎಸ್ ಹೊರ್ತಿ ಎಚ್.ಕೆ ಶಾಲೆಯ ಸಹ ಶಿಕ್ಷಕ ಸತೀಶ ಕುಲಕರ್ಣಿ, ಸಿಂದಗಿ ತಾಲೂಕಿನ ಎಲ್.ಪಿ.ಎಸ್ ಬಿಸನಾಳ ಶಾಲೆಯ ಸಹ ಶಿಕ್ಷಕರಾದ ಶ್ರೀಮತಿ ಭಾರತಿ ಚಿಮ್ಮಲಗಿ, ಇಂಡಿ ತಾಲೂಕಿನ ಎಲ್.ಪಿ.ಎಸ್ ಹಿರೇಬೇನೂರ ಎಲ್.ಟಿ ಶಾಲೆಯ ಸಹ ಶಿಕ್ಷಕ ಪಾಯಣ್ಣ ಬೋಗಾರ ಹಾಗೂ ವಿಜಯಪುರ ಗ್ರಾಮೀಣ ಎಲ್.ಪಿ.ಎಸ್ ಕರ್ಪೇ ವಸ್ತಿ ಟಕ್ಕಳಕಿ ಶಾಲೆಯ ಸಹ ಶಿಕ್ಷಕ ಮಾರುತಿ ಲಮಾಣಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮುದ್ದೇಬಿಹಾಳ ತಾಲೂಕಿನ ಎಚ್.ಪಿ.ಎಸ್ ಸರೂರ ಶಾಲೆಯ ಸಹ ಶಿಕ್ಷಕ ಎಸ್.ಎಮ್.ಕಟ್ಟಿಮಠ, ವಿಜಯಪುರ ನಗರದ ಕೆ.ಬಿ.ಎಮ್.ಪಿ.ಎಸ್. ನಂ.೫೧ ಶಾಲೆಯ ಸಹ ಶಿಕ್ಷಕ ಲೀಲಾಧರ ಆರ್ ನಾಯಕ, ಬಸವನ ಬಾಗೇವಾಡಿ ತಾಲೂಕಿನ ಎಚ್.ಪಿ.ಎಸ್ ಇವಣಗಿ ಶಾಲೆಯ ಸಹ ಶಿಕ್ಷಕ ಎಸ್.ಸಿದ್ದಪ್ಪ (ಅವಜಿ), ಚಡಚಣ ತಾಲೂಕಿನ ಎಂ.ಪಿ.ಎಸ್ ಅರ್ಜನಾಳ ಶಾಲೆಯ ಸಹ ಶಿಕ್ಷಕ ರಮೇಶ ಎಸ್ ಗೋಡಿಕಾರ, ಸಿಂದಗಿ ತಾಲೂಕಿನ ಕೆ.ಜಿ.ಎಚ್.ಪಿ.ಎಸ್ ಮುಳಸಾವಳಗಿ ಶಾಲೆಯ ಸಹ ಶಿಕ್ಷಕ ಸುಭಾಸ ಕೆ. ಹೊಸಮನಿ, ಇಂಡಿ ತಾಲೂಕಿನ ಕೆ.ಜಿ.ಎಮ್.ಪಿ.ಎಸ್ ಸಾಲೋಟಗಿ ಶಾಲೆಯ ಸಹ ಶಿಕ್ಷಕ ಸೋಮನಾಥ ಎಸ್ ನಾವಿ ಹಾಗೂ ವಿಜಯಪುರ ಗ್ರಾಮೀಣ ಎಚ್.ಪಿ.ಎಸ್ ಬಬಲೇಶ್ವರ ಬಡಾವಣೆ ಶಾಲೆಯ ಸಹ ಶಿಕ್ಷಕ ಪಿ.ಎಸ್.ಇಜೇರಿ ಅವರು ಆಯ್ಕೆಯಾಗಿದ್ದಾರೆ.
ಪ್ರೌಢ ಶಾಲಾ ವಿಭಾಗ
ಪ್ರೌಢ ಶಾಲಾ ವಿಭಾಗದಲ್ಲಿ ಮುದ್ದೇಬಿಹಾಳ ತಾಲೂಕಿನ ಬ.ಸಾಲವಾಡಗಿಯ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಈರಪ್ಪ ಎಂ.ಚಿಮ್ಮಲಗಿ, ವಿಜಯಪುರ ನಗರದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಸಹ ಶಿಕ್ಷಕಿಯಾದ ಶ್ರೀಮತಿ ಅನಸೂಯಾ ಎನ್ ಬನ್ನೂರ, ಬಸವನ ಬಾಗೇವಾಡಿ ತಾಲೂಕಿನ ಆದರ್ಶ ವಿದ್ಯಾಲಯದ ಹುಣಶ್ಯಾಳ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸುಭಾಸ ಹರಿಜನ, ಚಡಚಣ ತಾಲೂಕಿನ ಝಳಕಿಯ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಪ್ರಕಾಶ ಎಸ್. ನಂದರಗಿ, ಸಿಂದಗಿ ತಾಲೂಕಿನ ಕೆರೂಟಗಿಯ ಪಿ.ಎಮ್.ಶ್ರೀ ಪ ಪ್ರೌಢ ಶಾಲೆಯ ಸಹ ಶಿಕ್ಷಕ ಸಂತೋಷಕುಮಾರ ಗುಮಶೆಟ್ಟಿ ಹಾಗೂ ವಿಜಯಪುರ ಗ್ರಾಮೀಣ ತಿಡಗುಂದಿಯ ಬಂಜಾರ ವಿ.ವ ಸಂಘ ಪ್ರೌಢ ಶಾಲೆಯ ಸಹ ಶಿಕ್ಷಕ ರಾಜಕುಮಾರ ಚವ್ಹಾಣ ಅವರು ಸೇರಿದಂತೆ ಕಿರಿಯ / ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ಒಟ್ಟು ೨೧ ಜನ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
