ಕೊಲ್ಹಾರ: ಪುನರ್ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆಯಿಂದ ಪುಕ್ಕಟೆಯಾಗಿ ನಿವೇಶನ ದೊರಕಿಸಿಕೊಂಡು ಕೊಲ್ಹಾರ ಪಟ್ಟಣದಲ್ಲಿ ನಿರ್ಮಿಸಿರುವ ಎರಡು ಬಸ್ ನಿಲ್ದಾಣಗಳು ಈಗಾಗಲೇ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಇಲಾಖೆಗೆ ಹಸ್ತಾಂತರಗೊಂಡು ಐದಾರು ವರ್ಷಗಳಾದರೂ KKRTC ಅವರು ತಾಲೂಕು ಕೇಂದ್ರದ ಸ್ಥಾನವನ್ನು ಹೊಂದಿದ ಕೊಲ್ಹಾರ ಬಸ್ ನಿಲ್ದಾಣಗಳ ದುಸ್ಥಿತಿಯ ಬಗ್ಗೆ ಯೋಚಿಸದಿರುವುದು ದುರ್ದೈವದ ಸಂಗತಿ.
ವಿಶಾಲವಾದ ಜಾಗವನ್ನು ಹೊಂದಿರುವ ಬಸ್ ನಿಲ್ದಾಣದಲ್ಲಿ ವಾಹನಗಳು ಸುಲಭವಾಗಿ ಸಂಚರಿಸಲು ಆವರಣದ ತುಂಬಾ ಡಾಂಬರಿಕರಣ ಮಾಡದೆಯಿರುವುದರಿಂದ ತಗ್ಗು- ದಿನ್ನೆಗಳ ಆಗರವಾಗಿದೆ. ಇದರಿಂದ ಮಳೆ ನೀರು ತಗ್ಗು ಪ್ರದೇಶದಲ್ಲಿ ನಿಂತು ವಾಹನಗಳು ಬಂದರೆ ಪ್ರಯಾಣಿಕರಿಗೆ ನೀರು ಸಿಡಿಯುವದರಿಂದ ಚಾಲಕರ ಮತ್ತು ಪ್ರಯಾಣಿಕರ ಮದ್ಯ ಮಾತಿನ ಚಕಮಕಿ ಕೂಡ ನಡೆದಿದೆ.
ಬಸ್ ನಿಲ್ದಾಣದ ಮುಂಭಾಗದ ರಸ್ತೆ ಮೇಲೆತ್ತರದಲ್ಲಿರುವುದರಿಂದ ಬಸ್ಸುಗಳು ಸುಲಭವಾಗಿ ಸಂಚರಿಸಲು ಸಾಧ್ಯವಾಗದೆ ನೃತ್ಯ ಮಾಡುತ್ತ ಸಾಗುವಂತಾಗಿದೆ
ರಾಜ್ಯದ ಪ್ರಭಾವಿ ಸಚಿವ ಶಿವಾನಂದ ಪಾಟೀಲರು ತಮ್ಮ ಮತಕ್ಷೇತ್ರದ ಕೊಲ್ಹಾರ ಪಟ್ಟಣದ ಬಸ್ ನಿಲ್ದಾಣಗಳ ದುಸ್ಥಿತಿ ಕುರಿತು ಗಮನ ಹರಿಸಬೇಕೆಂಬುದು ನಾಗರಿಕರ ಆಗ್ರಹವಾಗಿದೆ.
ಕೊಲ್ಹಾರ ಪಟ್ಟಣದಿಂದ ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುವ ಪ್ರಯಾಣಿಕರ ದಟ್ಟನೆಯ ಕೇಂದ್ರ, ಅಲ್ಲದೆ ಪ್ರಮುಖ ವಾಣಿಜ್ಯ ಕೇಂದ್ರವು ಹೌದು. ಆದರೂ ಕೂಡ KKRTC ಅಧಿಕಾರಿಗಳ ನಿರ್ಲಕ್ಷತನವೋ ಬೇಜವಾಬ್ದಾರಿತನವೋ ಕಾಟಾಚಾರಕ್ಕೆ ಕೇವಲ ಒಬ್ಬ ಕಂಟ್ರೋಲರನ್ನು ನೇಮಕ ಮಾಡಿ ಕೈತೋಳೆದುಕೊಂಡಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು, ತಾಲೂಕು ಕೇಂದ್ರದ ಪ್ರಮುಖ ಸ್ಥಳದಲ್ಲಿ ಸಕಲ ಸೌಲಭ್ಯವುಳ್ಳ ಪ್ರಯಾಣಿಕರ ಅನಕೂಲತೆಗಾಗಿ ಯಾವ ಊರಿನ ಬಸ್ಸುಗಳು ಯಾವ ಕಡೆ ಸಂಚರಿಸುತ್ತಿವೆ ಎಂಬ ಮಾರ್ಗಸೂಚಿಯಿಲ್ಲದೆ ಇರುವುದು, ಪ್ರಯಾಣಿಕರಿಗೆ ಸುಸಜ್ಜಿತವಾದ ಶೌಚಾಲಯಗಳ ಕೊರತೆ, ಅವುಗಳ ಉಸ್ತುವಾರಿ ನೋಡಿಕೊಳ್ಳುವ ಮಾನವ ಸಂಪನ್ಮೂಲದ ಕೊರತೆ, ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳವಕಾಶ ಕಲ್ಪಿಸುವುದು ಸೇರಿದಂತೆ ಇನ್ನು ಹಲವಾರು ಕುಂದುಕೊರತೆಗಳನ್ನು ಹೊಂದಿರುವ ಕೊಲ್ಹಾರ ಬಸ್ ನಿಲ್ದಾಣಗಳು ಅಭಿವೃದ್ದಿಯಾಗುವುದು ಯಾವಾಗ ಎಂಬುದೇ ಪ್ರಯಾಣಿಕರ ಯಕ್ಷ ಪ್ರಶ್ನೆಯಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

