ಕೊಲ್ಹಾರ: ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ಈ ಸಲ ಸುಮಾರು 65 ಸಾವಿರಕ್ಕಿಂತಲೂ ಅಧಿಕ ಹೊಸದಾಗಿ ಬಿಜೆಪಿ ಪಕ್ಷದ ಸದ್ಯಸ್ಯರನ್ನಾಗಿ ಮಾಡಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.
ಪಟ್ಟಣದ 12ಮತ್ತು 13ನೆ ವಾರ್ಡಿನ ಮದ್ಯಬಾಗದಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷದ ಸದ್ಯಸ್ಯತ್ವ ನೊಂದಣಿ ಮಾಡುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಮತ್ತು ರಾಷ್ಟ್ರ ನಾಯಕರ ಸೂಚನೆ ಮೇರೆಗೆ ಹಳೆ ಸದಸ್ಯರ ಜೊತೆ ಹೊಸ ಸದಸ್ಯರನ್ನು ನೊಂದಣಿ ಮಾಡುವ ಕೆಲಸದಲ್ಲಿ ಕಾರ್ಯಕರ್ತರು ಅವಿರತವಾಗಿ ಶ್ರಮಿಸಲು ಸಿದ್ದರಾಗಿ ಮತ್ತೊಮ್ಮೆ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಸದ್ಯಸ್ಯರನ್ನು ಹೊಂದಿದ ರಾಜಕೀಯ ಪಕ್ಷವಾಗಿ ಗುರುತಿಸುವಂತಾಗಲಿ ಎಂದು ಆಶಿಸಿದರು.
ಪಕ್ಷದ ಜವಾಬ್ದಾರಿಯನ್ನು ಹೊಂದಿರುವ ಕಾರ್ಯಕರ್ತರು ಇನ್ನು ಕೆಲವು ದಿನಗಳಲ್ಲಿ ತಮಗೆ ಒಪ್ಪಿಸಿರುವ ಕಾರ್ಯ ಪೂರ್ಣಗೊಳಿಸಿ ಜಿಲ್ಹಾ ಕಛೇರಿ ಮೂಲಕ ರಾಜ್ಯ ಕಛೇರಿಗೆ ಬಸವನ ಬಾಗೇವಾಡಿ ಮಂಡಲದಲ್ಲಿ ಬಿಜೆಪಿ ಪಕ್ಷವು ಗಟ್ಟಿಯಾಗಿ ಕಾರ್ಯನಿರ್ವಸುತ್ತಿದೆ ಎನ್ನುವುದನ್ನು ಸಾಕ್ಷೀಕರಿಸಲು ಸನ್ನದ್ದರಾಗಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಹಿಂದಿನ ಅಧ್ಯಕ್ಷ ಕಲ್ಲಪ್ಪ ಶಿ ಸೊನ್ನದ, ವಿರುಪಾಕ್ಷಿ ಕೋಲಕಾರ, ಸದಸ್ಯರಾದ ಅಪ್ಪಶಿ ಮಟ್ಟಿಹಾಳ, ಬಾಬು ಭಜಂತ್ರಿ, ಸಂಗಪ್ಪ ಹುಚ್ಚಪ್ಪಗೋಳ, ಯುವ ಮುಖಂಡರಾದ ಮಂಜು ತುಂಬರಮಟ್ಟಿ, ಸಭಾಷ ಭಜಂತ್ರಿ, ಢೊಂಗ್ರಿ ಕಟಬರ, ಪ್ರಕಾಶ ಮಠಪತಿ, ವಿಜಯ ಬಾಟಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಬಿಜೆಪಿ ಸದ್ಯಸ್ಯತ್ವ ನೊಂದಣಿ ಅಭಿಯಾನಕ್ಕೆ ಬೆಳ್ಳುಬ್ಬಿ ಚಾಲನೆ
Related Posts
Add A Comment

