ದೇವರಹಿಪ್ಪರಗಿ: ದೇವೂರ ತಾಂಡಾದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆದು ಕುಟುಂಬಗಳ ಸುಗಮ ಸಂಸಾರ ನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಮಹಿಳೆಯರು ಶಿರಸ್ತೇದಾರ ಡಿ.ಎಸ್.ಭೋವಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಮಂಗಳವಾರ ಆಗಮಿಸಿದ ದೇವೂರ ತಾಂಡಾದ ಮಹಿಳೆಯರು ತಮ್ಮ ತಾಂಡಾಗಳಲ್ಲಿ ಮಾಡಲಾಗುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಸ್ತೂರಿಬಾಯಿ ದೊಡಮನಿ(ಹಿಟ್ನಳ್ಳಿ ತಾಂಡಾ) ಮಾತನಾಡಿ, ದೇವೂರ ತಾಂಡಾಗಳಲ್ಲಿ ಅಕ್ರಮವಾಗಿ ಸಾರಾಯಿ ತಯಾರಿಸಿ ಗಂಗಾರಾಮ ಚಂದು ರಾಠೋಡ, ಸಂತೋಷ ತುಕಾರಾಮ್ ನಾಯಿಕ, ಸಂಜು ನಾನು ರಾಠೋಡ, ಅಪ್ಪು ತುಕಾರಾಮ ನಾಯಿಕ, ಶಂಕರ ಲಕ್ಷö್ಮಣ ರಾಠೋಡ, ವಿಲಾಸ ಬದ್ದು ಪವಾರ, ಬಾಳು ಸೇವು ಪವಾರ ಮಾರಾಟ ಮಾಡುತ್ತಿದ್ದಾರೆ.
ಅಕ್ರಮ ಮದ್ಯ ಮರಾಟದ ಫಲವಾಗಿ ಮನೆ ನಿರ್ವಹಣೆ ಮಾಡುವ ಮಹಿಳೆಯರು ಭಯಭೀತರಾಗಿದ್ದಾರೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ಸಿಂದಗಿ ಹಾಗೂ ವಿಜಯಪುರ ಅಬಕಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಾವು ಈ ಬಾರಿಯು ಯಾವುದೇ ಕ್ರಮ ಕೈಗೊಳ್ಳದಿದ್ದರೇ ದೇವರಹಿಪ್ಪರಗಿ ತಾಳಿಕೋಟೆ ರಸ್ತೆ ತಡೆ ಕೈಗೊಳ್ಳುತ್ತೇವೆ. ಆದ್ದರಿಂದ ಕೂಡಲೇ ತಾಲ್ಲೂಕಾಡಳಿತ ಈ ಕುರಿತು ಕ್ರಮ ವಹಿಸುವಂತೆ ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೇದಾರ ಅಬಕಾರಿ ಇಲಾಖೆಯೊಂದಿಗೆ ಸೇರಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮಂಗಲಾಬಾಯಿ ರಾಠೋಡ, ಮಮತಾ ನಾಯಿಕ, ಪಾರುಬಾಯಿ ರಾಠೋಡ, ರುಕ್ಮಾಬಾಯಿ ನಾಯಿಕ, ಕಮಲಾಬಾಯಿ ರಾಠೋಡ, ಉಮಾಬಾಯಿ ರಾಠೋಡ, ಮೋತಾಬಾಯಿ ರಾಠೋಡ, ಶೇಖುಬಾಯಿ ಪವಾರ, ಬೇಬುಬಾಯಿ ನಾಯಿಕ, ಲಕ್ಷ್ಮೀಬಾಯಿ ಪವಾರ, ಕಮಲಾಬಾಯಿ ಪವಾರ, ಅಮಶಾಬಾಯಿ ರಾಠೋಡ, ಇಂದುಬಾಯಿ ರಾಠೋಡ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

