ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಕರವಿನಾಳ ಗ್ರಾಮದಲ್ಲಿ ಗ್ರಾಮದೇವತೆ ಶ್ರೀದೇವಿ ಜಾತ್ರೆ ಶುಕ್ರವಾರ ಸಂಭ್ರಮದಿಂದ ನಡೆಯಿತು. ಬೆಳಗ್ಗೆ ಕುಂಭ ಮೆರವಣಿಗೆಯೊಂದಿಗೆ ಶ್ರೀದೇವಿಗೆ ಉಡಿ ತುಂಬುವ ಕಾಯ೯ಕ್ರಮ ಹಾಗೂ ರಥೋತ್ಸವ ಜರುಗಿತು.ಗ್ರಾಮದ ಶ್ರೀದೇವಿಯ ದೇವಸ್ಥಾನದಿಂದ ಗಂಗಾ ಸ್ಥಳಕ್ಕೆ ತೆರಳಿ ನಂತರ ಪ್ರಮುಖ ಬೀದಿಯಲ್ಲಿ ಡೊಳ್ಳಿನ ವಾಲಗ,ಕುಂಭ ಮೆರವಣಿಗೆ ಮೂಲ ದೇವಸ್ಥಾನಕ್ಕೆ ಬಂದು ತಲುಪಿತು. ಸಾವಿರಾರು ಭಕ್ತರು ಶ್ರೀದೇವಿ ಆಶೀ೯ವಾದ ಪಡೆದು ಪುನೀತರಾದರು. ಪ್ರಧಾನ ಅಚ೯ಕರಾದ ಈರಣ್ಣ ವಿಶ್ವಕಮ೯,ಮಾನಪ್ಪ ವಿಶ್ವಕಮ೯,ವಾಸುದೇವ ವಿಶ್ವಕಮ೯ ಇದ್ದರು. ಸಾವಿರಾರು ಭಕ್ತರಿಗೆ ಅನ್ನಪ್ರಸಾದದ ವ್ಶವಸ್ಥೆ ಮಾಡಲಾಗಿತ್ತು.
ಜಾತ್ರೆಯಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

