ವಿಜಯಪುರ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ಜಿಲ್ಲೆಯ ಆಹಾರ ಉತ್ಪಾದಕರು, ತಯಾರಕರು, ವಿತರಕರಿಗೆ ಪರವಾನಿಗೆ ಅಥವಾ ನೊಂದಣಿ (ರಜಿಸ್ಟೇಶನ್) ಅಭಿಯಾನ ೩೧ ರಂದು ಹಮ್ಮಿಕೊಳ್ಳಲಾಗಿದೆ.
ಆಹಾರ ಉತ್ಪಾದಕರು, ವಿತರಕರು ಹಾಗೂ ಮಾರಾಟಗಾರರು ನಿರಂತರವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಪರವಾನಿಗೆ ಅಥವಾ ನೊಂದಣಿ ಪಡೆಯುವುದು ಕಡ್ಡಾಯವಾಗಿದ್ದು, ಜಿಲ್ಲೆಯಾದ್ಯಂತ ಬೃಹತ್ ಸಂಖ್ಯೆ ಆಹಾರ ಉತ್ಪಾದಕರಿಗೆ ಪರವಾನಿ-ನೊಂದಣಿ ಮಾಡುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪರವಾನಿಗೆಗಾಗಿ ಆಧಾರ ಕಾರ್ಡ, ಫೊಟೋ, ವಿದ್ಯುತ್ ಬಿಲ್ಲ, ಜಿ.ಎಸ್.ಟಿ., ನಗರಸಭೆ ಪರವಾನಿಗೆ, ಪ್ಯಾನ ಕಾರ್ಡ, ಲ್ಯಾಬ ರಿಪೋರ್ಟ್ ಸೀಲು, ಹಾಗೂ ನೊಂದಣಿಗೆ ಆಧಾರ ಕಾರ್ಡ, ಫೋಟೋ, ವಿದ್ಯುತ್ ಬಿಲ್ಲ ಅಥವಾ ಬಾಡಿಗೆ ಒಪ್ಪಂದ ಪತ್ರ- ಉತಾರಿ ದಾಖಲೆಗಳೊಂದಿಗೆ ನೊಂದಣಿ ಮಾಡಿಸಿಕೊಳ್ಳಬಹುದಾಗಿದೆ.
ಜಿಲ್ಲೆಯ ಆಹಾರ ಉತ್ಪಾದಕರು, ವಿತರಕರು ಹಾಗೂ ಮಾರಾಟಗಾರರು ಆನ್‌ಲೈನ್ ಮೂಲಕ ಅಥವಾ ಕಚೇರಿಗೆ ಭೇಟಿ ನೀಡುವ ಮೂಲಕ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು. ಕಲಬೆರಕೆ ಆಹಾರ ಪದಾರ್ಥ ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಗಳಾದ ವಿಜಯಪುರ ಮೊ: ೯೮೪೫೨೭೬೮೧೦, ಮುದ್ದೇಬಿಹಾಳ ಮೊ: ೯೪೪೮೬೪೪೭೮೨, ಇಂಡಿ ಮೊ: ೯೪೪೮೨೦೯೭೯೮, ಬಸವನಬಾಗೇವಾಡಿ ಮೊ: ೯೬೬೩೩೧೫೬೬೫, ಸಿಂದಗಿ ಮೊ: ೮೯೫೧೩೩೨೮೧೮ ಅಥವಾ ಜಿಲ್ಲಾ ಅಂಕಿತ ಅಧಿಕಾರಿಗಳ ಕಾರ್ಯಾಲಯ, ಅಥಣಿ ರಸ್ತೆ, ಜಿಲ್ಲಾ ಆಸ್ಪತ್ರೆ ಆವರಣ, ಟಿ.ಬಿ.ಆಫೀಸ್ ಪಕ್ಕದಲ್ಲಿ ವಿಜಯಪುರ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
