ಸಿಂದಗಿ ಗೆಳೆಯರ ಬಳಗ & ಪತ್ರಕರ್ತರ ಸಂಘದಿಂದ ಡಾ.ರವಿ ಗೋಲಾ ಮತ್ತು ಬಸವರಾಜ ಕಾಂಬಳೆ ಗೆ ಸನ್ಮಾನ
ಸಿಂದಗಿ: ಇಂದಿನ ವೈಜ್ಞಾನಿಕ ಯುಗದಲ್ಲಿ ನಾವು ಸಂಬಂಧಗಳಿಗೆ ಬೆಲೆ ಕೊಡದೇ ಹೋಗುತ್ತಿದ್ದೇವೆ. ಇದು ನಿಜಕ್ಕೂ ಆತಂಕಕಾರಿ ವಿಚಾರ ಎಂದು ಶಾಸಕ ಅಶೋಶ ಮನಗೂಳಿ ಹೇಳಿದರು.
ಅವರು ಪಟ್ಟಣದ ಸಿಂದಗಿ ಗೆಳೆಯರ ಬಳಗ ಮತ್ತು ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿ ಸಮಾಜಕ್ಕೆ ತನ್ನದೇ ಆಗಿರುವಂತ ಉತ್ತಮ ಕಾರ್ಯಗಳನ್ನು ನೀಡುವಂಥವನಾಗಬೇಕು. ನಾವು ಸಮಾಜವನ್ನು ಪ್ರೀತಿಸಿದಾಗ ಮಾತ್ರ ಸಮಾಜ ನಮ್ಮನ್ನು ಪ್ರೀತಿಸುತ್ತದೆ. ಸಮಾಜ ಮುಖಿಯಾಗಿರುವ ಚಿಂತನೆಗಳನ್ನು ಸದಾ ನಾವು ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಕ್ರಿಕೆಟ್ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ ಡಾ.ರವಿ ಗೋಲಾ ಮತ್ತು ಸಿಂದಗಿ ನಗರ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಕಾಂಬಳೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಜಿ.ಪಿ.ಪೋರವಾಲ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಸನ್ಮಾನ ಸ್ವೀಕರಿಸಿ ಮಾತನಾಡಿ, ಗೆಳೆತನವೇ ಜೀವನದ ಸಿರಿತನ. ಸಂಕಷ್ಟದಲ್ಲಿ ಸಹಾಯಹಸ್ತ ಚಾಚಿ ಹುಮ್ಮಸ್ಸಿನಿಂದ ಹುರಿದುಂಬಿಸಿ, ರಕ್ತ ಸಂಬಂಧಕ್ಕಿಂತ ಮಿಗಿಲಾದ್ದು ಬೇರೊಂದಿಲ್ಲ ಎನ್ನುವುದಕ್ಕೆ ನಿಜವಾದ ನಿದರ್ಶನವೆಂದರೆ ನನ್ನ ಗೆಳೆಯ ಶಾಸಕ ಅಶೋಕ ಮನಗೂಳಿ ಹಾಗೂ ಇನ್ನಿತರರು. ಇವತ್ತು ಜೀವನದಲ್ಲಿ ನಾನು ಏನಾದರೂ ಸಾಧನೆ ಮಾಡಿದ್ದಾದರೆ ಅದಕ್ಕೆ ನನ್ನ ಈ ಸ್ನೇಹ ಬಳಗವೇ ಶಕ್ತಿ ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಪ್ರಥಮ ದರ್ಜೆಯ ಗುತ್ತಿಗೆದಾರ ಮುತ್ತು ಮುಂಡೇವಾಡಗಿ, ಉದ್ಯಮಿದಾರ ಉಮೇಶ ಜೋಗುರ, ಶಾಂತಪ್ಪ ರಾಣಾಗೋಳ, ಬಸವರಾಜ ಕಲಬುರ್ಗಿ, ದುಂಡಪ್ಪ ಸೋನ್ನದ, ಭೀಮು ಶ್ರಿಗಿರಿ, ರಾಜಶೇಖರ ಕೂಚಬಾಳ, ರಮೇಶ್ ಹೂಗಾರ, ವಾ.ಎನ್.ಪಾಟೀಲ್, ವಿಜು ಪಟ್ಟಣಶೆಟ್ಟಿ, ಬಾಬಾಗೌಡ ಪಾಟೀಲ, ಕಾನಿಪ ಸದಸ್ಯರಾದ ಮಲ್ಲಿಕಾರ್ಜುನ ಅಲ್ಲಾಪುರ, ಸುದರ್ಶನ್ ಜಂಗಣ್ಣಿ, ಶಿವಾನಂದ ಆಲಮೇಲ, ಭೋಜರಾಜ್ ದೇಸಾಯಿ, ನವೀನ್ ಶೆಳ್ಳಗಿ, ಮಹಾಂತೇಶ್ ನೂಲಾನವರ, ಎಸ್.ಎಂ.ಬಿರಾದಾರ, ಪ್ರಕಾಶ ಗುಣಾರಿ, ಮಲ್ಲಿಕಾರ್ಜುನ್ ಹಂಗರಗಿ ಸೇರಿದಂತೆ ಅನೇಕರಿದ್ದರು.

