ಧರ್ಮಸ್ಥಳ ಗ್ರಾಮಾಭಿವೃದ್ದಿಯಿಂದ ೩೯ ಜನರಿಗೆ ಸುಜ್ಞಾನ ಶಿಷ್ಯ ವೇತನ ಮಂಜುರಾತಿ ಪತ್ರ ವಿತರಣೆ
ಇಂಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು, ಶಿಕ್ಷಣಕ್ಕೆ ಒತ್ತು ಕೊಡುತ್ತದೆ, ಈ ಯೋಜನೆಯಿಂದ ಫಲ ಪಡೆದ ತಾವೆಲ್ಲರೂ ಮುಂದೆ ಸಮಾಜಕ್ಕೆ ಒಳ್ಳೆಯ ಕಾರ್ಯಕ್ರಮಗಳನ್ನು ನೀಡಬೇಕು ಮತ್ತು ಉನ್ನತ ಅಧಿಕಾರಿ ಆಗಬೇಕೆಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಆಶಿಸಿದರು
ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಗುರುಭವನ ಸಬಾಭವನದಲ್ಲಿ ಇಂಡಿ ತಾಲೂಕಿನ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಮಂಜೂರಾತಿಯಾಗಿರುವ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಲ್ಲಿ ಸದಸ್ಯರಾಗಿರುವ ಮತ್ತು ವೃತ್ತಿಪರ ಓದುತ್ತಿರುವ ಐ.ಟಿ.ಐ, ನರ್ಸರಿ,ಡಿಪ್ಲೋಮಾ ಸೇರಿದಂತೆ ಇನ್ನಿತರ ವೃತ್ತಿ ಪರ ಕೋರ್ಸು ಮಾಡುತ್ತಿರುವ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ, ಜಿಲ್ಲಾ ನಿರ್ದೇಶಕ ಸಂತೋಷ ಕುಮಾರ್ ರೈ, ತಾಲೂಕಿನ ಯೋಜನಾಧಿಕಾರಿ ನಟರಾಜ ಐ,ಒ, ಮೇಲ್ವಿಚಾರಕಿ ಸರಸ್ವತಿ ಮಾತನಾಡಿದರು.
ಹಣಕಾಸು ಪ್ರಬಂದಕರು, ತಾಲೂಕು ನೂಡಲ್ ಅಧಿಕಾರಿ, ಸೇವಪ್ರತಿನಿಧಿಗಳು, ೩೯ ಜನ ಸುಜ್ಞಾನ ನಿಧಿ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.

