Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಾತ್ವಿಕ ಸಂಪನ್ನ ಅನಂತಪುರ ವೃತ್ತಿ ಕಾಯಕನಿಷ್ಠೆ ಅನಂತ :ರುಳಿ
(ರಾಜ್ಯ ) ಜಿಲ್ಲೆ

ಸಾತ್ವಿಕ ಸಂಪನ್ನ ಅನಂತಪುರ ವೃತ್ತಿ ಕಾಯಕನಿಷ್ಠೆ ಅನಂತ :ರುಳಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನಿವೃತ್ತ ದೈ.ಶಿಕ್ಷಕ ಬಸವರಾಜ ಅನಂತಪುರ ದಂಪತಿಗೆ ಸಂಪ್ರೇಮದ ಸನ್ಮಾನ

ಚಿಕ್ಕಪಡಸಲಗಿ: ಸುಮಾರು 39 ವಸಂತಕಾಲದವರೆಗೆ ದೈಹಿಕ ಶಿಕ್ಷಣದ ವೃತ್ತಿ ಕಾಯಕವನ್ನು ಅತ್ಯಂತ ಶಿಸ್ತು ಬದ್ದತೆಯಿಂದ ಪೂರೈಸಿ ಈಚೆಗೆ ವಯೋಸೇವಾ ನಿವೃತ್ತರಾದ ಬಸವರಾಜ ಅನಂತಪುರ ತಮ್ಮ ಸೇವಾವಧಿಯಲ್ಲಿ ಆದರ್ಶತನದ ಕಾಯಕ ನಿಷ್ಠೆ ಮೆರೆದಿದ್ದಾರೆ. ಅವರ ಶಿಕ್ಷಣ ಪ್ರೇಮದ ಜೀವನ ಮಾದರಿಯಾಗಿದೆ ಎಂದು ಕಲಬುರಗಿ ಆಕಾಶವಾಣಿ, ದೂರದರ್ಶನ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಸೋಮಶೇಖರ ಎಸ್.ರುಳಿ ಶ್ಲಾಘಿಸಿದರು.
ಜಮಖಂಡಿ ನಗರದಲ್ಲಿನ ಬಸವರಾಜ ಅನಂತಪುರ ಅವರ ಸ್ವಗ್ರಹಕ್ಕೆ ತೆರಳಿ ನಿವೃತ್ತರಾದ ಪ್ರಯುಕ್ತ ಬಂಗಾರ ಉಂಗುರದೊಂದಿಗೆ ಸಂಪ್ರೇಮದಿಂದ ಶಾಲು ಹೊದಿಸಿ ಅನಂತಪುರ ದಂಪತಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಅನಂತಪುರ ಗುರುಗಳು ಸಾತ್ವಿಕ ಸಂಪನ್ನರು. ಅವರ ವೃತ್ತಿ ಬದುಕು ಬದ್ದತೆಯ ಹೂರಣದಲ್ಲಿ ನಡೆದಿದೆ. ಹೆಜ್ಜೆ ಗುರುತು ಅನುಪಮವಾಗಿವೆ‌ ಅವರ ಶಿಕ್ಷಣ ರಂಗದ ಜೀವನ ಮಾದರಿಯಾಗಿದೆ. ವೃತ್ತಿಯ ಮೇಲೆ ಹಿಡಿತ ಸಾಧಿಸಿ ಗ್ರಾಮೀಣ ಮಕ್ಕಳಲ್ಲಿ ಕ್ರೀಡೆಗಳ ಅಭಿರುಚಿ ಬೆಳೆಸಿ ಕ್ರೀಡಾ ಸಂಹವನ ಸುಲಭವಾಗಿಸಿದ್ದಾರೆ. ಸಮಾಜಮುಖಿಯಾಗಿ ಬೆರೆಯುವ ವಿಶೇಷ ಗುಣ ಸ್ವಭಾವದ ನಡುವಳಿಕೆಯಿಂದ ಮೆಚ್ಚುಗೆ ಪಾತ್ರರಾಗಿದ್ದಾರೆ. ಎಲ್ಲರನ್ನು ಗೌರವಯುತವಾಗಿ ಕಾಣುವ ಹೃದಯವಂತ ಅನಂತಪುರ ಅವರು ಈ ಇಳಿವಯಸ್ಸಿನಲ್ಲೂ ಶಿಸ್ತುಬದ್ಧ ಪಯಣ ಸಾಗಿಸುತ್ತಿರುವುದು ಇಂದಿನ ಯುವಜನತೆ ಜೀವನಕ್ಕೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಅನಂತಪುರ ಅವರು ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಶಿವಶರಣ ಹರಳಯ್ಯ ಸ್ಮಾರಕ ಹಾಗೂ ಬಳ್ಳಾರಿ ಜಿಲ್ಲೆಯ ಬಾಚಿಗೊಂಡೆನಹಳ್ಳಿ ಕೌದಿ ಮಹಾಂತೇಶ ಪ್ರೌಢಶಾಲೆಯಲ್ಲಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಚಿಕ್ಕಪಡಸಲಗಿ ಶಾಲೆಯಲ್ಲಿ ಈಚೆಗೆ ಸೇವಾ ನಿವೃತ್ತಿಗೊಂಡಿದ್ದಾರೆ. ಅವರು ನಮಗೆ ಆತ್ಮೀಯರಾಗಿದ್ದರಿಂದ ಅಭಿಮಾನದಿಂದ ಪ್ರೀತಿಯ ಸನ್ಮಾನ ಮಾಡಿರುವೆವು. ಅವರು ಸನ್ಮಾನಕ್ಕೆ ಅಭಿನಂದನಾರ್ಹವಾಗಿದ್ದಾರೆ ಎಂದರು.
ಸರಳತೆಯ ನಡೆ-ನುಡಿಗಳ ಆಯಾಮದಿಂದ ಅವರಿಗೆ ಶ್ರೇಯಸ್ಸು ಸಲ್ಲಿವೆ.ಶಾಲಾ ಮಕ್ಕಳ ಮೇಲೆ ಇವರ ಪ್ರಭಾವ ಬೀರಿವೆ. ಬದುಕಿನಲ್ಲಿ ಗುರುವಿನ ಮಹತ್ವ ಅನಂತಪುರ ಅವರು ಸಾರಿದ್ದಾರೆ. ಅವರಲ್ಲಿ ಉತ್ಸುಕತೆಯ ಕ್ರೀಡಾ ತುಡಿತ ಬಲವಾಗಿದೆ. ಲವಲವಿಕೆಯ ಭಾವದೊಂದಿಗೆ ಇಂದಿಗೂ ಚಿರಯುವಕರಂತೆ ಓಡಾಡುತ್ತಾರೆ. ಆರೋಗ್ಯ ಭಾಗ್ಯದ ಸತ್ವತೆ ದೇವರು ಕರುಣಿಸಿದ್ದಾರೆ. ಅವರ ಅವಿರತ ಪರಿಶ್ರಮ ಗಣನೀಯವಾಗಿದೆ. ಯಶಸ್ಸು ಅಗಿದೆ. ಆಸಕ್ತಿದಾಯಕ ಮನೋಭಿಲಾಷೆಯಿಂದ ಸಕಲರ ನಂಬಿಕೆ, ವಿಶ್ವಾಸ ಗಳಿಸಿದ್ದಾರೆ ಎಂದು ಸೋಮಶೇಖರ ರುಳಿ ಅಭಿಪ್ರಾಯಿಸಿದರು.
ನಿಷ್ಕಲ್ಮಶದಿಂದ ಗೈಯುವ ಕಾಯಕಕ್ಕೆ ವಯಸ್ಸು ಅಡ್ಡಿಯಾಗದು. ಶಾಲಾ ಮಕ್ಕಳಿಗೆ ಕ್ರೀಡೆಗಳ ಜೊತೆಗೆ ಉತ್ತಮ ಸಂಸ್ಕಾರ ನೀಡಿದ್ದಾರೆ. ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ವೃತ್ತಿಯನ್ನು ಬಿಟ್ಟು ಬೇರೆನು ಕಂಡಿಲ್ಲ. ವೃತ್ತಿಗೆ ಮೊದಲು ಆದ್ಯತೆ ನೀಡಿದ್ದಾರೆ. ಶಾಲೆ ಮತ್ತು ಮಕ್ಕಳ ಅಭ್ಯುದಯಕ್ಕೆ ಈಗಲು ಆದ್ಯತೆ ನೀಡಿ ಸೇವೆ ಮುಂದುವರೆಸಿಕೊಂಡು ಹೊರಟಿದ್ದಾರೆ.ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯವರು ಈ ಸುದೈವದ ಅವಕಾಶ ಕಲ್ಪಿಸಿರುವುದು ನಿಜಕ್ಕೂ ಸೇವಾಭಾವದ ಕಾಯಕಕ್ಕೆ ಸ್ಪೂರ್ತಿಯಾಗಿದೆ ಎಂದರು.
ಯಾದಗಿರಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಸಹಾಯಕ ಪ್ರಾಧ್ಯಾಪಕಿ ಡಾ,ಶಶಿಕಲಾ ಎಸ್.ರುಳಿ ಮಾತನಾಡಿ, ಮಧ್ಯಮ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಅನಂತಪುರ ಗುರುಗಳು ಕ್ರಿಯಾಶೀಲರು. ವಿಶೇಷ ಪರಿಶ್ರಮ, ಸಮರ್ಪಣೆ ಭಾವ ಹಾಗೂ ಶಿಸ್ತಿನ ವಿಧಾನಗಳ ಮೂಲಕ ಸರಳ,ವಿರಳ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಶಾಲಾ ಮಕ್ಕಳ ಬಗ್ಗೆ ಸದಾ ಕಾಳಜಿ ವಹಿಸಿ ಸೌಜನ್ಯದಿಂದ ನಡೆದು ವೃತ್ತಿ ಘನತೆ ಪಡೆದಿದ್ದಾರೆ. ಸಮಚಿತ್ತದಿಂದ ಸಾರ್ಥಕ ಸೇವೆ ಸಲ್ಲಿಸಿ ಸುಖ್ಯಾಂತದಿಂದ ನಿವೃತ್ತರಾಗಿ ಜೀವನದ ಸೆಲೆಯಲ್ಲಿ ಸಂತೃಪ್ತಿ ನೆಲೆ ಕಂಡಿದ್ದಾರೆ. ಒಳ್ಳೆಯ ಮನಸ್ಸಿನಿಂದ ಮಾಡುವ ಪ್ರತಿಯೊಂದು ಮಾನವೀಯತೆಯ ಕೆಲಸವು ಫಲ ನೀಡುತ್ತದೆ ಎಂಬುದಕ್ಕೆ ಮಾದರಿಯಾಗಿದ್ದಾರೆ. ಆ ದಿಸೆಯಲ್ಲಿ ಅನಂತಪುರ ಗುರುಗಳು ಸಂವೇದನಾ ಸಾಮರ್ಥ್ಯದಿಂದ ಶಿಕ್ಷಣ ರಂಗದ ಕ್ರೀಡಾ ಸತ್ಕಾರ್ಯಗಳನ್ನು ಗೈದು ಸಾಮಾಜಿಕ, ಸಾಮರಸ್ಯ ಕಂಪುಗೊಳಿಸಿದ್ದಾರೆ ಎಂದರು.
ಈ ವೇಳೆ ಭಗವಂತರಾಯ ಆಲಗೊಂಡ,ಕಾಸಪ್ಪ ಅನಂತಪುರ, ಪಾರ್ವತಿ ಅನಂತಪುರ, ವನಿತಕ ಅಗಸಿಬಾಗಿಲ, ಸರೋಜನಿ ಬಿರಾದಾರ, ಅಕ್ಷಯ ಅನಂತಪುರ, ಅಪೂವಾ೯ ಅನಂತಪುರ, ಸಂಗನಗೌಡ ಬಿರಾದಾರ, ಗಾಯತ್ರಿ ಅನಂತಪುರ, ಖುಷಿ ಅನಂತಪುರ, ಆಧ್ಯಾ ಅನಂತಪುರ ಸೇರಿದಂತೆ ಹಲವರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.