ಸಿಂದಗಿ: ಸ್ಥಳೀಯ ವಿದ್ಯಾ ಸಂಸ್ಥೆ P.ಇ.S. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕ ಪಿ.ಎಮ್.ಮಡಿವಾಳರ ರವರು ಕಳೆದ ಡಿಸೆಂಬರ ತಿಂಗಳಲ್ಲಿ ವಿಜಯಪುರ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದ ಸ್ನಾತಕೋತ್ತರ ಪರೀಕ್ಷೆಯ ಇಂಗ್ಲೀಷ್ ಭಾಷಾ ವಿಷಯದಲ್ಲಿ ಉನ್ನತ ದರ್ಜೆಯಲ್ಲಿ ಪಾಸಾಗಿದ್ದಾರೆ.
ಇವರು ತಮ್ಮ ೭೦ನೆ ಇಳಿವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದು ಇಂದಿನ ಯುವಜನಾಂಗಕ್ಕೆ ಮಾದರಿಯಾಗಿದೆ. ಈಗಲೂ ಕೂಡಾ ನಿಯಮಿತವಾಗಿ ಓದುವ, ಬರೆಯುವ ಹವ್ಯಾಸ ಇಟ್ಟಿಕೊಂಡಿರುವುದು ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಿದೆ. ಅದಲ್ಲದೆ ಅಧ್ಯಯನಕ್ಕೆ ಕೊನೆ ಇಲ್ಲೆಂಬುದಕ್ಕೆ ಇವರು ಸಾಕ್ಷಿಕರಿಸಿದ್ದಾರೆ.
ಇವರ ಈ ಸಾಧನೆ ಮೆಚ್ಚಿ ಸಂಸ್ಥೆಯ ಅಧ್ಯಕ್ಷ ಡಾ.ಸಂತೋಷ ಬಿ. ಕರಜಗಿ, ಕಾರ್ಯದರ್ಶಿ ಬಿ.ಪಿ. ಕರಜಗಿ, ಆಡಳಿತ ಅಧಿಕಾರಿ ಆಯ್. ಬಿ. ಬಿರಾದಾರ, ಮಹಾವಿದ್ಯಾಲಯಗಳ ಪ್ರಾಚಾರ್ಯರಾದ ಕಡಣಿ, ಗೋಡಕರ ಹಾಗೂ ಮಾರ್ಗದರ್ಶಕರಾದ ಕೆ.ಎಚ್. ಸೋಮಾಪುರ, ಪ್ರಾಧ್ಯಾಪಕರಾದ ಎಸ್. ವಾಯ್. ಬೀಳಗಿ, ಎಚ್. ಎಸ್. ಬಿರಾದಾರ ಹಾಗೂ ಪ್ರಾಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

