ಮುದ್ದೇಬಿಹಾಳ: ಮಕ್ಕಳ ವರ್ತನೆಯ ಬಗ್ಗೆ ಸದಾ ಗಮನವಿರಬೇಕು ಎಂದು ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಆಯೋಜಿಸಿದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಕೃಷ್ಣ ರಾಧೆಯ ಪಾತ್ರ ಹಾಕಿಸಿ ಪೋಟೊ ತೆಗೆದು ಖುಷಿ ಪಡುವದು ಈ ದಿನಕ್ಕೆ ಮಾತ್ರ ಸೀಮಿತವಾಗವಾಗಬಾರದು. ಪ್ರತಿ ದಿನ ಒಳ್ಳೆಯ ಪುರಾಣ ಪುರುಷರ ಕಥೆಯನ್ನು ಹೇಳುತ್ತಿರಬೇಕು. ಇದರಿಂದ ಸಂಸ್ಕೃತಿ ಭರಿತ ಸದ್ಬಾವನೆಯುಕ್ತ ಜ್ಞಾನ ಒದಗುತ್ತದೆ. ಚಿಕ್ಕಂದಿನಿಂದಲೇ ಉತ್ತಮ ಪ್ರವೃತ್ತಿ ರೂಢಿಸಿಕೊಂಡಲ್ಲಿ ಮನೆಯಿಂದ ಹಿಡಿದು ದೇಶಕ್ಕೆ ಭಾರವಾಗದೆ ಕೀರ್ತಿ ತರುವಂತ ಪ್ರಜೆ ಆಗಲು ಸಾಧ್ಯವಾಗುತ್ತದೆ ಎಂದರು.
ಸಂಸ್ಥೆಯ ನಿರ್ದೇಶಕ ಡಾ. ಪರಶುರಾಮ ಪವಾರ ಅಧ್ಯಕ್ಷತೆ ವಹಿಸಿದ್ದರು.
ಮಾತೃ ಭಾರತಿ ಪರಿಷತ್ತಿನ ಅಧ್ಯಕ್ಷರಾದ ಶ್ರೀದೇವಿ ಪತ್ತಾರ, ಪರಿಷತ್ತಿನ ಕಾರ್ಯದರ್ಶಿ ರಶ್ಮಿ ತೇಲಂಗಿ, ಉಪನ್ಯಾಸಕ ವಿ.ವಿ.ಪಾಟೀಲ, ಶಿಕ್ಷಕರುಗಳಾದ ಎಸ್.ಎಸ್.ಹಂಜಗಿ, ಅನ್ನಪೂರ್ಣ ನಾಗರಾಳ, ಮಂಜುನಾಥ ಪಡದಾಳಿ, ಆರ್.ಜೆ.ಸಾಗರ, ಕೀರ್ತಿ ತಳಗೇರಿ, ಕಿರಣ ಕಡಿ, ಇಂದು ನಾಯಕ, ಶಿವಶಂಕರಯ್ಯ ಮಠ, ಬಿ.ಆರ್.ಬೆಳ್ಳಿಕಟ್ಟಿ, ಲೋಹಿತ ಜೈನಾಪೂರ, ಬಿ.ಟಿ.ಭಜಂತ್ರಿ, ರೂಪಾ ನಾಟಿಕರ, ಭಾಗ್ಯ ಸಿದ್ದಪೂರ, ನೇತ್ರಾ ವಡವಡಗಿ, ವರ್ಷಾ ಹುನಗುಂದ, ತ್ರಿವೇಣಿ ಕುಲಕರ್ಣಿ, ಗುರುಬಾಯಿ ತಂಗಡಗಿ, ಅನ್ನಪೂರ್ಣ ಹೊಸಮನಿ, ಶಾಹೀನ ನಾಲತವಾಡ ಸೇರಿದಂತೆ ಮತ್ತೀತರರು ಇದ್ದರು. ಕಾರ್ಯಕ್ರಮಕ್ಕೂ ಮೊದಲು ಆಂಗ್ಲ ಮಾಧ್ಯಮ ವಿಭಾಗ ಮುಖ್ಯ ಗುರುಮಾತೆ ರಂಜಿತಾ ಹೆಗಡೆ ಮತ್ತು ಗೀತ ಗಾಯನ ತಂಡದವರು ಭಗವದ್ಗೀತೆ ಪಠಿಸಿದರು.
ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸರಸ್ವತಿ ಮಡಿವಾಳರ ಸ್ವಾಗತಿಸಿದರು. ಶಿಕ್ಷಕಿ ಕೀರ್ತಿ ತಳಗೇರಿ ನಿರೂಪಿಸಿದರು. ಬಿ.ಆರ್.ಬೆಳ್ಳಿಕಟ್ಟಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

