ವಿಜಯಪುರ: ಸೋಂದಾ ಸ್ವರ್ಣವಲ್ಲೀಯ ಪೂಜ್ಯಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿಗಳು ಹಮ್ಮಿಕೊಂಡಿರುವ ಭಗವದ್ಗೀತಾ ಅಭಿಯಾನದ ಪ್ರಶಿಕ್ಷಣ ವರ್ಗ ನಗರದ ಶ್ರೀ ಶಂಕರ ಮಠದಲ್ಲಿ ಜರುಗಿತು.
ಮಾತೆಯರು ವಿದ್ಯಾರ್ಥಿನಿಯರನ್ನು ಒಳಗೊಂಡಂತೆ ೮೫ ಜನ ಭಾಗವಹಿಸಿದ್ದರು.
ಸೋಂದಾ ಸ್ವರ್ಣವಲ್ಲೀ ಸಂಸ್ಥಾನದಿಂದ ಮೂವರು ಸಹೋದರಿಯರು ಆಗಮಿಸಿ ಪ್ರಶಿಕ್ಷಣ ನೀಡಿದರು. ಅರುಣ ಸೋಲಾಪುರಕರ್, ಅರುಣ ಶಹಾಪುರ, ಶ್ರೀಹರಿ ಗೊಳಸಂಗಿ, ಶ್ರೀಮತಿ ಡಾಕ್ಟರ್ ಜಯಶ್ರೀ ಮುಂಡೇವಾದಿ, ಶ್ರೀಮತಿ ಭುವನೇಶ್ವರಿ ಕೋರವಾರ ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಶ್ರೀರಾಮ ಭಟ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕರಾದ ಉಮೇಶ ಕಾರಜೋಳ ಅವರು ನೀಡಿದ ಹತ್ತು ಸಾವಿರ ಭಗವದ್ಗೀತೆಗಳನ್ನು ಬಿಡುಗಡೆ ಮಾಡಲಾಯಿತು.
ಶಂಕರ ಮಠದ ಅಧ್ಯಕ್ಷರಾದ ಮಹೇಶ ದೇಶಪಾಂಡೆ, ಅಭಿಯಾನದ ಸಂಘಟನಾ ಕಾರ್ಯದರ್ಶಿ ಸಂಗನಗೌಡ ಪಾಟೀಲ್ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

