ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ೪ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಗುರು ಆರ್.ಸಿ. ರಾಠೋಡ ತಿಳಿಸಿದ್ದಾರೆ.
ಆಯ್ಕೆಯಾದ ವಿದಾರ್ಥಿಗಳು
ಬಾಲಕರ ಕಬಡ್ಡಿ, ಬಾಲಕರ ಖೋ-ಖೋ, ೪೦೦ ಮೀಟರ್ ಓಟ ಭಾಗ್ಯಶ್ರೀ ನಿಂಬಾಳ (ಪ್ರಥಮ), ೬೦೦ ಮೀಟರ್ ಓಟ ಲಕ್ಷ್ಮಿ ಇಂಡಿ (ದ್ವಿತೀಯ), ಗುಂಡು ಎಸೆತ ಸೈಬಣ್ಣ ಮೈದರಗಿ (ಪ್ರಥಮ), ಚಕ್ರ ಎಸೆತ ಸೈಬಣ್ಣ ಮೈದರಗಿ (ಪ್ರಥಮ).
ಇದೇ ಸಂರ್ದದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಜಣ್ಣ ಪಾತಾಳಿ, ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ರಮೇಶ್ ಬಗಲೂರ, ಕೆಜಿಎಸ್ ಶಾಲೆಯ ಮುಖ್ಯ ಗುರುಮಾತೆ ಬಿ.ಎಸ್. ಬಾಸಗಿ, ಯು.ಬಿ.ಎಸ್ ಶಾಲೆಯ ಸುರೇಶ ಚವ್ಹಾಣ, ಎಲ್.ಪಿ.ಎಸ್.ಸೋಲಾಪೂರ ವಸ್ತಿ ಶಾಲೆಯ ರವೀಂದ್ರ ವಾಲೀಕಾರ ಸೇರಿದಂತೆ ಕ್ಲಸ್ಟರ್ ಮಟ್ಟದ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

