ತಾಳಿಕೋಟಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಟಾಪ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಲಿತ ನೌಕರ ಶಶಿಕಾಂತ ಬೆನ್ನೂರ ಇವರ ಆತ್ಮಹತ್ಯೆಗೆ ಕಾರಣಿ ಕರ್ತರಾದ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ವಿವಿಧ ದಲಿತ ಪರ ಸಂಘಟನೆಗಳು ಶುಕ್ರವಾರ ಕರೆದ ತಾಳಿಕೋಟಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿದ್ದ ಶಶಿಕಾಂತ ಬೆನ್ನೂರ ಇವರಿಗೆ ಅಲ್ಲಿಯ ಆಡಳಿತ ಅಧಿಕಾರಿ ವೈದ್ಯ ಹಾಗೂ ಸಿಬ್ಬಂದಿಗಳಾದ ಈರಣ್ಣ ವಡವಡಗಿ ಜ್ಯೋತಿ ಕೋಳೂರಗಿ ಶ್ರೀದೇವಿ ಬಗಲಿ ಇವರು ನೀಡಿದ ಹಿಂಸೆಯನ್ನು ತಾಳದೆ ಜಿಗುಪ್ಸೆಗೊಂಡು ಆಗಸ್ಟ್ ೨೧ ರಂದು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಈ ಘಟನೆಯನ್ನು ಖಂಡಿಸಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟವು ತಾಳಿಕೋಟಿ ಬಂದ್ ಗೆ ಕರೆ ನೀಡಿದ್ದವು. ಬಂದ್ ಅಂಗವಾಗಿ ಮುಂಜಾನೆ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನಾ ಮೆರವಣಿಗೆಯು ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಆರಂಭವಾಗಿ ಕತ್ರಿ ಬಜಾರ್ ಶಿವಾಜಿ ಸರ್ಕಲ್ ರಾಣಾ ಪ್ರತಾಪ್ ಸಿಂಹ ಸರ್ಕಲ್ ಬಸ್ ನಿಲ್ದಾಣ ಮಾರ್ಗವಾಗಿ ಶ್ರೀ ಬಸವೇಶ್ವರ ವೃತ್ತಕ್ಕೆ ತಲುಪಿ ಅಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ ಕೆಲಹೊತ್ತು ರಸ್ತೆ ತಡೆ ಮಾಡಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ಈ ವೇಳೆ ಸಂಘಟನೆಯ ಪ್ರಮುಖರಾದ ಬಸವರಾಜ ಕಟ್ಟಿಮನಿ, ಮಹೇಶ ಚಲವಾದಿ, ರಾವುತ್ ತಳಕೇರಿ, ದೇವೇಂದ್ರ ಹಾದಿಮನಿ ಹಾಗೂ ಗುರು ಗುಡಿಮನಿ ಮಾತನಾಡಿ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಮ್ಮ ಸಮಾಜದ ಶಶಿಕಾಂತ್ ಬೆನ್ನೂರ ಅವರನ್ನು ಅವರ ಸಹ ಸಿಬ್ಬಂದಿಗಳಾದ ಈರಣ್ಣ ವಡವಡಗಿ ಜ್ಯೋತಿ ಕೋಳೂರಗಿ ಶ್ರೀದೇವಿ ಬಗಲಿ ಹಾಗೂ ಆಡಳಿತ ವೈದ್ಯಾಧಿಕಾರಿ ಇವರು ಹಲವಾರು ದಿನಗಳಿಂದ ಮಾನಸಿಕ ಹಿಂಸೆಯನ್ನು ನೀಡಿದ್ದರಿಂದ ಅದನ್ನು ಸಹಿಸದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುವುದರ ಜೊತೆಗೆ ಈ ಮೂವರನ್ನು ಕೂಡಲೇ ಬಂಧಿಸಿ ಅವರಿಗೆ ಕಾನೂನಿನ ಕಠಿಣ ಕ್ರಮಕ್ಕೆ ಒಳಪಡಿಸುವುದು ಮಾತ್ರವಲ್ಲದೆ ಗಲ್ಲು ಶಿಕ್ಷೆಯನ್ನು ನೀಡಬೇಕೆಂದು ಹಾಗೂ ಮೃತ ವ್ಯಕ್ತಿಯ ಕುಟುಂಬಕ್ಕೆರೂ. 50 ಲಕ್ಷ ಪರಿಹಾರ ನೀಡಬೇಕು ಹಾಗೂ ಎಲ್ಲ ದಲಿತ ನೌಕರರಿಗೂ ಇಲಾಖೆಗಳಲ್ಲಿ ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣವನ್ನು ನಿರ್ಮಿಸಬೇಕು ಎಂದು ಆಗ್ರಿಸುತ್ತೇವೆ. ನಮಗೆ ನ್ಯಾಯ ಸಿಗದೇ ಹೋದಲ್ಲಿ ಇದಕ್ಕಿಂತಲೂ ಉಗ್ರವಾದ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ದಲಿತ ಪರ ಸಂಘಟನೆಗಳು ಒಕ್ಕೂಟದ ವತಿಯಿಂದ ತಹಸಿಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ದಲಿತ ಪರ ಸಂಘಟನೆಗಳ ಮುಖ್ಯಸ್ಥರಾದ ಎಸ್. ಬಿ.ಕಟ್ಟಿಮನಿ, ಮುತ್ತಪ್ಪಾ ಚಮಲಾಪೂರ, ಬಸವರಾಜ ಕಟ್ಟಿಮನಿ, ಶಾಂತಪ್ಪ ಚಲವಾದಿ. ದೇವೇಂದ್ರ ಹಾದಿಮನಿ. ರಾವುತ್ ತಳಕೇರಿ, ಗುರು ಗುಡಿಮನಿ, ನಾಗೇಶ್ ಕಟ್ಟಿಮನಿ, ರವಿ ಕಟ್ಟಿಮನಿ, ಶಂಕರ ಕಟ್ಟಿಮನಿ, ಮಾಳಪ್ಪ ಮಾಲಳ್ಳಿ, ಜೈ ಭೀಮ್ ಮುತ್ತಗಿ, ಮಹೇಶ ಚಲವಾದಿ, ಕಾಶಿನಾಥ ಕಾರಗನೂರ, ಸಿದ್ದು ಬಾರಿಗಿಡದ. ಗೋಪಾಲ ಕಟ್ಟಿಮನಿ, ದೇವು ಗೊಟಖಂಡಕಿ, ಬಸವರಾಜ ಬಿಸನಾಳ, ತಮ್ಮಣ್ಣ ಚಮಲಾಪೂರ. ಹುಲಿಲಗೆಪ್ಪ ಚಲವಾದಿ, ಮಹಾಂತೇಶ ಕಟ್ಟಿಮನಿ, ಪರಶುರಾಮ ಕಟ್ಟಿಮನಿ, ಗೌತಮ್ ಪತ್ತೆಪೂರ ಬಸವರಾಜ ಬಡಗಾನೂರ, ಗುರುಪ್ರಸಾದ ಬಿಜಿ, ಬಸವರಾಜ್ ಬಡಿಗೇರ, ವಿಶ್ವನಾಥ್ ಚಲವಾದಿ, ಗೋಪಾಲ್ ಕಟ್ಟಿಮನಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

