ತಾಳಿಕೋಟೆ: ತಾಲ್ಲೂಕಿನ ಬಳಗಾನೂರ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಮಾಜಿಕ ಪರಿಶೋಧನಾ ಸಮಿತಿಯಿಂದ ಪೋಷಕರ ಸಭೆಯನ್ನು ಶುಕ್ರವಾರ ಆಯೋಜಿಸ ನಾವುಲಾಗಿತ್ತು. ಮೂರುದಿನಗಳ ಕಾಲ 2022-23ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚೆ ನಡೆಯಿತು. ಶೌಚಾಲಯ ನಿರ್ವಹಣೆ, ಕುಡಿಯುವ ನೀರಿನ ವ್ಯವಸ್ಥೆ, ಮೈದಾನ, ಕ್ರೀಡಾ ಚಟುವಟಿಕೆ, ಮಧ್ಯಾಹ್ನ ಉಪಹಾರ ಯೋಜನೆ, ಪಾಲಕ-ಪೋಷಕರ ಸಭೆ, ಹಣಕಾಸಿನ ವ್ಯವಹಾರ, ಶಾಲಾ ಮೂಲಭೂತ ಸೌಕರ್ಯ, ಮಕ್ಕಳ ಕೃತಿ ಸಂಪುಟ, ಶಿಕ್ಷಕರ ಕಾರ್ಯ ನಿರ್ವಹಣಾ ತಪಶೀಲನೆ, ಹಾಜರಾತಿ, ವಿಧ್ಯಾರ್ಥಿಗಳ ಮನೆ ಬೇಟಿ ಪಾಲಕರಿಂದ ಅಭಿಪ್ರಾಯ ಸಂಗ್ರಹಣೆ ಜೊತೆ ಶುಕ್ರವಾರ ಎಲ್ಲಾ ಪಾಲಕ ಪೋಷಕರು ಸಭೆ ನಡೆಸಲಾಯಿತು.
ಪಾಲಕ ಪೋಷಕರು ಸಭೆ ಪ್ರಗತಿ ಮತ್ತು ಕುಂದುಕೊರತೆಗಳು, ಮಕ್ಕಳ ಶೈಕ್ಷಣಿಕ ಕುಂದು ಕೊರತೆಗಳು,ಶಾಲಾ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಯಿತು
ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಹ್ಮದಸಾಬ.ಚಂ.ವಾಲಿಕಾರ , ಮುಖ್ಯ ಅತಿಥಿಗಳಾಗಿ ಹಮೀದಾ.ರ.ಮಕಾನದಾರ, ತಾಲೂಕು ಪಂಚಾಯತ್ ತಾಳಿಕೋಟೆ(ನರೇಗಾ)ದ ನೋಡಲ್ ಅಧಿಕಾರಿ ಜಗದೀಶ ಕೋಲಕಾರ, ಪಾರ್ವತಿ ವಡ್ಡರ, ಉರ್ದು ಸಿಆರ್ಪಿ ಗಳಾದ ಜಾವೀದ ಯಾಕೀನ, ಎ.ಎ.ಆಲಮೇಲ, ಎ.ಎಂ.ಬಿದರಿ, ಮತ್ತುಂಸಾಬ ವಾಲಿಕಾರ, ಹುಸೇನಭಾವಾ ಮಕಾನದಾರ, ಇಮಾಮಸಾಬ ಬಾಗವಾನ, ಹಾಸೀಂಶಾ ಮಕಾನದಾರ, ಉಸ್ಮಾನ ಬಾಗವಾನ, ಕಾಲೇಸಾಬ ಶಿರೋಳ, ರಮಜಾನ ಮಕಾನದಾರ, ಬುಡೇಸಾಬ ಮಕಾನದಾರ, ಜಬೀನ ಮಕಾನದಾರ, ಪಾತೀಮಾ ಸಿಕ್ಕಲಗಾರ, ಬಂದಗಿಸಾಹೇಬ ಅವಟಿ ಹಾಗೂ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಶಿಕ್ಷಕ ಎಸ್.ಬಿ.ಬೀರಗೊಂಡ ಸ್ವಾಗತಿಸಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

