ಚಡಚಣ: ವಿದ್ಯಾಥಿಗಳಿಗೆ ಪಾಠ ಎಷ್ಟು ಮುಖ್ಯವೋ, ಆಟೋಟ್ ಸಹ ಅಷ್ಟೆ ಪ್ರಾಮುಖ್ಯವಾದದ್ದು. ಕ್ರೀಡೆಯಿಂದ ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಲು ಕ್ರೀಡೆ ಸಹಕಾರಿಯಾಗುತ್ತದೆ. ಎಲ್ಲ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಎಸ್.ಕೆ ಪಾಟೀಲ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಸ್ ಕೆ ಪಾಟೀಲ್ ಅವರು ಹೇಳಿದರು.
ಚಡಚಣ ತಾಲೂಕಿನ ಶ್ರೀ ಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ಆಯೋಜಿಸಿದ್ದ 2024-25 ನೇ ಸಾಲಿನ ಚಡಚಣ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ, ಅವರು ಪ್ರತಿಯೊಬ್ಬರು ಉತ್ತಮ ಆರೋಗ್ಯದ ಕಡೆ ಗಮನ ಹರಿಸಿದಾಗ ಮಾತ್ರ ದೈಹಿಕವಾಗಿ, ಮಾನಸೀಕವಾಗಿ ಸದೃಡರಾಗಲು ಸಾಧ್ಯ ಎಂದರು.
ಈ ಕ್ರೀಡಾಕೂಟದಲ್ಲಿ ಲೋಣಿ, ಬರಡೋಲ, ಚಡಚಣ, ದೇವರನಿಂಬರಗಿ, ಹಲಸಂಗಿ ಕೇರೂರ, ಧೂಳಖೇಡ, ಮರಗೂರ, ಜಿಗಜೇವಣಿ ಪದವಿ ಪೂರ್ವ ಕಾಲೇಜು ಬಾಲಕ ಮತ್ತು ಬಾಲಕಿ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಎಸ್.ಕೆ ಪಾಟೀಲ್ ಮಹಾವಿದ್ಯಾಲಯ ಪ್ರಾಚಾರ್ಯ ಆರ್.ಕೆ ಪಾಟೀಲ್, ದೈಹಿಕ ಉಪನ್ಯಾಸಕ ಮಂಜುನಾಥ ಝಲ್ಪಿ, ಉಪನ್ಯಾಸಕರಾದ ಸಿ.ಎಂ ಕಲ್ಯಾಣಶೆಟ್ಟಿ, ಎಸ್.ವಿ ನರುಸಣಗಿ, ಸೇರಿ ವಿವಿಧ ಕಾಲೇಜು ಉಪನ್ಯಾಸಕರು ಹಾಗೂ ಸುತ್ತ-ಮುತ್ತಲಿನ ಗ್ರಾಮಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

