ಸಿಂದಗಿ: ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಪ್ರಭುಲಿಂಗ ಶರಣರು ಸಿಂದಗಿಯ ನಟ, ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ “ಬಸವ ಶ್ರೀರಕ್ಷೆ” ನೀಡಿ ಸನ್ಮಾನಿಸಿ ಗೌರವಿಸಿ ಆಶೀರ್ವದಿಸಿದರು.
ಸೋಮವಾರ ನೂಲ ಹುಣ್ಣಿಮೆ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಮತ್ತು ಶಿವಶರಣ ನೂಲಿಯ ಚಂದಯ್ಯನವರ ಜಯಂತಿ ಪ್ರಯುಕ್ತ ಮಾಸಿಕ ೬ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಸನ್ಮಾನಿಸಿದರು.
ಸಹ ಕಲಾವಿದ ಹಾಗೂ ಸಾರಿಗೆ ಇಲಾಖೆಯ ಕೆಎಸ್ ಟಿ ಕಾನ್ಸ್ಟೇಬಲ್ ಈರಣ್ಣ ಹಡಪದ ಅವರಿಗೆ ಸಹ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾರಾಪೂರದ ಮುರಳಿಧರ ಮುತ್ಯಾರು, ಚಿಕ್ಕರೂಗಿಯ ಶರಣ ಈರಣ್ಣ ಶಾಸ್ತ್ರೀಗಳು, ಮಲಕಣ್ಣ ಗೊ ತಳವಾರ, ಸಂಗಣ್ಣ ಬ್ಯಾಕೋಡ, ರಾಷ್ಟ್ರೀಯ ಬಸವದಳ ಮಾಜಿ ಅಧ್ಯಕ್ಷ ಗುರುಪಾದ ತಾರಾಪೂರ, ರವಿರಾಜ ದೇವರಮನಿ, ಕಾನೂನು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ, ನ್ಯಾಯವಾದಿ ಡಿ ಎ ಚನಗೊಂಡ ಅಧ್ಯಕ್ಷತೆ ವಹಿಸಿದ್ದರು.
ಗೋಲಗೇರಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮುರುಗೆಪ್ಪಗೌಡ್ರು ಸಿ ರುದ್ದೇವಾಡಗಿ, ಜಗದೀಶ ಕಲಬುರಗಿ, ಬಿಜೆಪಿ ಮುಖಂಡ ಮುತ್ತು ಶಾಬಾದಿ ಬ್ಯಾಕೋಡ, ಸಿಂದಗಿ ಹ.ಅ.ಸ.ಸೇ.ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೆ ಮೂಲಿಮನಿ, ಮಿರಗಿ ಬಸವ ಕೇಂದ್ರ ಅಧ್ಯಕ್ಷ ಡಾ.ದೇವೆಂದ್ರ ಸೋ ಬರಡೋಲ, ಬಾಬುಗೌಡ ಮ ಬಿರಾದಾರ, ಕಾಶಿನಾಥ ಅ ತೆಲಸಂಗ, ವಿಠ್ಠಲ ಹ ಅರ್ಜುಣಗಿ, ಹಿರೆಬೇವನೂರ ಮಾಜಿ ಸೈನಿಕ ಶ್ರೀಶೈಲ ಹ ಅರ್ಜುಣಗಿ, ಇಂಡಿ ತಾಲೂಕಾ ಕನ್ನಡಿಗರ ವಿಜಯಸೇನೆ ಅಧ್ಯಕ್ಷ ಈರಣ್ಣ ಸುರೇಶ ನಾವಿ,
ಶ್ರೀ ಮಠದ ಕಮಿಟಿ ಸದಸ್ಯರು ಹಾಗೂ ಹಿಕ್ಕನಗುತ್ತಿ ಗ್ರಾಮದ ಸಮಸ್ಥ ಸದ್ಭಕ್ತರು ಸೇರಿದಂತೆ ಭಕ್ತರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

