ವಿಜಯಪುರ: ೨೦೨೪-೨೫ನೇ ಸಾಲಿಗಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ, ಅರೆ ಅಲೆಮಾರಿ, ಪ್ರವರ್ಗ-೧ರ ವಿದ್ಯಾರ್ಥಿಗಳಿಂದ ಅರ್ಹ ಪಿಯುಸಿ ಮತ್ತು ಸಮಾನಾಂತರ, ಸಾಮಾನ್ಯ ಪದವಿ ಮತ್ತು ಸಂಯೋಜಿತ ಉಭಯ ಪದವಿ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ- ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳುhttps://ssp.postmatric.karnataka.gov.in ನಲ್ಲಿ ಸೆಪ್ಟೆಂಬರ್ ೧೫ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೮೦೫೦೭೭೦೦೦೫ ಅಥವಾ ವೆಬ್‌ಸೈಟ್ https:bcwd.karnataka.gov.inವೀಕ್ಷಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
