ಕೆಂಭಾವಿ: ಪಟ್ಟಣದ ವಿವಿಧೆಡೆಗಳಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತರತ್ನ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ, ಪುಷ್ಪಾರ್ಚನೆಯೊಂದಿಗೆ ದೇಶದ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಪುರಸಭೆ ಕಾರ್ಯಾಲಯದಲ್ಲಿ, ಮುಖ್ಯಾಧಿಕಾರಿ ಮಹ್ಮದ್ ಯುಸೂಫ್. ನಾಡ ಕಛೇರಿಯಲ್ಲಿ ಉಪತಹಸೀಲ್ದಾರ್ ಪ್ರವೀಣಕುಮಾರ ಸಜ್ಜನ್. ಪೋಲೀಸ್ ಠಾಣೆಯಲ್ಲಿ ಪಿಎಸ್ಐ ಅಮೋಜ್ ಕಾಂಬಳೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ ಗಿರೀಶ್ ಕುಲ್ಕರ್ಣಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ಪ್ರೊ ನಾಗಪ್ಪ ಚಾವಲ್ಕರ್. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ವೀರೇಂದ್ರ ಧರಿ. ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ, ಕೆ ಆರ್ ಪಾಟೀಲ್. ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಠ್ಠಲ ಚೌವ್ಹಾಣ್. ವಿವಿಎಸ್ ಬ್ಯಾಂಕ್ನಲ್ಲಿ, ಅಧ್ಯಕ್ಷ ರಾಮನಗೌಡ ವಂದಗನೂರು ಯಾಳಗಿ. ವಿಪ್ರಾಗ್ರಾಕೃ ಸಹಕಾರಿಯಲಿ ಅಧ್ಯಕ್ಷ ಮುದಿಗೌಡ ಪಾಟೀಲ್. ಕೆಂಭಾವಿ-2 ಸಹಕಾರಿ ಸಂಘದಲ್ಲಿ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ್. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿಯಲಿ, ನಿರ್ದೇಶಕ ಎಸ್ ವೈ ಕರಡಕಲ್. ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ ನಾಗಪ್ಪ ಚಾವಲ್ಕರ್ ಮಾತನಾಡಿ ತ್ಯಾಗ ಬಲಿದಾನದ ಮೂಲಕ ಗಳಿಸಿಕೊಂಡ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಉದಾತ್ತ ವಿಚಾರಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು. ಉಪನ್ಯಾಸಕರಾದ ಡಾ ಬಸಮ್ಮ ಎಸ್, ನಸ್ರೀನ್ ತಾಜ್, ಡಾ ಪೂಜ್ಯಾ ಹೊನ್ನುಟಗಿ, ಡಾ ಸಿದ್ದಲಿಂಗ ರಾಠೋಡ್, ಗುಲಾಂ ಮೈಹಿಬೂಬಸಾಬ್, ಡಾ ಯಂಕನಗೌಡ ಎಸ್, ಶರಣಪ್ಪ ನಡಕೂರ, ಸಂಗಪ್ಪ ಪಟ್ಟಣಕರ್ ಮಾಸುಮ ಅಲಿ ನಾಶಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

