ವಿಜಯಪುರ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಹರ್-ಘರ್ ತಿರಂಗಾ ಅಭಿಯಾನದಡಿ ಐತಿಹಾಸಿಕ ಗೋಲಗುಮ್ಮಟದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮ್ಯಾರಥಾನ್, ಸೈಕಲ್ ಜಾಥಾ ಹಾಗೂ ಗಾಂಧೀ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಯಿತು.
ಈ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಾಥಾ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ.ಸಿ.ಕೆ. ಹೊಸಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ಕ್ರಿಡಾ ಇಲಾಖೆಯ ಎಸ್. ಬಿ. ಕಡಕಲ್, ತರಬೇತುದಾರರಾದ ರಾಜು ಚವ್ವಾಣ, ಅಲ್ಕಾ ಫಡತಾರೆ, ರಮೇಶ ರಾಥೋಡ, ಯಲ್ಲಪ್ಪ ಜುಂಪಲೆ, ಸಾಲುದ್ದಿನ ಮಳಗಿ, ರಫಿಕ್ ನಧಾಫ್, ಶಂಕರ ಸಣ್ಣಪ್ಪ, ಬಸವರಾಜ ಬೆಳ್ಳುಬ್ಬಿ, ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

