– ಸಂಪದಾ ಹಿರೇಮಠ
ಆಲಮಟ್ಟಿ :ಪವಿತ್ರ ಶ್ರಾವಣ ಮಾಸದಲ್ಲಿ ಬರುವ ವೈವಿಧ್ಯ ಹಬ್ಬಗಳು ಮಹಿಳಾ ಲೋಕದ ಅಚ್ಚುಮೆಚ್ಚಿನ ಹಬ್ಬಗಳಾಗಿವೆ. ಅದರಲ್ಲೂ ಪ್ರಿಯವಾದ ಹಬ್ಬ ನಾಗರ ಪಂಚಮಿ. ಈ ಹಬ್ಬದ ಸಂಭ್ರಮ ಕೃಷ್ಣೆಯ ತಟದಲ್ಲಿ ಶುಕ್ರವಾರ ಕಳೆಗಟ್ಟಿತ್ತು.
ಆಲಮಟ್ಟಿಯಲ್ಲಿಂದು ನಾಗರ ಪಂಚಮಿ ಹಬ್ಬವನ್ನು ಮಹಿಳೆಯರು ಸಡಗರ,ಸಂಭ್ರಮದಿಂದ ಆಚರಿಸಿ ಭಕ್ತಿ,ಭಾವದ ಧನ್ಯತೆ ಮೆರೆದರು.
ವಿವಿಧೆಡೆ ವಿಶೇಷವಾಗಿ ಮಹಿಳೆಯರು ಕುಟುಂಬದ ಸದಸ್ಯರೊಂದಿಗೆ ಪುಟ್ಟ ಮಕ್ಕಳು ಹಾಗೂ ನೆರೆಹೊರೆಯವರ ಆತ್ಮೀಯ ಒಡನಾಡಿಗಳ ಜೊತೆಗೂಡಿ ದೇಗುಲಗಳಿಗೆ ತೆರಳಿ ಪೂಜೆ, ಪುರಸ್ಕಾರ ಸಲ್ಲಿಸಿದರು. ಖುಷಿಭಾವದಲ್ಲಿ ಭಕ್ತಿ ನಮನ ಸಲಿಸಿದರು. ಶುಚಿಯಾಗಿ,ನಯವಾಗಿ ನಾಗದೇವನಿಗೆ ಶ್ರದ್ಧೆ ಭಕ್ತಿಯಿಂದ ಹಾಲೆರೆದು ನಮಿಸಿದರು. ನಾಗರ ಪ್ರತಿಮೆಗಳಿಗೆ, ಹುತ್ತುಗಳಿಗೆ ಹಾಲು ಎರೆದು ನೈವೇದ್ಯ ಸಲ್ಲಿಸಿ ಪೂಜಿಸುತ್ತಿರುವ ದೃಶ್ಯ ಕಂಡುಬಂತು. ಡ್ಯಾಂ ಸೈಟ್ ಸರ್ಕಲ್ ನಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರಿನ ರಸ್ತೆ ಪಕ್ಕದಲ್ಲಿರುವ ಗಿಡವೊಂದರ ಬಳಿ ಹುಲುಸಾಗಿದ್ದ ನಾಗದೇವನ ಹುತ್ತಕ್ಕೆ ಪಲ್ಲವಿ ಜಮಾದಾರ, ಪೂಜಾ ಪಂಗರಗಾ ಸೇರಿದಂತೆ ಗ್ರಾಮದ ಅನೇಕ ಮಹಿಳೆಯರು ಹಾಲೆದು ಪೂಜೆ ಸಲ್ಲಿಸಿದರು.
ಆಣೆಕಟ್ಟು ವಸಾಹತುನಲ್ಲಿನ ಅಶ್ವಥ್ ನಾರಾಯಣ ಮಂದಿರ ಬಳಿ ನಾಗದೇವನಿಗೆ ಎಂಎಚ್‌ಎಂ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆ ಮುಖ್ಯ ಗುರುಮಾತೆ ಶ್ರೀಮತಿ ತನುಜಾ ಅಳ್ಳೊಳ್ಳಿ(ಪೂಜಾರಿ) ತಮ್ಮ ತಾಯಿ ಶ್ರೀಮತಿ ಬಸಮ್ಮ ಪೂಜಾರಿ ಅವರೊಂದಿಗೆ ಶ್ರೀಮತಿ ಸುಪ್ರೀತಾ ಪೂಜಾರಿ,ಕುಮಾರಿ ಶ್ರೀನಿತಿ ಜೊತೆಯಲ್ಲಿ ಹಾಲೆರೆದು ನೈವೇದ್ಯ ಸಮರ್ಪಿಸಿದರು.
ನಾಗರ ಪಂಚಮಿ ಹಬ್ಬದ ಮೆರಗಿನಲ್ಲಿ ಮಹಿಳೆಯರ ದಂಡು ಭಕ್ತಿಭಾವಬಂಧದಲ್ಲಿ ತೇಲಿದವು, ಅನ್ಯೋನ್ಯತೆ ಸಂಪ್ರೇಮ ಬಾಂಧವ್ಯದ ಪ್ರತಿಬಿಂಬಗಳು ಮಿನುಗಿದವು. ಜೀವನ ಜೋಕಾಲಿ ಜೀಕುವು ನಳನಳಿಸಿ ಖುಷಿ,ಸಂತಸ ವೃದ್ಧಿಸಿತು. ಬಗೆಬಗೆಯ ಕುರುಕಲ ತಿಂಡಿ,ತಿನಿಸುಗಳು ಅಕ್ಕಪಕ್ಕದ ನೆರೆಹೊರೆ ಮನೆ, ಮನಗಳಲ್ವಿನಿಮಯಗೊಂಡು ಹಬ್ಬದ ಸಾಮರಸ್ಯ ಪವಿತ್ರಗೊಳಿಸಿದವು.ವಿವಿಧ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಪುನೀತಭಾವದಿಂದ ಬೆಳಿಗ್ಗೆಯಿಂದಲೇ ನೆರವೇರಿದವು.
Subscribe to Updates
Get the latest creative news from FooBar about art, design and business.
Related Posts
Add A Comment

