Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

“ವಿಬಿ ಜಿ ರಾಮ ಜಿ” ಕುರಿತು ಮನೆ ಮನೆಗೂ ಮಾಹಿತಿ ಒದಗಿಸಿ

ಉತ್ತಮ ಜೀವನಶೈಲಿ ಮೂಲಕ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ

ಪ್ರಾಣಿ ಪ್ರೀತಿಯ ಸಂದೇಶ ಸಾರಿದ ತದ್ದೇವಾಡಿ ಗ್ರಾಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅಪರಾಧ ಜಗತ್ತಿಗೆ ಕಡಿವಾಣ ಹಾಕಲು ಮಾಹಿತಿ ನೀಡಿ :ಸಿಪಿಐ ಡಪ್ಪಿನ
(ರಾಜ್ಯ ) ಜಿಲ್ಲೆ

ಅಪರಾಧ ಜಗತ್ತಿಗೆ ಕಡಿವಾಣ ಹಾಕಲು ಮಾಹಿತಿ ನೀಡಿ :ಸಿಪಿಐ ಡಪ್ಪಿನ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂಡಿ: ಕಾನೂನು ಸಮುದ್ರದಷ್ಟೆ ವಿಶಾಲ. ಮೂಲಭೂತದಲ್ಲಿ ನೀರು ಎಷ್ಟು ಮುಖ್ಯವೋ..! ಕಾನೂನು ಅರಿವು ಅಷ್ಟೇ ಮುಖ್ಯ ಎಂದು ಗ್ರಾಮೀಣ ಪೋಲಿಸ್ ಠಾಣಾ ಸಿಪಿಐ ಎಮ್ ಎಮ್ ಡಪ್ಪಿನ ಹೇಳಿದರು.
ಪಟ್ಟಣದ ಪ್ರತಿಷ್ಠಿತ ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಆಶ್ರಯದಲ್ಲಿ ಆಯೋಜಿಸಿದ್ದ “ಕಾನೂನು ಅರಿವು- ನೆರವು” ಕಾರ್ಯಕ್ರಮಕ್ಕೆ ಸಸಿ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ದೃಢ ಸಂಕಲ್ಪ ಮಾಡಿ ವಿದ್ಯಾಭ್ಯಾಸ ಮಾಡಬೇಕು ಹಾಗೂ ಕಾನೂನಿನ ಅರಿವು ಹೊಂದಿರಬೇಕು. ಪೋಕ್ಸೊ ಕಾಯ್ದೆ, ಮಾದಕ ವಸ್ತುಗಳ ಸೇವನೆ ಮಾರಾಟ ನಿಯಂತ್ರಣ ನಿಷೇಧ, ಮಕ್ಕಳ ಸಹಾಯವಾಣಿ 1098, ತುರ್ತು ಸಂದರ್ಭದಲ್ಲಿ 112 ಮತ್ತಿತರ ವಿಷಯಗಳ ಕುರಿತು ತಿಳಿಸಿದರು. ನಿತ್ಯ ಜೀವನಕ್ಕೆ ಬೇಕಾದ ಕಾನೂನು ತಿಳಿವಳಿಕೆ ಎಲ್ಲರಿಗೂ ಅಗತ್ಯ. ತಾಯಿ ಗರ್ಭದಿಂದ ಸಾಯುವವರೆಗೂ ಕಾನೂನುಗಳ ಅವಶ್ಯಕತೆ ಇದ್ದು, ಕಾನೂನು-ಕಾಯ್ದೆಗಳ ಬಗ್ಗೆ ಅಸಡ್ಡೆ ತೋರಬಾರದು ಎಂದು ಹೇಳಿದರು. ಕಾನೂನಿನ ಅರಿವು ಇರುವವರು ಶೋಷಣೆಯಿಂದ ತಪ್ಪಿಸಿಕೊಳ್ಳುತ್ತಾರೆ. ಕಾನೂನು ತಿಳಿಯದವರು ಸದಾ ಶೋಷಣೆಗೆ ಒಳಪಡುತ್ತಾರೆ. ಮಹಿಳೆಯರು ಸದಾ ಶೋಷಣೆಗೆ ಒಳಪಡುವ ವರ್ಗವಾಗಿದೆ. ಇದು ಸಲ್ಲದು ಎಂದು ಹೇಳಿದರು.
ಸರ್ವರಿಗೂ ಸಮಬಾಳು, ಸಮಪಾಲು ಎನ್ನುವಂತೆ ಕಾನೂನುಗಳು ರಚನೆಯಾಗಿವೆ. ಕಾನೂನು ಪ್ರಕಾರ ಲಂಚ ಕೊಡುವುದು ಹಾಗೂ ಲಂಚ ತೆಗೆದುಕೊಳ್ಳುವುದು ಎರಡೂ ತಪ್ಪು. ಆದರೆ ಈ ಎರಡೂ ಅಂಶಗಳು ಸಮಾಜದಲ್ಲಿ ಗೊತ್ತಿಧ್ದೋ ಗೊತ್ತಿಲ್ಲದೆಯೋ ನಡೆಯುತ್ತಿವೆ. ಸಾಮಾನ್ಯ ಜನರು ಎಚ್ಚೆತ್ತುಗೊಳ್ಳಬೇಕು ಎಂದು ಹೇಳಿದರು. ಪೋಲಿಸ್ ಹಾಗೂ ಆರೋಗ್ಯ ಇಲಾಖೆ ಅನ್ಯೋನ್ಯ ಸಂಬಂಧ ಹೊಂದಿವೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಾಗೂ ಸುತ್ತಮುತ್ತ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದಾಗ ಅಪರಾಧ ‌ಜಗತ್ತಿಗೆ ಕಡಿವಾಣ ಹಾಕಲು ಸಾಧ್ಯೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಎಸ್ ಬಿ ಕೆಂಬೋಗಿ‌ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಧ್ಯಾರ್ಥಿಗಳು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲೆಂದು ಒಳ್ಳೆಯ ಅತ್ಯುತ್ತಮ ಕಾಲೇಜಿನಲ್ಲಿ ಲಕ್ಷಗಟ್ಟಲೆ ಹಣ ವ್ಯಯ ಮಾಡಿ ಶಿಕ್ಷಣ ಕೊಡಿಸುತ್ತಾರೆ. ಅಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. 12 ನೇ ಶತಮಾನದಲ್ಲಿ ಪೋಲಿಸ್ ಅಥವಾ ಪೋಲಿಸ್ ಠಾಣೆಗಳು ಇರಲಿಲ್ಲ. ಆದರೆ ಸಮಾಜವನ್ನು ತಿದ್ದುವ ಬದಲಾವಣೆ ಮಾಡುವ ಕಾಯಕ ಶರಣರು, ಸಂತರು, ದಾಸರು, ಸಮಾಜ ಸುಧಾರಕರು ‌ಮಾಡುತ್ತಿದ್ದರು. ಆದರೆ ಇಂದಿನ ಸಮಾಜದಲ್ಲಿ ಯುವಕರು ಕೆಟ್ಟ ಹವ್ಯಾಸಗಳಿಂದ ದುಷ್ಟಗಳಿಂದ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅರ್ಥ ಮಾಡಿಕೊಳ್ಳಿ ನಮ್ಮ ಸಮಾಜದ ಸ್ವಾಸ್ಥ್ಯವನ್ನು ನಾವೇ ಹಾಳು ಮಾಡುತ್ತಿದ್ದೆವೆ. ಅದಕ್ಕೆ ಒಳ್ಳೆಯ ದೃಡ ಸಂಕಲ್ಪ ಮಾಡಿ ಇಂದಿನಿಂದಲೇ ಉತ್ತಮ ಸಮಾಜದ ನಿರ್ಮಾಣದಲ್ಲಿ ನಮ್ಮ ವಿಧ್ಯಾರ್ಥಿ ಪಾತ್ರವು ಅತೀ ಮುಖ್ಯ ಎಂದು ಹೇಳಿದರು.
ವೇದಿಕೆ ಮೇಲೆ‌ ಅತಿಥಿಯಾಗಿ ಪತ್ರಕರ್ತ ಶಂಕರಲಿಂಗ ಜಮಾದಾರ, ಉಪನ್ಯಾಸಕರ ಮಹಾಂತೇಶ ಪಾಟೀಲ, ಎಕ್ಸಲೆಂಟ್ ಪ್ರಾಥಮಿಕ ಶಾಲೆಯ ಮುಖ್ಯ ಗುರು ಶ್ರೀಶೈಲ ಹೂಗಾರ ಹಾಗೂ ಕಾಲೇಜು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ವಾಗತ ಶಿಕ್ಷಕಿ ರಾಣಿ ಪತ್ತಾರ, ನಿರೂಪಣೆ ಹಾಗೂ ವಂದನಾರ್ಪಣೆ ಶೋಬಾ ಸಾರವಾಡ ನೆರೆವರಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

“ವಿಬಿ ಜಿ ರಾಮ ಜಿ” ಕುರಿತು ಮನೆ ಮನೆಗೂ ಮಾಹಿತಿ ಒದಗಿಸಿ

ಉತ್ತಮ ಜೀವನಶೈಲಿ ಮೂಲಕ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ

ಪ್ರಾಣಿ ಪ್ರೀತಿಯ ಸಂದೇಶ ಸಾರಿದ ತದ್ದೇವಾಡಿ ಗ್ರಾಮ

ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • “ವಿಬಿ ಜಿ ರಾಮ ಜಿ” ಕುರಿತು ಮನೆ ಮನೆಗೂ ಮಾಹಿತಿ ಒದಗಿಸಿ
    In (ರಾಜ್ಯ ) ಜಿಲ್ಲೆ
  • ಉತ್ತಮ ಜೀವನಶೈಲಿ ಮೂಲಕ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ
    In (ರಾಜ್ಯ ) ಜಿಲ್ಲೆ
  • ಪ್ರಾಣಿ ಪ್ರೀತಿಯ ಸಂದೇಶ ಸಾರಿದ ತದ್ದೇವಾಡಿ ಗ್ರಾಮ
    In (ರಾಜ್ಯ ) ಜಿಲ್ಲೆ
  • ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಬೆಳೆ ಹಾನಿ ಸಂದರ್ಭ ರೈತರಿಗೆ ಆರ್ಥಿಕ ಭದ್ರತೆ ಒದಗಿಸಲು ಬೆಳೆ ವಿಮೆ ಅಗತ್ಯ
    In (ರಾಜ್ಯ ) ಜಿಲ್ಲೆ
  • ಅದಿವಾಸಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು :ಸಿ.ಎನ್.ರಾಜು
    In (ರಾಜ್ಯ ) ಜಿಲ್ಲೆ
  • ಮಗಳ ಜನ್ಮದಿನಕ್ಕೆ ಕಲಿಕೋಪಕರಣ ವಿತರಿಸಿದ ಯೋಧ
    In (ರಾಜ್ಯ ) ಜಿಲ್ಲೆ
  • ತಿಕೋಟಾದಲ್ಲಿ ನೀರಾವರಿ ಯೋಜನೆ ಹೊಸ ಕಚೇರಿಗಳ ಪ್ರಾರಂಭಕ್ಕೆ ಆದೇಶ
    In (ರಾಜ್ಯ ) ಜಿಲ್ಲೆ
  • ಎ.ವಿ.ಎಸ್. ಆಯುರ್ವೇದ ಕಾಲೇಜಿಗೆ ಸತತ ೨ನೇ ಸಲ ೪ನೇ ರ‌್ಯಾಂಕ್
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.