ಬಸವನಬಾಗೇವಾಡಿ: ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ ಹಾಗೂ ವಿಜಯಪುರದ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ಮಂಗಳವಾರ ಡೆಂಗ್ಯೂ,ಮಲೇರಿಯಾ ರೋಗದ ಅರಿವು ಮೂಡಿಸುವ ಜಾಗೃತಿ ಜಾಥಾ ಕಾರ್ಯಕ್ರಮ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಜಾಥಾದಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ರೋಗ ಹರಡುವ ಬಗ್ಗೆ, ಮುನ್ನಚ್ಚರಿಕೆ ಕ್ರಮ ಸೇರಿದಂತೆ ಜನಜಾಗೃತಿ ಮೂಡಿಸಲಾಯಿತು.
ಮಹಾವಿದ್ಯಾಲಯದ ಮುಂಭಾಗ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಜಾಥಾಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ರವೀಂದ್ರಗೌಡ ಪಾಟೀಲ, ಜಯರಾಯ ಡಾವಣಗೇರಿ, ಪ್ರೊ.ಡಿ.ಎಸ್.ಲಗಳಿ, ಪ್ರೊ.ಡಿ.ಎನ್.ಕೊನಂತಲಿ, ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ.ವೈ.ಬಿ.ನಾಯಕ, ಪ್ರೊ.ವ್ಹಿ.ಎನ್.ರಜಪೂತ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

