ಕೆಂಭಾವಿ: ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಾದಗಿರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ, ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ -2024, ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ, ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ, ಮುಖಂಡ ಭೀಮಣ್ಣ ಮೇಟಿ, ಹಾಸ್ಯ ಕಲಾವಿದ ಬಸವರಾಜ ಮಾಮನಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಕಾರ್ಯದರ್ಶಿ ಮಹೇಶ ಕಲಾಲ ಹಾಗೂ ವಾರ್ತಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ, ಪಟ್ಟಣದ ಉತ್ಸಾಹಿ ಯುವಕ, ವಿಜಯ ಕರ್ನಾಟಕ ಪತ್ರಿಕೆ ವರದಿಗಾರ, ಡಿ ಸಿ ಪಾಟೀಲ್ “ಜಿಲ್ಲಾ ಮಟ್ಟದ ಉತ್ತಮ ವರದಿಗಾರ ಪ್ರಶಸ್ತಿ” ಯನ್ನು ಸ್ವೀಕರಿಸಿದರು.
ಈ ವೇಳೆ ಪತ್ರಕರ್ತರಾದ ಪವನ ಕುಲ್ಕರ್ಣಿ, ವಿಜಯಾಚಾರ್ಯ ಪುರೋಹಿತ, ಗುಂಡಭಟ್ಟ ಜೋಶಿ, ಗಿರೀಶ ಬ್ಯಾಕೋಡ್, ಹಿರಿಯರಾದ ಸಂಗಣ್ಣ ತುಂಬಗಿ, ನಂದಪ್ಪ ಕವಲ್ದಾರ, ಸೂಗುರಯ್ಯ ಇಂಡಿ, ಪರಶುರಾಮ ನಾರಾಯಣಕರ್, ಶಿಕ್ಷಕ ಬಂದೇನವಾಜ್ ನಾಲತವಾಡ, ದೇವು ಯಾಳಗಿ, ದೇವು ಶಹಾಪುರ, ಸೇರಿದಂತೆ ಅನೇಕರು ಜಿಲ್ಲಾ ಕೇಂದ್ರದಲ್ಲಿಯೇ, ಉಪಸ್ಥಿತರಿದ್ದು. ಪ್ರಶಸ್ತಿ ಪುರಸ್ಕೃತ ಡಿ ಸಿ ಪಾಟೀಲರನ್ನು ಸನ್ಮಾನಿಸಿ, ಹರ್ಷ ವ್ಯಕ್ತಪಡಿಸಿ ಶುಭಹಾರೈಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

