ವಿಜಯಪುರ: ನಗರದಲ್ಲಿ ಜಿಲ್ಲಾ ಕುರಬ ನೌಕರ ಸಂಘ ವಿಜಯಪುರ ಇವರಿಂದ ಪ್ರತಿ ವರ್ಷದಂತೆ ಈ ವರ್ಷವು ೨೦೨೩-೨೦೨೪ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ & ದ್ವಿತೀಯ ಪಿ.ಯು.ಸಿ. ಅತಿ ಹೆಚ್ಚು ಅಂಕ ಪಡೆದ ವಿಜಯಪುರ ಜಿಲ್ಲೆಯ ಎಲ್ಲ ಹಾಲುಮತ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಹೊಸದಾಗಿ ಸೇವೆಗೆ ಸೇರಿದ ನೌಕರರರಿಗೆ ಹಾಗೂ ವಯೋನಿವೃತ್ತಿ ಹೊಂದಿದ ನೌಕರರ ಅಭಿನಂದನಾ ಸಮಾರಂಭ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಹಾಲುಮತ ನೌಕರರ ಸಂಘ ಸಂಸ್ಥಾಪಕ ಚಂದ್ರಶೇಖರ ಬಗಲಿ ಮಾತನಾಡಿ, ಪ್ರತಿ ವರ್ಷವು ಜಿಲ್ಲಾ ಕುರುಬರ ಸಂಘದ ವತಿಯಿಂದ ಕುರುಬರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿರುವುದು ಅತೀವ ಸಂತಸವನ್ನುಂಟು ಮಾಡಿದೆ. ಇಂತಹ ಪುರಸ್ಕಾರದಿಂದ ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುತ್ತದೆ. ಹಾಗೂ ಸಮಾದ ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿಯು ತಮ್ಮ ಶೈಕ್ಷಣಿಕ ಜೀವನದಲ್ಲಿ ಉನ್ನತ ಮಟ್ಟದಿಂದ ಉನ್ನತವಾದ ಹುದ್ದೆ ಅಲಂಕರಿಸಲು ಸಹಕಾರಿಯಾಗುತ್ತದೆ. ಹಾಗೂ ವಿದ್ಯಾರ್ಥಿಗಳು ಸಹ ಇಂದಿನ ಜಾಲತಾಣಗಳ ಕಡೆಗೆ ಹೆಚ್ಚಿನ ಗಮನ ನೀಡದೇ ತಮ್ಮ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಜಯಪುರ ನಗರ ಮದ್ಯ ಭಾಗದಲ್ಲಿ ಸಂತ ಶ್ರೇಷ್ಠ ಕನಕದಾಸರ ಭವ್ಯ ಪುತ್ತಳಿ ನಿರ್ಮಾಣವಾಗಲು ಕಾರಣಿಕರ್ತರಾದ ವಿಜಯಪುರ ನಗರ ಘಟಕದ ಕುರುಬ ಸಂಘದ ಪದಾಧಿಕಾರಿಗಳಾದ ರಾಜು ಕಗ್ಗೊಡ ಅಧ್ಯಕ್ಷರು, ಸುರೇಶ ಡೊಂಬಾಳೆ ಖಜಾಂಚಿ, ಮಾಂತೇಶ ಬೇವೂರ ಉಪಾಧ್ಯಕ್ಷ, ರಮೇಶ ಕಾಲೇಬಾಗ, ಕಾರ್ಯದರ್ಶಿ, ಮಹಾಂತೇಶ ಗುಗದಡ್ಡಿ ಅಹಿಂದ ಅಧ್ಯಕ್ಷ ತಿಕೋಟಾ ಇವರಿಂದ ವಿಜಯಪುರ ಜಿಲ್ಲಾ ಕುರಬ ಹಾಲುಮತ ನೌಕರ ಸಂಘ ಸ್ಥಾಪನೆಯಾಗುವಲ್ಲಿ ಕಾರಣಿಕರ್ತರಾದ ಚಂದ್ರಶೇಖರ ಬಗಲಿ ಸಂಸ್ಥಾಪಕ, ನಿಕಟಪೂರ್ವ ಅಧ್ಯಕ್ಷರು ಹಾಗೂ ಹಾಲಿ ಅಧ್ಯಕ್ಷರಾದ ಹಣಮಂತ ಸಂಖ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
Subscribe to Updates
Get the latest creative news from FooBar about art, design and business.
ವಿದ್ಯಾರ್ಥಿಗಳು ಜಾಲತಾಣಗಳ ಕಡೆಗೆ ಹೆಚ್ಚಿನ ಗಮನ ನೀಡದಿರಿ :ಬಗಲಿ
Related Posts
Add A Comment

