ವಿಜಯಪುರ: ಭೀಮಸೇನಾ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘ (ರಿ) ಬೆಂಗಳೂರು ಜಿಲ್ಲಾ ಘಟಕ ವಿಜಯಪುರ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಪ ನಿರ್ದೇಶಕರು, ಪಶು ಸಂಗೋಪನಾ ಇಲಾಖೆಯ ಡಾ. ಅಶೋಕ ಗೊಣಸಗಿ ನೆರವೇರಿಸಿ ಮಾತನಾಡುತ್ತ, ಸರಕಾರದಿಂದ ಇರುವ ವಿದ್ಯಾರ್ಥಿ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳದೇ ವಿದ್ಯಾಭ್ಯಾಸ ಕಡೆಗೆ ಗಮನ ಹರಿಸಬೇಕೆಂದರು.
ಅದ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾವುಸಾಬ್ ಗವಾರಿ ವಹಿಸಿದ್ದರು.
ಪ್ರಾಸ್ತಾವಿಕವಾಗಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮುದ್ದಣ್ಣ ಭೀಮನಗರ ಮಾತನಾಡಿ, ವಿದ್ಯಾರ್ಥಿಗಳಿಗೆ ವೃತ್ತಿ ಆಧಾರಿತ ಶಿಕ್ಷಣ, ತಾಂತ್ರಿಕ ಶಿಕ್ಷಣ ಕಲಿತು ಮುಂದೆ ಬರಬೇಕು. ಸರಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಶೈಕ್ಷಣಿಕ ರಂಗದಲ್ಲಿಯೂ ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯುವ ವಿಫುಲ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮದೇ ಆದ ಕೌಶಲ್ಯಗಳನ್ನು ಬಳಸಿಕೊಂಡು ಉನ್ನತವಾದ ಬದುಕನ್ನು ಕಟ್ಟಿಕೊಳ್ಳುವ ಎಲ್ಲ ಅವಕಾಶಗಳಿವೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕೆಂದರು.
ಈ ಸಂದರ್ಭದಲ್ಲಿ ಕೆ.ಹೊಂಗಯ್ಯ, ಇ.ಓ. ತಾಲೂಕ ಪಂಚಾಯತ, ವಿಜಯಪುರ, ಜೆ.ಎನ್. ಬಡಳ್ಳಿ, ಸಹಾಯಕ ನಿರ್ದೇಶಕರು, ಖಜಾನೆ ಇಲಾಖೆ, ವಿಜಯ ಆಲಗೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇಂಡಿ, ಶ್ರೀಕಾಂತ ಕಾಂಬಳೆ, ಪಿ.ಎಸ್.ಐ. ಮನಗೂಳಿ, ಪ್ರಾಸ್ತಾವಿಕ ಮಾತನಾಡುತ್ತ, ವಿದ್ಯಾರ್ಥಿಗಳ ಜೀವನ, ಗುರಿ ಆದರ್ಶಗಳು ಹೇಗಿರಬೇಕು. ಮತ್ತು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಂಡು ಜೀವನದಲ್ಲಿ ಎತ್ತರಕ್ಕೆ ಬೆಳೆಯುವಂತೆ ತಿಳಿ ಹೇಳಿದರು.
ಬಸವರಾಜ ಜಾಲವಾದಿ, ಚಿದಾನಂದ ಕಾಂಬಳೆ, ರಾಜಶೇಖರ ಯಡಳ್ಳಿ, ಅನೀಲ ಹಳ್ಳಿ, ನಿಜು ಮೇಲಿನಕೇರಿ ಸಂಘದ ವಿಭಾಗೀಯ ಸಂಯೋಜಕ ಎಚ್.ಬಿ. ಸಿಂಗೆ, ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಾನಂದ ಮುದ್ದೇಬಿಹಾಳ ಅತಿಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿ.ಬಿ. ಕಗ್ಗೋಡ, ರುದ್ರಪ್ಪ ಬನಸೋಡೆ, ರಾಜಶೇಖರ ಬನಸೋಡೆ, ಲಕ್ಷ್ಮಣ ಮಸಳಿಕೇರಿ, ಡಿ.ಸಿ. ಹರಿಜನ, ಉಮೇಶ ಪೂಜಾರಿ, ನಂದಾ ತಿಕೋಟಿ, ನಾಗರಾಜ ಬನಸೋಡೆ, ಡಿ.ಎಸ್. ಶ್ರೀಂಗೇರಿ, ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಿ :ಡಾ.ಗೊಣಸಗಿ
Related Posts
Add A Comment

