ಸಿಂದಗಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ಗಳಲ್ಲಿ ಬೇಕಾಬಿಟ್ಟಿಯಾಗಿ ವಸೂಲಿ ಮಾಡುತ್ತಿರುವ ಟೋಲ್ ಏಜೆನ್ಸಿಗೆ ಕಡಿವಾಣ ಹಾಕಲು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಮನೆಯಿಂದ ೬೦ಕಿ.ಮೀ ದೂರದೊಳಗೆ ಯಾವುದೇ ಟೋಲ್ ಕೇಂದ್ರ ಇದ್ದರೂ ಶುಲ್ಕ ಕಟ್ಟುವಂತಿಲ್ಲ ಎಂದು ಲೋಕಸಭೆಯ ಸದನದಲ್ಲಿ ಹೇಳಿರುವ ಹೇಳಿಕೆಗೆ ಸಿಂದಗಿ ಬಿಜೆಪಿ ಮಂಡಲ ಕೋಶಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಅಭಿನಂದಿಸಿದ್ದಾರೆ. ಟೋಲ್ ನಾಕಾದಿಂದ ೬೦ಕಿ.ಮಿ ಒಳಗೆ ಮನೆ ಇರುವವರು ಆಧಾರ್ ಕಾರ್ಡ್ ತೋರಿಸಿ ಪಾಸ್ ಮಾಡಿಸಿಕೊಂಡು ಓಡಾಡಬಹುದು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ನಿರ್ಣಯವನ್ನು ಕೈಗೊಂಡಿರುವ ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಜಿಲ್ಲೆಯ ಹಾಗೂ ತಾಲೂಕಿನ ಎಲ್ಲಾ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

