ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ‘ಹಸಿರು ಸಿರಿ’ ಉದ್ಘಾಟನೆ
ವಿಜಯಪುರ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯ ಜೊತೆಗೆ ಜವಾಬ್ದಾರಿಯೂ ಆಗಬೇಕು. ಪ್ರಕೃತಿಯನ್ನು ಕಾಪಾಡಿದರೆ ತಾಯಿಯನ್ನು ಕಾಪಾಡಿದಂತೆ, ಅದರಂತೆ ಪರಿಸರವನ್ನು ಸಂರಕ್ಷಿಸಬೇಕೆಂದು ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷರು ಮತ್ತು ಕರ್ನಾಟಕ ಸರ್ಕಾರ ಬೃಹತ್ ಕೈಗಾರಿಕೆ, ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ಡಾ ಎಂ.ಬಿ. ಪಾಟೀಲ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಆವರಣದಲ್ಲಿನ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಮಹಾವಿದ್ಯಾಲಯದ ಐಕ್ಯೂಎಸಿ, ಹಸಿರು ಸಿರಿ ಘಟಕ, ವೃಕ್ಷ ಅಭಿಯಾನ ಪ್ರತಿಷ್ಠಾನ, ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿ ನೆಡುವ ಮೂಲಕ ‘ಹಸಿರು ಸಿರಿ’ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಅದರಂತೆಯೇ ಪ್ರಕೃತಿಯಿಂದಲೇ ಈ ಪ್ರಕೃತಿ. ಮಾನವನು ತನ್ನ ಪ್ರಕೃತಿಯನ್ನು ಕಾಪಾಡಿಕೊಂಡತೆ ಈ ಪರಿಸರ ಪ್ರಕೃತಿಯನ್ನು ಗಿಡ ನೆಡುವ ಮೂಲಕ ಉಳಿಸಿ ಬೆಳೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಒಂದೊಂದು ಗಿಡ ನೆಡುವ ಮೂಲಕ ಪರಿಸರವನ್ನು ಶುಭ್ರಗೊಳಿಸುವ ಕಾಯಕವನ್ನು ನಿರ್ವಹಿಸಬೇಕಾಗಿದೆ. ವಿದ್ಯಾರ್ಥಿಗಳು ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಈ ಮಹಾವಿದ್ಯಾಲಯದ ಆವರಣವನ್ನು ಹಾಗೂ ಸಮಾಜವನ್ನು ಸುಂದರವಾಗಿಸಿಕೊಳ್ಳುವ ಗುರುತರ ಜವಾಬ್ದಾರಿಯು ನಿಮ್ಮದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಆವರಣದಲ್ಲಿ ಅರಳಿ, ಆಲ, ಬೇವು, ನೆರಳೇ, ಹುಣಸೆ, ಸರಸ್ವತಿ ಸ್ವರೂಪ ಮತ್ತು ಸುವರ್ಣಕ ಮುಂತಾದ ಮೂವತ್ತಕ್ಕೂ ವಿವಿಧ ಪ್ರಭೇದಗಳನ್ನೊಳಗೊಂಡು ಒಟ್ಟು ಎರಡು ನೂರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಎಸ್. ಬಿ. ಕಲಾ ಮತ್ತು ಕೆ. ಸಿ. ಪಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಆರ್. ಎಂ. ಮಿರ್ದೆ, ವೃಕ್ಷ ಅಭಿಯಾನ ಪ್ರತಿಷ್ಠಾನದ ಸಂಯೋಜಕ ಪ್ರೊ. ಮುರಗೇಶ. ಪಟ್ಟಣಶೆಟ್ಟಿ, ವಿಜಯಪುರ ವಲಯ ಅರಣ್ಯ ಅಧಿಕಾರಿ ಸಂತೋಷಕುಮಾರ ಅಜುರ, ಐಕ್ಯೂಎಸಿ ನಿರ್ದೇಶಕರಾದ ಡಾ. ಪಿ. ಎಸ್. ಪಾಟೀಲ, ‘ಹಸಿರು ಸಿರಿ’ ಘಟಕ ಸಂಯೋಜಕರಾದ ಪ್ರೊ. ಕೃಷ್ಣಾ ಮಂಡ್ಲಾ, ಡಾ. ಕೆ. ಮಹೇಶಕುಮಾರ, ಪಿಯುಸಿ ಪ್ರಾಚಾರ್ಯರಾದ ಪ್ರೊ. ಸಿ. ಬಿ. ಪಾಟೀಲ, ಡಾ. ಅನೀಲ. ನಾಯಕ, ಡಾ. ಶ್ರೀನಿವಾಸ ದೊಡ್ಡಮನಿ, ಶ್ರೀ. ಎಸ್. ಕೆ. ಪಾಟೀಲ, ಡಾ. ಮಂಜುನಾಥ. ಜ್ಯೋತಿ, ಡಾ. ಶ್ರೀಶೈಲ.ಉಂಕಿ, ಮಲಿಕ್ ಎಲ್ ಜಮಾದಾರ, ಅಕ್ಷಯ ಜನಾಯ ಮತ್ತು ಮಹಾವಿದ್ಯಾಲಯದ ಬೋಧಕ & ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

