ವಿಜಯಪುರ ವಿಜಯಪುರ ಜಿಲ್ಲೆಯ ಹುಲ್ಲೂರು ( ಜೆಟ್ಟಗಿ ) ಉಪಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ೧೧೦ ಕೆ.ವಿ ಬ.ಬಾಗೇವಾಡಿ-ಮುದ್ದೇಬಿಹಾಳ ಮಾರ್ಗದ ಗೋಪುರದಲ್ಲಿ ಜಂಪ ಅಳವಡಿಸುವ ಸಲುವಾಗಿ ದಿನಾಂಕ ೨೯-೦೭-೨೦೨೪ ಬೆಳಿಗ್ಗೆ ೦೭:೦೦ ಘಂಟೆಯಿಂದ ೦೯:೩೦ ಘಂಟೆಯವರೆಗೆ ಮಾರ್ಗ ಮುಕ್ತತೆಯ ಅವಶ್ಯಕತೆ ಇರುವುದರಿಂದ ೧೧೦ ಕೆ.ವಿ ಉಪಕೇಂದ್ರ ಹಿರೇಮುರಾಳ, ೧೧೦ಕೆ.ವಿ ಕೆ.ಎನ್ ಸೋಲಾರ್ ಮುದ್ದೇಬಿಹಾಳ, ೧೧೦ಕೆ.ವಿ ಕೋಳೂರು, ೧೧೦ಕೆ.ವಿ ಬಾಲಾಜಿ ಶರ‍್ಸ ಹಾಗೂ ೧೧೦ ಕೆ.ವಿ ಮುದ್ದೇಬಿಹಾಳ ಉಪಕೇಂದ್ರದಿಂದ ಹೊರಹೋಗುವ ೩೩ ಕೆ.ವಿ ಉಪಕೇಂದ್ರಗಳ (ಢವಳಗಿ, ತಂಗಡಗಿ & ನಾಲತವಾಡ) ಮಾರ್ಗಗಳಲ್ಲಿ ಮತ್ತು ಸದರಿ ಎಲ್ಲಾ ಉಪಕೇಂದ್ರಗಳಿಂದ ಹೊರಹೋಗುವ ಎಲ್ಲ ೧೧ ಕೆ.ವಿ ಮಾರ್ಗಗಳಿಗೆ ನಿರಂತರ ಜ್ಯೋತಿ ಮಾರ್ಗಗಳು, ನೀರು ಸರಬರಾಜು ಮಾರ್ಗಗಳು, ಕೃಷಿ ನೀರಾವರಿ ಮಾರ್ಗಗಳು, ಹಾಗೂ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ವ್ಯತ್ಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಸವನಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
