ವಿಜಯಪುರ: ವಿಜಯಪುರ ನಗರಕ್ಕೆ ಕೋಲ್ಹಾರ ಪಟ್ಟಣದ ಹತ್ತಿರ ಇರುವ ಕೃಷ್ಣಾ ನದಿಯಿಂದ ಸಗಟು ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೋಲ್ಹಾರ ಮೂಲ ಸ್ಥಾವರದÀಲ್ಲಿ ನೀರು ಶುದ್ಧೀಕರಣ ಘಟಕಇದ್ದು, ಘಟಕದಲ್ಲಿ ಪಿ.ಎ.ಸಿ ಪೌಡರ ಮತ್ತು ಬ್ಲಿಚಿಂಗ್ ರಾಸಾಯನಿಕಗಳನ್ನು ಅಗತ್ಯಗನುಗುಣವಾಗಿ ನೀರಿನಲ್ಲಿ ಸೇರಿಸಿ ಶುದ್ಧೀಕರಿಸಿ, ಶುದ್ಧೀಕರಿಸಿದ ನೀರಿಗೆ ಲಿಕ್ವಿಡ್ ಕ್ಲೋರಿನ್ ಗ್ಯಾಸ ಅಗತ್ಯಗನುಗುಣವಾಗಿ ಸೇರಿಸಿ ಜೈವಿಕತ್ವಗಳನ್ನು ನಾಶಪಡಿಸಿ ವಿಜಯಪುರ ನಗರದ ಸಾರ್ವಜನಿಕರಿಗೆ ಕುಡಿಯಲು ಸರಬರಾಜು ಮಾಡಲಾಗುತ್ತಿದೆ.
ಪ್ರಸ್ತುತ, ವಿಜಯಪುರ ನಗರಕ್ಕೆ ನೀರು ಸರಬರಾಜು ಮಾಡುವ ಆಲಮಟ್ಟಿ ಹಿನ್ನೀರಿಗೆ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾಗಿದ್ದು, ಹೊಸ ನೀರು ಸೇರ್ಪಡೆಗೊಂಡಿರುವ ಕಾರಣ ವಿಜಯಪುರ ನಗರದ ಸಾರ್ವಜನಿಕರು ನೀರನ್ನು ಕಾಯಿಸಿ ಕುಡಿಯಬೇಕು ಎಂದು ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
