ಚಡಚಣ: ಡೆಂಗ್ಯೂ ವೈರಸ್ ಸೋಂಕಿತ ಈಡಿಸ್ ಸೊಳ್ಳೆಗಳು ಕಚ್ಚುವಿಕೆಯಿಂದ ಡೆಂಗ್ಯೂ ಜ್ವರ ಹರಡುತ್ತದೆ. ಡೆಂಗ್ಯೂ ವೈರಸ್ ಇರುವ ವ್ಯಕ್ತಿಯ ರಕ್ತದಲ್ಲಿ ಸೊಳ್ಳೆ ಕಚ್ಚಿದಾಗ ಅದು ಸೋಂಕಿಗೆ ಒಳಗಾಗುತ್ತದೆ. ಒಬ್ಬರಿಂದ ಇನ್ನೊಬ್ಬರಿಗೆ ನೇರವಾಗಿ ಹರಡಲು ಸಾಧ್ಯವಿಲ್ಲ. ಅದಕ್ಕಾಗಿ ಡೆಂಗ್ಯೂ ಜ್ವರಕ್ಕೆ ಭಯ ಬೇಡ ಮುನ್ನೆಚ್ಚರಿಕೆ ಬೇಕು ಎಂದು ಆರೋಗ್ಯ ನಿರೀಕ್ಷಾಣಾಧಿಕಾರಿ ಸುರೇಶ ವಾಲಿಕಾರ ಹೇಳಿದರು.
ಮಂಗಳವಾರದಂದು ಹಾಲಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ‘ಡೆಂಗ್ಯೂ ಜ್ವರದ ಬಗ್ಗೆ ಅರಿವು’ ಮೂಡಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು. ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡಲು, ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವ ಸ್ಥಳಗಳನ್ನು ತೊಡೆದುಹಾಕಲು. ಇವುಗಳಲ್ಲಿ ಹಳೆಯ ಟೈರ್‌ಗಳು, ಕ್ಯಾನ್‌ಗಳು ಅಥವಾ ಮಳೆಯನ್ನು ಸಂಗ್ರಹಿಸುವ ಹೂವಿನ ಕುಂಡಗಳು ಸೇರಿವೆ. ಹೊರಾಂಗಣ ಪಕ್ಷಿ ಸ್ನಾನ ಮತ್ತು ಸಾಕು ಪ್ರಾಣಿಗಳ ನೀರಿನ ಭಕ್ಷ್ಯಗಳಲ್ಲಿ ನೀರನ್ನು ನಿಯಮಿತವಾಗಿ ಬದಲಾಯಿಸಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಶಾಲೆಯ ಮುಖ್ಯ ಗುರುಗಳಾದ ಎಸ್.ಜೆ.ಪಾಟೀಲರು ಮಾತನಾಡುತ್ತ. ಡೆಂಗ್ಯೂ ಜ್ವರ ಈ ಹೆಸರು ಕೇಳಿದ ತಕ್ಷಣವೇ ಎಲ್ಲರೂ ಬೆಚ್ಚಿಬೀಳುತ್ತಾರೆ. ಈ ಜ್ವರವನ್ನು ಚಿಕಿತ್ಸೆಗಿಂತ ಆರೈಕೆಯಲ್ಲೇ ಓಡಿಸಬಹುದು. ಈ ಜ್ವರ ಹೆಚ್ಚಾಗಿ ಚಿಕ್ಕ ಮಕ್ಕಳು, ವಯೋವೃದ್ಧರನ್ನು ಬಾಧಿಸುತ್ತದೆ. ಯಾಕೆಂದರೆ ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಪಕ್ವಾವಾಗಿರುವುದಿಲ್ಲ. ವಯೋವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತಿರುತ್ತದೆ. ಸೂಕ್ತ ಎಚ್ಚರಿಕೆ ವಹಿಸುವುದರ ಜೊತೆ ತಕ್ಷಣಕ್ಕೆ ಚಿಕಿತ್ಸೆ ಪಡೆದರೆ ಭಯ ಪಡುವ ಅಗತ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಪಿಎಚ್‌ಸಿಓ ಜೆ.ಬಿ.ಜೋಳದ, ಶಾಲಾ ಶಿಕ್ಷಕರಾದ ಎಂ.ಗಂಗಾಧರಪ್ಪ, ಎಂ.ಕೆ.ಬಗಲಿ, ಎಸ್.ಬಿ.ನಾಗಠಾಣ ಸಿಬ್ಬಂದಿ ವರ್ಗ ಸೇರಿದಂತೆ ಆಶಾ ಕಾರ್ಯಕರ್ತೆಯರಾದ ಈರಮ್ಮ ಬಡಿಗೇರ, ಸುನಂದಾ ಕಾರಬಾರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಡೆಂಗ್ಯೂ ಜ್ವರಕ್ಕೆ ಭಯ ಬೇಡ, ಮುನ್ನೆಚ್ಚರಿಕೆ ಬೇಕು :ವಾಲಿಕಾರ
Related Posts
Add A Comment

