ವಿಜಯಪುರ: ನಗರ ಶಾಸಕರು ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ ರವರು ಹಾಗೂ ಸಿದ್ಧಸಿರಿಯ ಆಡಳಿತ ಮಂಡಳಿಯ ನಿರ್ಣಯದಂತೆ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಗಿಡಗಳನ್ನು ಬೆಳೆಸುವುದು ಹಾಗೂ ಸಂರಕ್ಷಣೆಗಾಗಿ ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ರೂ.೧೦ ಲಕ್ಷ ದೇಣಿಗೆಯನ್ನು ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರಿಗೆ ಬುಧವಾರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ, ಸಿದ್ದಸಿರಿ ಸೌಹಾರ್ದ ಸಹಕಾರಿಯು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರ ನೇತೃತ್ವದಲ್ಲಿ ನಿರಂತರವಾಗಿ ಒಂದಿಲ್ಲೊಂದು ಸಾಮಾಜಿಕ ಕಾರ್ಯಗಳು ಮಾಡುತ್ತ ಬರಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ, ಲಸಿಕಾ ಕಾರ್ಯದಲ್ಲಿ ತೊಡಗಿಸಿಕೊಂಡು ನಗರದ ವಿವಿಧ ಬಡಾವಣೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ, ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಲು ಜಾಗೃತಿ ಮೂಡಿಸಲಾಗಿತ್ತು ಎಂದರು.
ಪರಿಸರ ಸಂರಕ್ಷಣೆಗಾಗಿ ಕಳೆದ ಬಾರಿಯೂ ಟ್ರೀ ಗಾರ್ಡ್ ವ್ಯವಸ್ಥೆ ಕಲ್ಪಿಸಲು ರೂ.೧೦ ಲಕ್ಷ ನೀಡಲಾಗಿತ್ತು. ಅದೇ ರೀತಿ ವೃಕ್ಷೋಥಾನ ಅಭಿಯಾನಕ್ಕೆ ರೂ.೧೦ ಲಕ್ಷ ದೇಣಿಗೆ ನೀಡಲಾಗಿತ್ತು. ಇದೀಗ ನಗರದಲ್ಲಿ ಗಿಡಗಳನ್ನು ಬೆಳೆಸಲು ಮತ್ತು ಸಂರಕ್ಷಣೆಗಾಗಿ ಮತ್ತೆ ರೂ. ೧೦ ಲಕ್ಷ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು, ನಗರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳರವರ ಹಾಗೂ ಆಡಳಿತ ಮಂಡಳಿಯ ಸಾಮಾಜಿಕ ಸೇವೆ ಹಾಗೂ ಕಳಕಳಿಗೆ ಜಿಲ್ಲಾಡಳಿತದ ವತಿಯಿಂದ ಕೃತಜ್ಞತೆ ಸಲ್ಲಿಸಿ, ಮಳೆಗಾಲದ ವೇಳೆಗೆ ೧೦ ಸಾವಿರ ಸಸಿಗಳನ್ನು ಬೆಳೆಸಿ, ನೆಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ, ಸಿದ್ಧರಿಯ ಜನರಲ್ ಮ್ಯಾನೇಜರ್ ದೇವಿ ಹಿರೇಮಠ್, ಉಮೇಶ ಹರಿವಾಳ, ರಾಜಶೇಖರ ಪಾಟೀಲ, ಎಜಿಎಂ ಶಿವಕುಮಾರ ಕಬ್ಬಿನ, ಹಿರಿಯ ಅಧಿಕಾರಿಗಳಾದ ಸಂದೀಪ ಗುಡೂರ, ಪವನ ಕುಲಕರ್ಣಿ, ಬಾಬುಗೌಡ ರೋಡಗಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಪರಿಸರ ಸಂರಕ್ಷಣೆಗಾಗಿ ’ಸಿದ್ಧಸಿರಿ’ ಯಿಂದ ರೂ.೧೦ ಲಕ್ಷ ದೇಣಿಗೆ
Related Posts
Add A Comment

