ವಿಜಯಪುರ: ಜಿಲ್ಲಾ ತಳವಾರ ಸಮಾಜದ ಪ್ರತಿಭಾ ಪುರಸ್ಕಾರ ಸಮಿತಿ ಹಾಗೂ ಜ್ಞಾನಗಂಗಾ ವಿವಿಧೋದ್ದೇಶ ಸಹಕಾರಿ ವಿಜಯಪುರ ಇವರ ಸಹಯೋಗದಲ್ಲಿ ಜು.೨೭ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ೬ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಉದ್ಘಾಟಿಸಲಿದಾರೆ. ಪ್ರತಿಭಾ ಪುರಸ್ಕಾರ ಸಮಿತಿ ಗೌರವ ಅಧ್ಯಕ್ಷರೂ ಆದ ಜ್ಞಾನಗಂಗಾ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಡಾ.ಅಶೋಕ ಸಾಸನೂರ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ನಿವೃತ್ತ ಉಪನಿರ್ದೇಶಕ ಎಸ್.ವಾಯ್.ಹಳಿಂಗಳಿ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ರಾಜಶೇಖರ ಕೊಲ್ಹಾರ, ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಎಸ್.ಬಿ.ಕೋಲಕಾರ, ಜ್ಞಾನಗಂಗಾ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಮಹಾದೇವಪ್ಪ ಲಗಮಣ್ಣಾ ಸೊನ್ನ, ನಿವೃತ್ತ ಕೃಷಿ ಅಧಿಕಾರಿ ರಾಮಚಂದ್ರ ಕಾಸಣ್ಣ ಅಂಬಿಗೇರ, ಬಳಗಾನೂರ ಕುವೆಂಪು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಸವರಾಜ ನಾಯ್ಕೋಡಿ, ಖ್ಯಾತ ಉದ್ಯಮಿದಾರ ತುಕಾರಾ ರಾಮು ಕೋಳಿ, ನಿವೃತ್ತ ಗುರುಮಾತೆ ಶ್ರೀಮತಿ ಶಾಂತಾಬಾಯಿ ಓತಿಹಾಳ, ಖ್ಯಾತ ಕೊಳಲು ವಾಕ ಬಾಬುಜೀ ನಾಯ್ಕೋಡಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಕಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಜಿ.ತೊನಶ್ಯಾಳ, ಕೃಷಿ ಕ್ಷೇತ್ರದಲ್ಲಿ ಕುಮಟಗಿಯ ಮಹಾಂತಪ್ಪ ಸಂಗಪ್ಪ ವಾಲಿಕಾರ ಹಾಗೂ ಶಿಕ್ಷಣ ಕ್ಷೇತ್ರದ ವಿಶೇಷ ಸಾಧಕರಾಗಿ ಗುರುಮಾತೆಯರಾದ ಶ್ರೀಮತಿ ಲಲಿತಾಬಾಯಿ ಪರಸಪ್ಪ ಅಂಬಿಗೇರ ಅವರನ್ನು ಸನ್ಮಾನಿಸಲಾಗುವುದು.
Subscribe to Updates
Get the latest creative news from FooBar about art, design and business.
Related Posts
Add A Comment
