ಸಿಂದಗಿ: ವಿದ್ಯುತ್ ಅವಘಡ ತಪ್ಪಿಸಲು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಗತ್ಯ. ನಿಗಮದ ಪವರ್‌ಮೆನ್‌ಗಳು ಹಾಗೂ ಅಧಿಕಾರಿಗಳು ಸಹ ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು ಎಂದು ವಿಭಾಗಾಧಿಕಾರಿ ಮಲಕಪ್ಪ ಜಾಲಿಬೆಂಚಿ ಹೇಳಿದರು.
ಪಟ್ಟಣದ ಹೆಸ್ಕಾಂ ಕಛೇರಿಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ್ ಹಾಗೂ ಸಿಂದಗಿ ಉಪವಿಭಾಗದ ವತಿಯಿದ ಹಮ್ಮಿಕೊಂಡ ವಿದ್ಯುತ್ ಸುರಕ್ಷಾ ಪಾಕ್ಷಿಕ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯುತ್ ಬಳಕೆಯಲ್ಲಿ ಸುರಕ್ಷತೆ, ವಿದ್ಯುತ್ ಉಳಿತಾಯ, ಸೌರ ಮೇಲ್ಛಾವಣಿ, ಪಿ.ಎಂ ಕುಸುಮ್ ಯೋಜನೆ ಹಾಗೂ ವಿದ್ಯುತ್ ಚಾಲಿತ ಚಾರ್ಜಿಂಗ್ ಕೇಂದ್ರಗಳ ಕುರಿತು ಗ್ರಾಹಕರಲ್ಲಿ ಅರಿವು ಅತ್ಯಗತ್ಯವಾಗಿದೆ. ಸಾರ್ವಜನಿಕರಿಗೆ ವಿದ್ಯುತ್ ದುರಸ್ತಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಕುರಿತು ತಿಳಿಸಿ ಕೊಡಬೇಕು. ಸ್ಪಲ್ಪ ನಿರ್ಲಕ್ಷ್ಯ ವಹಿಸಿದರೂ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ವಿದ್ಯುತ್ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳ ಕುರಿತು ನಿಗಾ ವಹಿಸುವಂತೆ ಹೆಸ್ಕಾಂ ಅಧಿಕಾರಿಗಳು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಂತೂ ಬಿರಾದಾರ, ಬಸವರಾಜ ಅಗಸರ, ಚಂದ್ರಶೇಖರ ಅಂಗಡಿ, ಸಿ.ಬಿ.ಮಾವೂರ, ಗುರು ಹಂಚಿನಾಳ, ಸಿ.ಎಂ.ಚೂರಿ, ಎಮ್.ಎನ್.ನಾಯ್ಕೋಡಿ, ವಿ.ಕೆ.ಚಿಕ್ಕಮಠ, ಹೆಗ್ಗೇರಿ ವಿಭೂತಿಹಳ್ಳಿ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

