ಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಉತ್ನಾಳ ಗ್ರಾಮದ ಹಿರೇಮಠದ ಮಹಾಲಕ್ಷ್ಮೀದೇವಿ ಉಪಾಸಕರಾದ ಶಿವಪುತ್ರಯ್ಯ ಹಿರೇಮಠ ಅವರ ಸುಪುತ್ರ ಡಾ.ಮಹಾಂತೇಶ ಹಿರೇಮಠ ಅವರಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲದಲ್ಲಿ ಈಚೆಗೆ ಜರುಗಿದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಕೆಎಲ್ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿತಿನ್ ಗಂಗನೆ, ಪ್ರಾಚಾರ್ಯ ಡಾ. ಜಿ.ವಿನಯ ಮೋಹನ ಅವರು ಆಯುರ್ವೇದದ ಕಾಯಚಿಕಿತ್ಸಾ ವಿಭಾಗದ ಸ್ನಾತಕೋತ್ತರ ಪದವಿ (ಎಂಡಿ) ಪ್ರದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶಿವಾನಂದ ಭಾರತಿ ಸ್ವಾಮೀಜಿ, ಪೂರ್ಣಾನಂದ ಭಾರತಿ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

