ಸಿಂದಗಿ: ತಾಲೂಕಿನ ರೈತರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ಬೆಳೆಗಳು ನಾಟಿ ರೂಪದಲ್ಲಿ ಬಂದಿವೆ. ಸರಿಯಾಗಿ ಮಳೆ ಬಾರದ ಕಾರಣ ಹಾಳಾಗಿ ರೈತರಿಗೆ ನಷ್ಟವಾಗಲಿದೆ. ಆದ್ದರಿಂದ ಕಾಲುವೆಗಳಿಗೆ ತಕ್ಷಣ ನೀರು ಹರಿಸಿ ಅನುಕೂಲ ಮಾಡಿಕೊಡಬೇಕೆಂದು ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಬಸನಗೌಡ ಧರ್ಮಗೊಂಡ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದದಲ್ಲಿ ಕಾಲುವೆಗಳಿಗೆ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ಶನಿವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರೈತರು ಮುಂಗಾರು ಬಿತ್ತನೆ ಕೆಲಸ ಶುರು ಮಾಡಿದ್ದು, ಮಳೆ ಸರಿಯಾಗಿ ಬರದೆಯಿರುವ ಹಿನ್ನಲೆಯಲ್ಲಿ ಬೆಳೆ ಒಣಗುತ್ತಿದೆ. ರೈತರು ಆಕಾಶದತ್ತ ಚಿತ್ತ ನೆಟ್ಟಿದ್ದಾರೆ. ಆದರೆ ಮಳೆಯಾಗುತ್ತಿಲ್ಲ ಕಾರಣ ಕಾಲುವೆಗೆ ನೀರು ಆಗ್ರಹಿಸುವಂತೆ ಒತ್ತಾಯಿಸಿದರು.
ಈ ವೇಳೆ ತಾಲೂಕಾಧ್ಯಕ್ಷ ದಶರಥಸಿಂಗ್ ರಜಪೂತ ಮಾತನಾಡಿ, ರೈತರು ಹೊಲದಲ್ಲಿ ಬೀಜ, ಗೊಬ್ಬರ ಹಾಕಿ ಹಣೆಗೆ ಕೈ ಹಚ್ಚಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಮಳೆ ಸಮಸ್ಯೆಯಿಂದ ಸರಿಯಾಗಿ ನಾಟಿಯಾಗಿದೆ ಒಣಗುತ್ತಿವೆ. ಹೀಗಾಗಿ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಬಾಕ್ಸ್: ತಾಲೂಕಿನಲ್ಲಿ ದಲ್ಲಾಳಿಗಳ ಸಮಸ್ಯೆಯಿಂದ ರೈತರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ರೈತರು ತಂದ ಕಾಯಿಪಲ್ಯೆ, ತರಕಾರಿ ಮಾರಾಟ ಮಾಡದಂತೆ ಮಾಡುತ್ತಿದ್ದಾರೆ. ಇದರಿಂದಾಗಿ ನಿಜವಾದ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಇದನ್ನು ಕೂಡಲೇ ಬಗೆಹರಿಸಬೇಕು ಎಂದು ಎಲ್ಲ ರೈತರು ತಹಶೀಲ್ದಾರ್ ಅವರ ಮುಂದೆ ತಮ್ಮ ಸಮಸ್ಯೆ ಹೇಳಿಕೊಂಡರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಮಲ್ಲಪ್ಪ ಬಮ್ಮನಳ್ಳಿ, ತಾಲೂಕು ಕಾರ್ಯದರ್ಶಿ ಶಾಂತಗೌಡ ಮಣೂರ, ಮಾಜಿ ಸೈನಿಕ ಶಬ್ಬೀರ್‌ಪಟೇಲ್ ಬಿರಾದಾರ, ಶಿವಾನಂದ ಭಾಸಗಿ, ಬೀರು, ಬಲಭೀಮ ಕ. ಪಾರಸನಳ್ಳಿ, ಬಲಭೀಮ ಪ. ಪಾರತನಳ್ಳಿ, ಸಿದ್ರಾಮ ಮಾಡಗಿ, ಬಂದೇನವಾಜ್ ಮುಲ್ಲಾ, ಶರಣಪ್ಪ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

