Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಶ್ರೀ ಅರವಿಂದರು: ಆಧ್ಯಾತ್ಮಿಕ ಸಾಧನೆ ಮತ್ತು ಪೂರ್ಣಯೋಗ

ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ

ನಾನು ಸಹ ಮುಖವಾಡ ಧರಿಸಲೇಬೇಕಾಯಿತು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಿಲಾಪ ಶಿಬಿರ: ಪ್ರತಿ ಶಾಲೆಯಲ್ಲಿ ಭಾರತ ಸೇವಾದಳ ಸಕ್ರಿಯಗೊಳಿಸಿ
(ರಾಜ್ಯ ) ಜಿಲ್ಲೆ

ಮಿಲಾಪ ಶಿಬಿರ: ಪ್ರತಿ ಶಾಲೆಯಲ್ಲಿ ಭಾರತ ಸೇವಾದಳ ಸಕ್ರಿಯಗೊಳಿಸಿ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂಡಿ: ಶಿಕ್ಷಕರು ಪ್ರತಿ ಶಾಲೆಯಲ್ಲಿ ಸೇವಾದಳದ ಘಟಕವನ್ನು ಸ್ಥಾಪಿಸಿ, ಮಕ್ಕಳಲ್ಲಿ ರಾಷ್ಟ್ರಭಕ್ತಿ, ಶಿಸ್ತು ಹಾಗೂ ಸಾಮಾಜಿಕ ಜೀವನ ನಿರ್ವಹಣೆಯ ಪಾಠ ಅರಿಯಲು ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ತಾಲೂಕ ಭಾರತ ಸೇವಾದಳದ ಅಧ್ಯಕ್ಷ ಕೆ ಪಿ ಭೈರಜಿ ಹೇಳಿದರು.
ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ತಾಲೂಕು ಘಟಕ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ನಡೆದ ಶಿಕ್ಷಕ, ಶಿಕ್ಷಕಿಯರ ಒಂದು ದಿನದ ಮಿಲಾಪ್‌ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಅಂಬಣ್ಣ ಸುಣಗಾರ ಮಾತನಾಡಿ, ಶಿಕ್ಷಕ ಸಮುದಾಯ ಸೇವಾ ಮತ್ತು ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸುವ ಮೂಲಕ ಭಾರತ ಸೇವಾದಳವನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಭಾರತ ಸೇವಾದಳ ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶಭಕ್ತರನ್ನು ಹುಟ್ಟು ಹಾಕಿದ ಸಂಸ್ಥೆ. ಸ್ವಾತಂತ್ರ್ಯ ಚಳುವಳಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರಿಗೆ ಸಾತ್‌ ಕೊಟ್ಟ ಏಕೈಕ ಸಂಸ್ಥೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮುಖ್ಯಸ್ಥ ನಾಗೇಶ ಡೋಣುರ, ಭಾರತ ಸೇವಾದಳಕ್ಕೆ ಶಿಕ್ಷಕರೇ ಅಡಿಗಲ್ಲು. ಅದನ್ನು ಉಳಿಸಿ ಬೆಳೆಸುವುದು ಅವರಿಂದ ಮಾತ್ರ ಸಾಧ್ಯ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಸೇವಾದಳದ ಶಾಖೆಗಳನ್ನು ಎಲ್ಲ ಶಾಲೆಗಳಲ್ಲೂ ತೆರೆಯಬೇಕು. ಇಂದಿನ ಪೀಳಿಗೆಯಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ ಶಿಸ್ತನ್ನು ಬೆಳೆಸಬೇಕು ಎಂದು ಸಲಹೆ ಮಾಡಿದರು.
ಉಪಾಧ್ಯಕ್ಷೆ ರಾಜೇಶ್ವರಿ ಕ್ಷತ್ರಿ ಮಾತನಾಡಿ, ಸೇವಾದಳದ ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಭಕ್ತಿ, ದೇಶಪ್ರೇಮ, ಶಿಸ್ತು, ಸೇವಾಮನೋಭಾವ ಮತ್ತು ನಾಯಕತ್ವ ಗುಣ ಬೆಳೆಸುವ ಮೂಲಕ ದೇಶವನ್ನು ಅಭಿವೃದ್ದಿ ಪಡಿಸಬೇಕು ಎಂದು ಹೇಳಿದರು.
ಭಾರತ ಸೇವಾದಳದ ಕೋಶಾಧ್ಯಕ್ಷ ಅನಿಲ ಏಳಗಿ ಉದ್ಘಾಟಿಸಿದರು. ಕಾರ್ಯದರ್ಶಿ ಎಂ ಎಲ್ ಪ್ಯಾಟಿ, ಸಂಪನ್ಮೂಲ ವ್ಯಕ್ತಿ ಜಿ ಜಿ ಬರಡೋಲ ಮಾತನಾಡಿದರು.
ಮುಖ್ಯ ಶಿಕ್ಷಕ ಎಂ ಎಫ್ ತುರ್ಕಿ, ಎಲ್ ಬಿ ತೋಟದ, ಟಿ ಎಸ್ ಹೊಸಮನಿ, ಎಸ್ ಬಿ ಕಲ್ಲೋಳ್ಳಿ, ಆರ್ ಕೆ ಹಳ್ಳಿ, ದುಂಡಪ್ಪ ಹರಿಜನ ಸೇರಿದಂತೆ ತಾಲೂಕಿನ ಸೇವಾದಳದ ಶಿಕ್ಷಕರು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಶ್ರೀ ಅರವಿಂದರು: ಆಧ್ಯಾತ್ಮಿಕ ಸಾಧನೆ ಮತ್ತು ಪೂರ್ಣಯೋಗ

ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ

ನಾನು ಸಹ ಮುಖವಾಡ ಧರಿಸಲೇಬೇಕಾಯಿತು

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 09, 2026

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಶ್ರೀ ಅರವಿಂದರು: ಆಧ್ಯಾತ್ಮಿಕ ಸಾಧನೆ ಮತ್ತು ಪೂರ್ಣಯೋಗ
    In ವಿಶೇಷ ಲೇಖನ
  • ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ
    In ವಿಶೇಷ ಲೇಖನ
  • ನಾನು ಸಹ ಮುಖವಾಡ ಧರಿಸಲೇಬೇಕಾಯಿತು
    In ಭಾವರಶ್ಮಿ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 09, 2026
    In ದಿನಪತ್ರಿಕೆ
  • ಪವರ್ ಗ್ರೀಡ್ ಸಂಸ್ಥೆಯಿಂದ ದೇಶಕ್ಕೆ ಅಪಾರ ಕೊಡುಗೆ
    In (ರಾಜ್ಯ ) ಜಿಲ್ಲೆ
  • ಇಂದು ಕನ್ನೂರ ಸವಾಯಿ ವಸ್ತಿಯಲ್ಲಿ ಶಾಹನೂರವಲಿ ದಗಾ೯ ಜಾತ್ರೆ
    In (ರಾಜ್ಯ ) ಜಿಲ್ಲೆ
  • ಚಕ್ಕೋಡನಹಳ್ಳಿ ಕಾಳಮ್ಮ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಜನಗಣತಿ ಮೇಲ್ವಿಚಾರಕರರಿಗೆ & ಗಣತಿದಾರರಿಗೆ ತರಬೇತಿ
    In (ರಾಜ್ಯ ) ಜಿಲ್ಲೆ
  • ಚಿನ್ನರ ಉತ್ಸವ: ಆದರ್ಶ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ
    In (ರಾಜ್ಯ ) ಜಿಲ್ಲೆ
  • ಬಿ.ಎಲ್ಡಿಇ ಶಿಕ್ಷಣ ಮಹಾವಿದ್ಯಾಲಯಕ್ಕೆ (ಬಿ.ಇಡಿ) ಮೂರು ರ್‍ಯಾಂಕ್
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.