ವಿಜಯಪುರ: ಡಿಪ್ಲೋಮಾ ೨ನೇ ವರ್ಷದ ಅಥವಾ ೩ನೇ ಸೆಮಿಸ್ಟರ್ ಇಂಜಿನೀಯರಿಂಗ್ ಕೊರ್ಸ್ಗಳಿಗೆ ೨೦೨೪ನೇ ಸಾಲಿನ ಪ್ರವೇಶಕ್ಕೆ ಡಿಪ್ಲೋಮಾ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಜೂ.೨೨ ರಂದು ವಿಜಯಪುರ ನಗರದ ಬಾಲಕರ ಸರ್ಕಾರಿ ಪದವಿಪುರ್ವ ಕಾಲೇಜ್‌ನಲ್ಲಿ ಜರುಗಲಿದ್ದು, ಮುನ್ನೆಚ್ಚರಿಕೆಯಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ವ್ಯಾಪ್ತಿಯಲ್ಲಿ ಮಧ್ಯಾಹ್ನ ೧೨-೩೦ರಿಂದ ಪರೀಕ್ಷೆ ಮುಕ್ತಾಯವಾಗುವರೆಗೆ ಕಲಂ ೧೪೪ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೇಂದ್ರದ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್‌ಗಳು, ಇಂಟರ್‌ನೆಟ್ ಕೆಫೆಗಳು, ಕೋಚಿಂಗ್ ಕೇಂದ್ರಗಳು ಸದರಿ ಅವಧಿಯಲ್ಲಿ ತೆರೆಯದಂತೆ ಅದೇಶದಲ್ಲಿ ಆದೇಶಿಸಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
