Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಬದುಕಿನ ವೈಭವಕ್ಕೆ ಬೇಕಾಗಿದೆ ಹೊಸ ಭಾಷ್ಯ
ವಿಶೇಷ ಲೇಖನ

ಬದುಕಿನ ವೈಭವಕ್ಕೆ ಬೇಕಾಗಿದೆ ಹೊಸ ಭಾಷ್ಯ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್

ಬದುಕಿನ ವೈಭವವನ್ನು ಕೈಯಲ್ಲಿ ಕಟ್ಟಿರುವ ದುಬಾರಿ ವಾಚುಗಳಲ್ಲಿ, ಹಿಡಿದಿರುವ ಮೊಬೈಲುಗಳಲ್ಲಿ ನೋಡಬೇಡ.
ವಾಚುಗಳು ಸಮಯವನ್ನು ತೋರಿಸುತ್ತವೆಯೇ ಹೊರತು ನಮ್ಮ ಬದುಕನ್ನು ಬದಲಿಸುವ ಶಕ್ತಿ ಇರುವುದು ಕೇವಲ ಸಮಯಕ್ಕೆ ಹೊರತು ನಾವು ಕಟ್ಟಿರುವ ವಾಚುಗಳಿಗಲ್ಲ. ಮೊಬೈಲ್ ಕೂಡ ಇರುವುದು ನಮ್ಮ ಉಪಯೋಗಕ್ಕೆ ಹೊರತು ತೋರಿಕೆಯ ಡಂಬಾಚಾರಕ್ಕಲ್ಲ

ಬದುಕಿನ ವೈಭವವನ್ನು ಐಷಾರಾಮಿ ಪ್ರಯಾಣಗಳಲ್ಲಿ ನೋಡಬೇಡ, ಐಷಾರಾಮಿ ವಾಹನ ನಮ್ಮನ್ನು ನಮ್ಮ ಗಮ್ಯಸ್ಥಾನಕ್ಕೆ ತಲುಪಿಸುತ್ತದೆಯೇ ಹೊರತು ನಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುವುದಿಲ್ಲ.

ಬದುಕಿನ ವೈಭವ ನೀನು ತಿನ್ನುವ ಆಹಾರದ ಉತ್ಕೃಷ್ಟತೆಯಲ್ಲಿಲ್ಲ… ಒಳ್ಳೆಯ ಭೋಜನ ನಿನ್ನ ಆರ್ಥಿಕತೆಯ ಔನ್ಯತ್ಯವನ್ನು ನಿರ್ಧರಿಸುತ್ತದೆಯೇ ಹೊರತು ನಿನ್ನ ಆರೋಗ್ಯವನ್ನು ಅಲ್ಲ.

ಬದುಕಿನ ವೈಭವವನ್ನು ಬ್ರಾಂಡೆಡ್ ಬಟ್ಟೆಗಳ ಮೇಲೆ, ಮೈಮೇಲೆ ಹೇರಿಕೊಂಡಿರುವ ಚಿನ್ನ ಮತ್ತು ವಜ್ರದ ಒಡವೆಗಳ, ಬ್ಯಾಂಕಿನಲ್ಲಿರುವ ಅಪಾರ ಮೊತ್ತದ ಹಣದ ಮೇಲೆ ಮೇಲೆ ನಿರ್ಧರಿಸದಿರು….. ಕ್ಷಣಿಕ ತೃಪ್ತಿಯನ್ನು, ತುಸು ಅಹಂಭಾವವನ್ನಲ್ಲದೆ ಅದಾವುದೂ ನಿನಗೆ ಮಾನಸಿಕ ತೃಪ್ತಿಯನ್ನು ತಂದುಕೊಡುವುದಿಲ್ಲ.

ಬದುಕಿನ ವೈಭವವನ್ನು ಬ್ರಾಂಡೆಡ್ ಶೂ ಚಪ್ಪಲಿಗಳಲ್ಲಿ ನೋಡಬೇಡ…. ಅದೆಷ್ಟೇ ಹಣ ಖರ್ಚು ಮಾಡಿ ದುಬಾರಿ ಹರಳುಗಳ ಅಲಂಕಾರ ಮಾಡಿದರೂ ಅವುಗಳನ್ನು ಕಾಲಲ್ಲಿ ಮೆಟ್ಟುತ್ತೇವೆಯೇ ಹೊರತು ತಲೆಯ ಮೇಲೆ ಇಟ್ಟುಕೊಳ್ಳುವುದಿಲ್ಲ.

ಬದುಕಿನ ವೈಭವವನ್ನು ಐಷಾರಾಮಿ ಹಾಸಿಗೆಗಳಲ್ಲಿ, ವಾತಾನುಕೂಲಿತ ಕೋಣೆಗಳಲ್ಲಿ ನೋಡಬೇಡ ಅವು ನಿನ್ನ ಸಿರಿವಂತಿಕೆಯನ್ನು ಸೂಚಿಸುತ್ತವೆಯೇ ಹೊಡೆದು ನಿರಾತಂಕವಾದ ಸೊಂಪಾದ ನಿದ್ರೆಯನ್ನಲ್ಲ.

ಬದುಕಿನ ಯಾವುದೇ ವೈಭವಗಳನ್ನು ಅಂಗಡಿಯಲ್ಲಿ ಕೊಳ್ಳಲಾಗುವುದಿಲ್ಲ!!!
ಬದುಕಿನ ಯಾವುದೇ ವೈಭವಗಳನ್ನು ಕೊಡುಗೆಯಾಗಿ ನೀಡಲು ಸಾಧ್ಯವಿಲ್ಲ!!!
ಬದುಕಿನ ಯಾವುದೇ ವೈಭವಗಳು ಐಷಾರಾಮಿ ಔತಣಕೂಟಗಳಲ್ಲಿ ಸಿಗುವುದಿಲ್ಲ!!!
ಬದುಕಿನ ಯಾವುದೇ ವೈಭವಗಳು ಐಷಾರಾಮಿ ವಸ್ತುಗಳಲ್ಲಿ ದೊರೆಯುವುದು ಸಾಧ್ಯವೇ ಇಲ್ಲ!!!

ಬದುಕಿನ ನಿಜವಾದ ವೈಭವ ಇರುವುದು ತಲೆಯ ಮೇಲೆ ಅಪ್ಪ ಅಮ್ಮನ ಆಶೀರ್ವಾದದಲ್ಲಿ, ತಲೆಯ ಮೇಲಿರುವ ನಮ್ಮದೇ ಪುಟ್ಟ ಸೂರಿನಲ್ಲಿ,ನಮ್ಮ ಆರೋಗ್ಯದಲ್ಲಿ, ನಮ್ಮ ಸೌಹಾರ್ದಯುತ ಸಂಬಂಧಗಳಲ್ಲಿ, ನಮ್ಮ ಸ್ನೇಹಿತರ ಜೊತೆಗಿನ ಆತ್ಮೀಯ ಒಡನಾಟದಲ್ಲಿ, ಸಂಗಾತಿಯೊಂದಿಗೆ ಸ್ನೇಹ ಪ್ರೇಮಗಳಲ್ಲಿ,ಮಕ್ಕಳೊಂದಿಗೆ ಆಟ ಪಾಠಗಳಲ್ಲಿ, ಸಂತಸದಲ್ಲಿ, ವೈಭವವಿರುವುದು ಆತ್ಮೀಯರ ಅಪ್ಪುಗೆಯಲ್ಲಿ, ವೈಭವ ಇರುವುದು ಸಂಗಾತಿಯ ಮತ್ತು ಮಕ್ಕಳ ಮುದ್ದಿನಲ್ಲಿ.

ಬದುಕಿನ ನಿಜವಾದ ವೈಭವ ಇರುವುದು ನಮ್ಮವರ ಪ್ರೀತಿಯಲ್ಲಿ, ನಾವು ಗಳಿಸುವ ಗೌರವದಲ್ಲಿ, ವೈಭವವಿರುವುದು ನಮ್ಮ ಮೊಮ್ಮಕ್ಕಳೊಂದಿಗೆ ಒಡನಾಡುವಲ್ಲಿ.

ಬದುಕಿನ ಐಷಾರಾಮಿ ವಸ್ತುಗಳು ಬಾಹ್ಯಾಡಂಬರದ ವಸ್ತುಗಳಲ್ಲಿಲ್ಲ… ಮನಸ್ಸಿಗೆ ಉಲ್ಲಾಸಕೊಡುವ ಚೇತೋಹಾರಿ ಬದುಕಿನಲ್ಲಿದೆ.

ಇದರ ಅರಿವಿಲ್ಲದ ಎಷ್ಟೋ ಜನ ತಮಗಿಲ್ಲದುದನ್ನು ಕಂಡು ಕರುಬುತ್ತಾರೆ, ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರ ಕವನದಲ್ಲಿನ ಸಾಲುಗಳಂತೆ
“ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” ಎಂಬಂತೆ ಹಲುಬುತ್ತಾರೆ.

94ರ ಹರೆಯದ ಹಾಲಿವುಡ್ ನ ಕ್ಲಿಂಟ್ ಈಸ್ಟ ವುಡ್ ಎಂಬ ನಟ ಹೇಳಿರುವ ಬದುಕಿನ ನಿಜವಾದ ವೈಭವ ನಮ್ಮವರ ಪ್ರೀತಿ ವಿಶ್ವಾಸ ಸ್ನೇಹಿತರ ಒಡನಾಟ ಆತ್ಮೀಯರ ಅಪ್ಪುಗೆ ಮತ್ತು ಮುದ್ದುಗಳಲ್ಲಿದೆ ಎಂಬ ಮಾತುಗಳು ನನ್ನನ್ನು ಈ ಚಿಂತನೆಗೆ ಈಡು ಮಾಡಿದವು…. ತಿಳಿದವರ, ಜ್ಞಾನಿಗಳ ಒಂದು ಮಾತು ಒಂದಿಡೀ ಲೇಖನಕ್ಕೆ ಆಕರವಾಗುತ್ತದೆ ಎಂದರೆ ಅಚ್ಚರಿಯೇನಲ್ಲ.

ಬಾಹ್ಯಾಡಂಬರದ ಸೆಳೆತಗಳನ್ನು ಬಿಟ್ಟು, ಇರುವುದನ್ನು ಇರುವಂತೆಯೇ
ಒಪ್ಪಿಕೊಂಡು ಅಪ್ಪಿಕೊಳ್ಳುವುದರಲ್ಲಿ ಮಾನವ ಜನ್ಮದ ಸಾರ್ಥಕತೆ ಇದೆ ಎಂಬುದನ್ನು ಅರಿತು ಅಂತೆಯೇ ಬಾಳಿ ಬದುಕೋಣ… ಅಲ್ಲವೇ?

– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.