ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು(ಇಗ್ನೊ) 2024 ಜೂನ್ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಜೂನ್ 30, 2024 ಕೊನೆಯ ದಿನವಾಗಿದೆ.
ಕೋರ್ಸುಗಳ ಪ್ರವೇಶ ಮತ್ತೀತರ ಮಾಹಿತಿಗಾಗಿ ಇಗ್ನೋ ಅಧ್ಯಯನ ಕೇಂದ್ರ- 1307 ಬಿ. ಎಲ್. ಡಿ. ಈ ಸಂಸ್ಥೆಯ ಜೆ. ಎಸ್. ಎಸ್ ಶಿಕ್ಷಣ ಮಹಾವಿದ್ಯಾಲಯ, ರಾಮ ಮಂದಿರ ರಸ್ತೆ, ಎಸ್. ಎಸ್. ಕ್ಯಾಂಪಸ್, ವಿಜಯಪುರ ಸಂಪರ್ಕಿಸಬಹುದಾಗಿದೆ. ಅಲ್ಲದೇ, ಪ್ರವೇಶ ಪಡೆಯಲು ಬಯಸುವರು www.ignou.ac.in ನಲ್ಲಿ ಲಾಗಿನ್ ಆಗಿ ಆನಲೈನ್ ಮೂಲಕ ನೋಂದಣಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9980691291 ದೂರವಾಣಿಯ ಮೂಲಕವೂ ಸಂಪರ್ಕಿಸಬಹುದು ಎಂದು ಇಗ್ನೋ ಕೇಂದ್ರದ ಸಂಯೋಜಕ ಡಾ. ಮಂಜುನಾಥ ಬಿ. ಕೋರಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
