Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮಳೆ
ವಿಶೇಷ ಲೇಖನ

ಮಳೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”

– ವಿವೇಕಾನಂದ. ಎಚ್.ಕೆ, ಬೆಂಗಳೂರು

ಬರಗಾಲವನ್ನು ಮರೆಸುವಷ್ಟು ಮಳೆಯಾಗುತ್ತಿದೆ. ಮಳೆ ತುಂಬಾ ಕಡಿಮೆ ಎನ್ನಲಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಕಲ್ಯಾಣ ಕರ್ನಾಟಕದ ಮೂಲೆಮೂಲೆಗಳಲ್ಲಿ ಸಹ ಮಳೆ ಬೀಳುತ್ತಿದೆ..
ಕೃಷಿ ದೃಷ್ಟಿಯಿಂದ ಈ ಮಳೆಯ ಪರಿಣಾಮ ಲಾಭವೋ ನಷ್ಟವೋ ವೈಯಕ್ತಿಕವಾಗಿ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಆದರೆ ಅಂತರ್ಜಲದ ಮಟ್ಟ ಮಾತ್ರ ಉತ್ತಮವಾಗಬಹುದು ಎಂದು ಹೇಳಲಾಗುತ್ತದೆ..
ಏನೇ ಇರಲಿ, ಪ್ರಕೃತಿಯ ಎಲ್ಲಾ ವೈಪರೀತ್ಯಗಳನ್ನು ನಾವು ಸಹಿಸಲೇಬೇಕು. ಅದು ಅನಿವಾರ್ಯ. ಆದರೆ ಆಡಳಿತ ವ್ಯವಸ್ಥೆ, ಪರಿಸರ, ಕೃಷಿ ಮತ್ತು ನೀರಾವರಿ ತಜ್ಞರು ಈ ಅಧಿಕ ಮಳೆಯ ಗರಿಷ್ಠ ಉಪಯೋಗ ಪಡೆಯಲು ಮತ್ತು ಕೆಲವು ಶಾಶ್ವತ ಭವಿಷ್ಯದ ಯೋಜನೆಗಳನ್ನು ರೂಪಿಸಲು ಪ್ರಯತ್ನಿಸಬೇಕು..
ವಾತಾವರಣ ಹೀಗೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ವರ್ಷಗಳ ನಂತರ ಬರಗಾಲ ಬರಬಹುದು. ಅದರ ಪರಿಣಾಮ ಕಡಿಮೆ ಮಾಡಲು ನೀರಿನ ಸಂಗ್ರಹ ಮತ್ತು ಹಂಚಿಕೆಯ ಬಗ್ಗೆ ಏನಾದರೂ ಕಾರ್ಯ ಯೋಜನೆಯನ್ನು ಜಾರಿಗೊಳಿಸಬೇಕು..


ಅತಿವೃಷ್ಟಿ ಮತ್ತು ಅನಾವೃಷ್ಟಿಯ ಅನುಭವದ ಆಧಾರದ ಮೇಲೆ ಇದನ್ನು ಪ್ರಾಯೋಗಿಕವಾಗಿ ಪ್ರಯತ್ನಿಸಿದರೆ ಸಾಧ್ಯವಾಗಬಹುದು. ಮುಖ್ಯವಾಗಿ ಶಾಶ್ವತ ಬರಗಾಲ ಪೀಡಿತ ಪ್ರದೇಶಗಳು ಎಂದು ಕರೆಯಲಾಗುತ್ತಿದ್ದ ಜಿಲ್ಲೆ, ತಾಲ್ಲೂಕುಗಳಲ್ಲಿ ಮುಂದೆ ಮಳೆ ಕಡಿಮೆಯಾದಾಗ ಈಗಿನ ಅಧಿಕ ನೀರು ಅಥವಾ ಅಂತರ್ಜಲ ಮಟ್ಟವನ್ನು ಹೇಗೆ ಒಂದಷ್ಟು ಕಾಲ ಉಪಯೋಗಿಸಿ ಕೊಳ್ಳಬಹುದು ಎಂಬುದರ ಅಂದಾಜು ಭೂಗರ್ಭ ಶಾಸ್ತ್ರಜ್ಞರು ಮಾಡಬಹುದು. ಅದೇರೀತಿ ಈ ಮಳೆಯ ಕಾರಣದಿಂದ ಸೃಷ್ಟಿಯಾದ ಗಿಡಮರಗಳನ್ನು ಒಂದು ದಟ್ಟ ಅರಣ್ಯ ಪ್ರದೇಶವಾಗಿ ಬೆಳೆಸುವ ಸಾಧ್ಯತೆಗಳನ್ನು ಪರಿಶೀಲಿಸಬಹುದು..
ಸಾಮಾನ್ಯ ಜನರಾದ ನಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ತಿಳಿವಳಿಕೆ ಇರುವುದಿಲ್ಲ. ಆದರೆ ಈ‌ ಕ್ಷೇತ್ರಗಳ ತಜ್ಞರು ಈ ಬಗ್ಗೆ ‌ಜಾಗೃತರಾಗಿ ಸರ್ಕಾರದ ಗಮನಸೆಳೆದು ನಿರಂತರ ಕೆಲಸ ಮಾಡಬೇಕು. ಸಾಮಾನ್ಯ ಜನ ಅವರ ಮೇಲೆಯೇ ಭರವಸೆ ಇಟ್ಟಿರುತ್ತಾರೆ ಮತ್ತು ಅವಲಂಬಿಸಿರುತ್ತಾರೆ. ಇದು ಸರ್ಕಾರ ಮತ್ತು ತಜ್ಞರ ಕರ್ತವ್ಯ ಮತ್ತು ಜವಾಬ್ದಾರಿ..
ಆದರೆ ದುರಾದೃಷ್ಟವಶಾತ್ ‌ರಾಜಕೀಯ ಪಕ್ಷಗಳಿಗೆ, ಮಾಧ್ಯಮದವರಿಗೆ ಈ‌‌ ರೀತಿಯ ಶಾಶ್ವತ ‌ಅಭಿವೃದ್ಧಿಗಿಂತ ಚುನಾವಣೆಯೇ ಬಹುದೊಡ್ಡ ಸುದ್ದಿ ‌ಎಂಬಂತೆ ಪ್ರಚಾರ ಮಾಡುತ್ತಾರೆ. ತಮ್ಮ ಎಲ್ಲಾ ‌ಸಮಯ‌ ತಂತ್ರಗಾರಿಕೆ ಹಣ ಎಲ್ಲವೂ ಅದರಲ್ಲಿಯೇ ಕಳೆಯುತ್ತಾರೆ..
ಅತಿವೃಷ್ಟಿ ಮತ್ತು ಅನಾವೃಷ್ಟಿ ಸಮಯದಲ್ಲಿ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಒತ್ತಡ ಬೀಳುತ್ತದೆ. ಕೆಲವೊಮ್ಮೆ ಸಾಲ ಮಾಡಿ ಹಣ ನೀಡಬೇಕಾಗುತ್ತದೆ. ಆದ್ದರಿಂದ ಇಂತಹ ಸಮೃದ್ಧ ನೀರಿನ ಸಂಪನ್ಮೂಲಗಳು ಪ್ರಾಕೃತಿಕವಾಗಿ ಸಿಗುತ್ತಿರುವಾಗ ಇದರ ಪರಿಣಾಮಕಾರಿ ಉಪಯೋಗ ಪಡೆಯುವುದು ಆಡಳಿತದ ಜವಾಬ್ದಾರಿ..
ಆದರೆ ಏನು ಮಾಡುವುದು ಸರ್ಕಾರ ಎಂಬುದು ರಾಜಕೀಯ ಪಕ್ಷಗಳಿಗೆ ಬಾಡಿಗೆ ಮನೆ ಇದ್ದಂತೆ. ಇರುವಷ್ಟು ದಿನ ಮಾತ್ರ ತಮಗೆ ಎಷ್ಟು ಅನುಕೂಲವೋ ಅಷ್ಟು ಮಾಡಿಕೊಂಡು ಹೋಗುವಾಗ ಮನೆಯನ್ನು ಕೆಡಿಸಿಯೇ ಹೋಗುತ್ತಾರೆ. ಮುಂದೆ ಮತ್ತೊಬ್ಬರು..


ರಾಜ್ಯ ನಮ್ಮ ಸ್ವಂತ ಆಸ್ತಿ. ಅದನ್ನು ಮುಂದಿನ ತಲೆಮಾರಿಗೂ ಕೂಡ ಇನ್ನೂ ಉತ್ತಮವಾಗಿ ಬಿಟ್ಟು ಹೋಗಬೇಕು ಎಂಬ ಕಾಳಜಿ ಕಾಣುತ್ತಿಲ್ಲ. ಪ್ರತಿ ಮಳೆಗಾಲ ಅಥವಾ ಬರಗಾಲ ಇವರಿಗೆ ಹಣ ಮಾಡುವ ದಂಧೆಯಾಗಿದೆ..
ಪ್ರಾಕೃತಿಕ ಸಂಪನ್ಮೂಲಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಪ್ರಕೃತಿಯ ವಿಕೋಪಗಳ ದುಷ್ಪರಿಣಾಮಗಳನ್ನು ಖಂಡಿತ ಕಡಿಮೆ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಪ್ರಕೃತಿಯ ಸಹಜ ವೈಪರೀತ್ಯಗಳನ್ನೇ ಸಹಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗುವುದು ಖಚಿತ..
ಆದ್ದರಿಂದ ದಯವಿಟ್ಟು ಸರ್ಕಾರ ಯಾರದೇ ಇರಲಿ, ದೀರ್ಘಕಾಲದ ಶಾಶ್ವತ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಿ ಮುಂದೆ ಹಣ ಸಮಯ ಉಳಿತಾಯ ಮಾಡಲು ಪ್ರಯತ್ನಿಸಿ. ಅಧಿಕಾರ ಎಂಬುದು ನಿಮ್ಮ ಸ್ವಂತ ಆಸ್ತಿಯಲ್ಲ. ಅದು ಒಂದು ಸಾರ್ವಜನಿಕ ಸೇವಾ ವೇದಿಕೆ.
ಅದೇ ಮಾನವೀಯ ಧರ್ಮ..

– ವಿವೇಕಾನಂದ. ಎಚ್.ಕೆ, ಬೆಂಗಳೂರು

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.