Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಸಮಯದ ಮಹತ್ವ
ವಿಶೇಷ ಲೇಖನ

ಸಮಯದ ಮಹತ್ವ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

ಕ್ರಾಂತಿಕಾರಿಗಳ ಸಾಲಿನಲ್ಲಿ ಚಾಪೆಕರ್ ಸಹೋದರರ ಹೆಸರು ಅಜರಾಮರವಾಗಿದೆ. ಈ ಮೂರು ಮಂದಿ ಚಾಪೆಕರ್ ಸಹೋದರರು ದೇಶಕ್ಕಾಗಿ ನಗುನಗುತ್ತಲೇ ನೇಣುಗಂಬಕ್ಕೆ ಏರಿದ್ದರು.
ಅದೊಂದು ದಿನ ದಾಮೋದರ ಚಾಪೆಕರ್ ಅವರನ್ನು ಸರವರಾ ಜೈಲಿನಲ್ಲಿ ನೇಣಿಗೇರಿಸಲು ಬ್ರಿಟೀಷರು ಕರೆದುಕೊಂಡು ಬಂದಿದ್ದರು. ದಾಮೋದರ ಚಾಪೆಕರರು ಮಾತ್ರ ಆ ದಿನ ನಗು ಮುಖದಿಂದ ಮತ್ತು ಆನಂದದಿಂದಿದ್ದರು. ಅವರ ಕೈಯಲ್ಲಿ ಭಗವದ್ಗೀತೆಯ ಪುಸ್ತಕವಿದ್ದು, ಅವರು ಭಗವದ್ಗೀತೆಯನ್ನು ಓದುತ್ತಲೇ ನೇಣಿನ ಶಿಕ್ಷೆಗಾಗಿ ಸಿದ್ಧರಾಗಿದ್ದರು. ನೇಣುಗಂಬಕ್ಕೆ ಏರುವ ಸಮಯವಾದರೂ ಬ್ರಿಟೀಷ್ ಅಧಿಕಾರಿಗಳು ಅವರನ್ನು ನೇಣು ಕಂಬಕ್ಕೆ ಕರೆದೊಯ್ಯಲು ಬರಲೇ ಇಲ್ಲ. ಚಾಪೇಕರರು ಜೈಲಿನ ಕೋಣೆಯಲ್ಲಿ ಬ್ರಿಟೀಷ್ ಜೈಲು ಅಧಿಕಾರಿಗಳ ಆಗಮನಕ್ಕಾಗಿ ಕಾಯುತ್ತಾ ಇದ್ದರು.


ಕೊನೆಗೂ ಐದು ನಿಮಿಷ ತಡವಾಗಿ ಜೈಲಧಿಕಾರಿಗಳು ದಾಮೋದರ ಬಳಿಗೆ ಬಂದರು. ಬ್ರಿಟೀಷ್ ಜೈಲು ಅಧಿಕಾರಿಗಳ ಈ ಬೇಜವಾಬ್ದಾರಿಯನ್ನು ನೋಡಿದಂತಹ ದಾಮೋದರ ಚಾಪೇಕರ್ ಕೋಪಗೊಂಡರು. ಅವರು ಅತ್ಯಂತ ಚಾಣಾಕ್ಷತನದಿಂದ ಬ್ರಿಟೀಷ್ ಜೈಲು ಅಧಿಕಾರಿಗಳಿಗೆ ಅವರ ತಪ್ಪನ್ನು ತೋರಿಸಿಕೊಟ್ಟರು. ‘ನಾನು ಯಾವ ಸಮಾಜದಿಂದ ಬಂದಿದ್ದೇನೆಯೋ ಅಲ್ಲಿನ ಜನರೆಲ್ಲರೂ ಬ್ರಿಟೀಷರೆಂದರೆ ತುಂಬಾ ಕಟ್ಟುನಿಟ್ಟಾಗಿ ಸಮಯ ಪಾಲನೆಯನ್ನು ಮಾಡುತ್ತಾರೆ ಎಂದು ತಿಳಿದಿದ್ದಾರೆ. ಆದರೆ ಇಂದು ಆ ಮಾತು ಸುಳ್ಳು ಎಂದು ತಿಳಿಯಿತು’ ಎಂದು ಬ್ರಿಟೀಷ್ ಜೈಲು ಅಧಿಕಾರಿಗಳಿಗೆ ಹೇಳಿದರು.
ನೇಣಿನ ಕಂಬಕ್ಕೆ ಏರಲು ಸಿದ್ಧನಾಗಿ ನಿಂತಿದ್ದ ವ್ಯಕ್ತಿಯನ್ನೂ ಕಾಯುವಂತೆ ಮಾಡಿದ ಬ್ರಿಟೀಷ್ ಜೈಲಧಿಕಾರಿಗಳು ದಾಮೋದರ ಚಾಪೇಕರರ ಮುಂದೆ ನಾಚಿಕೆಯಿಂದ ತಲೆತಗ್ಗಿಸಿದರು.
ಸಮಯದ ಮಹತ್ವ ಕುರಿತು ತಜ್ಞರು ಈ ರೀತಿಯಾಗಿ ಹೇಳುತ್ತಾರೆ, ಒಂದು ವರ್ಷದ ಮಹತ್ವವನ್ನು ತಿಳಿಯಲು ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯನ್ನು ಕೇಳಬೇಕು. ಒಂದು ತಿಂಗಳ ಮಹತ್ವವನ್ನು ತಿಳಿಯಲು ಅವಧಿ ಪೂರ್ವದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿಯಲ್ಲಿ ಕೇಳಬೇಕು. ಒಂದು ವಾರದ ಮಹತ್ವವನ್ನು ತಿಳಿಯಲು ವಾರಪತ್ರಿಕೆಯ ಸಂಪಾದಕನನ್ನು ಕೇಳಬೇಕು. ಒಂದು ದಿನದ ಮಹತ್ವವನ್ನು ತಿಳಿಯಲು ದಿನಗೂಲಿಯನ್ನೇ ನಂಬಿರುವ ಕೂಲಿ ಕಾರ್ಮಿಕನನ್ನು ಕೇಳಬೇಕು. ಒಂದು ಗಂಟೆಯ ಮಹತ್ವ ತಿಳಿಯಲು ಆಪ್ತರಿಗಾಗಿ ಕಾಯುತ್ತಾ ಕುಳಿತಿರುವವರನ್ನು ಕೇಳಬೇಕು. ಒಂದು ನಿಮಿಷದ ಮಹತ್ವವನ್ನು ತಿಳಿಯಲು ರೈಲಿಗೆ ಟಿಕೆಟ್ ತೆಗೆದುಕೊಂಡು ರೈಲು ತಪ್ಪಿಸಿಕೊಂಡ ಪ್ರಯಾಣಿಕನನ್ನು ಕೇಳಬೇಕು. ಒಂದು ಸೆಕೆಂಡಿನ ಮಹತ್ವವನ್ನು ತಿಳಿಯಲು ಅಪಘಾತದಲ್ಲಿ ಕೂದಲೆಳೆಯಲ್ಲಿ ತಪ್ಪಿಸಿಕೊಂಡು ಬದುಕಿದವನನ್ನು ಕೇಳಬೇಕು, ಒಂದು ಮಿಲಿ ಸೆಕೆಂಡಿನ ಮಹತ್ವವನ್ನು ತಿಳಿಯಲು ಒಲಿಂಪಿಕ್ಸ್ ಕ್ರೀಡೆಯಲ್ಲಿ ಚಿನ್ನದ ಪದಕವನ್ನು ಕಳೆದುಕೊಂಡು ಬೆಳ್ಳಿ ಪದಕವನ್ನು ಪಡೆದ ಕ್ರೀಡಾಪಟುವನ್ನು ಕೇಳಬೇಕು ಎಂದಿದ್ದಾರೆ. ಸಮಯದ ಮಹತ್ವವನ್ನು ಅರಿಯಲು ಈ ಇಷ್ಟು ಉದಾಹರಣೆಗಳು ಸಾಕು.

ಲೇಖನ:
– ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.