Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಆಯ್ಕೆಯ ಗೊಂದಲದಲ್ಲಿ ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳಬಾರದು
ವಿಶೇಷ ಲೇಖನ

ಆಯ್ಕೆಯ ಗೊಂದಲದಲ್ಲಿ ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳಬಾರದು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

ಒಂದು ದಟ್ಟವಾದ ಕಾಡಿನಲ್ಲಿ ಸಿಂಹಗಳ ಸುಂದರವಾದ ಕುಟುಂಬವೊಂದು ವಾಸಿಸುತ್ತಿತ್ತು. ಪ್ರತೀ ದಿನವೂ ತನ್ನ ಕುಟುಂಬದ ಸದಸ್ಯರಿಗೆ ಅಗತ್ಯವಿರುವ ಆಹಾರವನ್ನು ಗಂಡು ಸಿಂಹವೇ ಬೇಟೆಯಾಡಿ ತಂದು ಎಲ್ಲಾ ಸದಸ್ಯರಿಗೂ ನೀಡುತ್ತಿತ್ತು. ಗಂಡು ಸಿಂಹವು ಪ್ರತೀ ದಿನ ಬೇಟೆಯಾಡಿ ಮಾಂಸವನ್ನು ತಂದರೆ ಹೆಣ್ಣು ಸಿಂಹವು ಬೇಟೆಯನ್ನು ಹಂಚಿ ಎಲ್ಲಾ ಸದಸ್ಯರಿಗೂ ನೀಡುತ್ತಿತ್ತು. ಒಂದು ದಿನ ಸುಂದರವಾದ ಸಂಸಾರದಲ್ಲಿ ಅಪಸ್ವರ ಎದುರಾಯಿತು. ಗಂಡು ಸಿಂಹ ಮತ್ತು ಹೆಣ್ಣು ಸಿಂಹ ಇಬ್ಬರ ನಡುವೆ ಯಾರು ಮೇಲು ಎಂಬ ಚರ್ಚೆಯು ಪ್ರಾರಂಭವಾಯಿತು. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಮರದ ಮೇಲೆ ಕುಳಿತು ಸಿಂಹಗಳ ಜಗಳವನ್ನು ಗಮನಿಸಿದ ರಣಹದ್ದೊಂದು ಎರಡು ಸಿಂಹಗಳ ಪೈಕಿ ಯಾರು ಮೇಲೆಂದು ನಿರ್ಧರಿಸಲು ಒಂದು ಉಪಾಯವನ್ನು ಹೇಳಿಕೊಟ್ಟಿತು. ಅದೇನೆಂದರೆ ಪ್ರತಿ ದಿನವೂ ಬೇಟೆಯನ್ನು ಹಿಡಿಯಲು ಗಂಡು ಸಿಂಹವು ಹೋದರೆ, ಈ ಬಾರಿ ಹೆಣ್ಣು ಸಿಂಹ ಬೇಟೆಯನ್ನು ಹಿಡಿದು ತರಲಿ ಆಗ ಯಾರು ಶ್ರೇಷ್ಠ ಎಂದು ನಿರ್ಧರಿಸೋಣ ಎಂದಿತು. ಎರಡೂ ಸಿಂಹಗಳು ಒಪ್ಪಿದವು.


ಅದರಂತೆ ಹೆಣ್ಣು ಸಿಂಹವು ಬೇಟೆಗೆ ದಟ್ಟರಣ್ಯದ ಒಳಗೆ ಹೊಕ್ಕಿತು. ಪ್ರತಿದಿನ ಗಂಡು ಸಿಂಹವು ಬೇಟೆಗೆ ಹೊಂಚು ಹಾಕಿ ಕುಳಿತುಕೊಳ್ಳುತ್ತಿದ್ದ ಸ್ಥಳದಲ್ಲೇ ಹೆಣ್ಣು ಸಿಂಹವೂ ಕುಳಿತಿತು. ಬಹಳ ಸಮಯದ ನಂತರ ಜಿಂಕೆಗಳ ಗುಂಪೊಂದು ಅದೇ ದಾರಿಯಲ್ಲಿ ಓಡಿಕೊಂಡು ಬಂದವು. ಸಿಂಹಿಣಿಯು ನಾನು ಯಾವ ಜಿಂಕೆಯನ್ನು ಹಿಡಿಯಲಿ ಎಂದು ಯೋಚಿಸುತ್ತಾ, ಮೊದಲನೆಯ ಜಿಂಕೆಯನ್ನು ಬಿಟ್ಟಿತು, ಎರಡು, ಮೂರು ನಾಲ್ಕು ಹೀಗೆ ಬರೋಬ್ಬರಿ ೬೦-೭೦ ಜಿಂಕೆಗಳನ್ನೂ ಹಿಡಿಯದೇ ಯಾವುದನ್ನು ಹಿಡಿಯಲಿ ಎಂದು ನಿರ್ಧರಿಸುವುದರಲ್ಲೇ ಬಿಟ್ಟು ಬಿಟ್ಟಿತು. ಅಲ್ಲಿಗೆ ಜಿಂಕೆಗಳ ಇಡೀ ಗುಂಪೇ ಕಾಡಿನಲ್ಲಿ ಕಣ್ಮರೆಯಾಯಿತು. ಸಂಜೆಯಾದರೂ ಸಿಂಹಿಣಿಯು ಬೇಟೆಯನ್ನು ತರದೇ ಇದ್ದುದರಿಂದ ಕೊನೆಗೆ ಗಂಡು ಸಿಂಹ ತಾನೇ ಬೇಟೆಗೆ ಹೊರಟು ತನ್ನ ಮಾಮೂಲಿ ಬೇಟೆಯ ಸ್ಥಳ ತಲುಪಿತು. ಆಗ ಪೊದೆಯ ಮರೆಯಲ್ಲಿ ಸಿಂಹಿಣಿಯು ಬೇಟೆಗೆ ಹೊಂಚು ಹಾಕಿ ಕುಳಿತಿರುವುದು ಕಂಡಿತು. ಅದೇ ಸಮಯಕ್ಕೆ ೧೦೦-೨೦೦ ಕಾಡೆತ್ತುಗಳ ಗುಂಪೊಂದು ಅದೇ ದಾರಿಯಾಗಿ ವೇಗವಾಗಿ ಓಡುತ್ತಿದ್ದವು. ಅವುಗಳ ಓಟದ ವೇಗಕ್ಕೆ ಸಿಂಹಿಣಿಗೆ ಯಾವ ಕಾಡೆತ್ತನ್ನು ಹಿಡಿಯುವುದೆಂದೇ ತಿಳಿಯಲಿಲ್ಲ. ಸರಿ ಸುಮಾರು ೫೦-೬೦ ಕಾಡೆತ್ತುಗಳು ಸಾಗಿದರೂ ಸಿಂಹಿಣಿಗೆ ಒಂದನ್ನೂ ಹಿಡಿಯಲಾಗಲಿಲ್ಲ. ಆಗ ಅಲ್ಲೇ ಮರೆಯಲ್ಲಿದ್ದ ಗಂಡು ಸಿಂಹವು ವೇಗವಾಗಿ ಓಡುತ್ತಿದ್ದ ಕಾಡೆತ್ತುಗಳ ಗುಂಪಿಗೆ ನುಗ್ಗಿ ಒಂದು ಕಾಡೆತ್ತನ್ನು ಹಿಡಿದೇ ಬಿಟ್ಟಿತು. ಸಿಂಹಿಣಿಯು ಪಿಳಿಪಿಳಿ ಕಣ್ಣುಬಿಟ್ಟು ಇದನ್ನು ನೋಡುತ್ತಿತ್ತು.
ಜೀವನದಲ್ಲಿ ಇದೇ ರೀತಿ ನಾವೂ, ಇದೋ ಅಥವಾ ಅದೋ ಎಂದು ನಿರ್ಧರಿಸುವ ಗೊಂದಲದಲ್ಲಿ ಸಿಕ್ಕ ಅವಕಾಶಗಳನ್ನೆಲ್ಲ ಕಳೆದುಕೊಂಡು ಬಿಡುತ್ತೇವೆ. ಸಿಕ್ಕಂತಹ ಸಣ್ಣ ಅವಕಾಶವನ್ನು ಬಳಸಿಕೊಂಡರೆ ಮುಂದಕ್ಕೆ ಬೃಹತ್ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾರು ಶ್ರೇಷ್ಠರೆನ್ನುವುದು ಮುಖ್ಯವಲ್ಲ, ಬದಲಿಗೆ ಯೋಚಿಸುವ ರೀತಿ, ಯಶಸ್ಸಿಗಾಗಿ ಹಾಕಿಕೊಳ್ಳುವಂತಹ ಕಾರ್ಯ ಯೋಜನೆಗಳು ಶ್ರೇಷ್ಠವಾಗುತ್ತವೆ. ‘ಒಮ್ಮೆ ತನ್ನ ಕೆಲಸದಲ್ಲಿ ಭಯರಹಿತರಾದರೆ ಮುಂದೆ ಬದುಕೇ ಅಂತ್ಯವಿಲ್ಲದಷ್ಟು ವಿಶಾಲವಾಗುತ್ತದೆ.’

ಲೇಖನ:
– ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.