Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಸಲು ಪೋಷಕರಿಗೆ ಮನವಿ

ಸಾಧಕರಾಗಲು ಭಗೀರಥ ಪ್ರಯತ್ನ ಮೈಗೂಡಿಸಿಕೊಳ್ಳಬೇಕು

ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನೈಜ ಬದುಕಿನ ಅನಾವರಣವೇ ಕಥೆಗಳ ಜೀವಾಳ :ದಾಕ್ಷಾಯಿಣಿ
(ರಾಜ್ಯ ) ಜಿಲ್ಲೆ

ನೈಜ ಬದುಕಿನ ಅನಾವರಣವೇ ಕಥೆಗಳ ಜೀವಾಳ :ದಾಕ್ಷಾಯಿಣಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಓದುಗರ ಚಾವಡಿ ರಾಜೇಂದ್ರಕುಮಾರ ಬಿರಾದಾರ ಸಾಂಸ್ಕೃತಿಕ ವೇದಿಕೆಯ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮ

ವಿಜಯಪುರ: ನಮ್ಮ ಸುತ್ತಮುತ್ತ ನಡೆಯುವ ನೈಜ ಘಟನೆಗಳು, ಮನೆಗಳಲ್ಲಿ ನಡೆಯುವ ಸಣ್ಣ ಪುಟ್ಟ ಸಂಭ್ರಮಗಳು, ಗಂಟಲುಬ್ಬಿ ಬಂದ ನೋವಿನ ಬಿಕ್ಕಳಿಕೆಗಳು, ನಮ್ಮವೇ ಆದ ಸಮಸ್ಯೆಗಳು, ಆಶಯಗಳು, ಹತಾಶೆಗಳು ಕಥಾವಸ್ತುಗಳಾಗಿ ಗಮನ ಸೆಳೆಯುತ್ತವೆ ಎಂದು ಸಾಹಿತಿ ದಾಕ್ಷಾಯಿಣಿ ಬಿರಾದಾರ ಹೇಳಿದರು.
ಬ್ಯಾಂಕರ್ಸ್ ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಡಾ. ಎಂ.ಎಸ್.ಮಾಗಣಗೇರಿ ಕುಟುಂಬದವರು ಆಯೋಜಿಸಿದ ಓದುಗರ ಚಾವಡಿ ರಾಜೇಂದ್ರಕುಮಾರ ಬಿರಾದಾರ ಸಾಂಸ್ಕೃತಿಕ ವೇದಿಕೆಯ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ತಾಳಿಕೋಟಿಯ ಸವಿತಾ ಆರ್. ಇನಾಮದಾರ ಅವರ ‘ಅರ್ಧ ನೆನಪು ಅರ್ಧ ಕನಸು’ ಕಥಾ ಸಂಕಲನವನ್ನು ಪರಿಚಯಿಸಿ ಅವರು ಮಾತನಾಡಿದರು.
ಇಲ್ಲಿನ ಕಥೆಗಳ ಭಾಷೆ ವಿಶೇಷವಾಗಿದೆ. ಉತ್ತರ ಕರ್ನಾಟಕದ ಭಾಷೆಯ ಲಯವನ್ನು ಸಮರ್ಥವಾಗಿ ಬಳಸುವುದರೊಟ್ಟಿಗೆ ಪ್ರಾದೇಶಿಕ ಅಸ್ಮಿತೆಯನ್ನು ಪ್ರತಿಷ್ಠಾಪಿಸಿ ಸೂಕ್ಷ್ಮ ಭಾವನೆಗಳಿಗೆ ಈ ಭಾಗದ ಭಾಷೆ ಹಾಗೂ ಅದರ ನುಡಿಗಟ್ಟುಗಳು ಸಮರ್ಥವಾಗಿವೆ ಎಂಬುದನ್ನು ಸಾಕ್ಷೀಕರಿಸಿದ್ದಾರೆ. ಮುಕ್ತವಾಗಿ ಒಲಿದಂತೆ ಉಲಿಯುವ ತನ್ನತನವಿರುವ ಈ ಭಾಷೆಯನ್ನು ಲೇಖಕರು ಕತೆಗಳಲ್ಲಿ ಅಚ್ಚುಕಟ್ಟಾಗಿ ದುಡಿಸಿಕೊಂಡಿದ್ದಾರೆ. ಇವರ ಬಹುತೇಕ ಕಥೆಗಳ ಪಾತ್ರಗಳಿಗೆ ಸಶಕ್ತ ಅಭಿವ್ಯಕ್ತಿ ಒದಗಿಬಂದಿದೆ. ಇಲ್ಲಿರುವ ಕತೆಗಳು ಯಾವುದೋ ಕಲ್ಪನೆಯ ದಂತಗೋಪುರಗಳಲ್ಲಿ ಕುಳಿತು ಕಾಲಕ್ಷೇಪಕ್ಕಾಗಿ ಹೇಳಿಕೊಂಡ ರಮ್ಯವಾದ ಸಂಗತಿಗಳಲ್ಲ. ಗ್ರಾಮ್ಯ ಪರಿಸರದಲ್ಲಿಯೇ ಒಡಮೂಡಿ ಆಕೃತಿ ತಾಳುವ ಈ ಕಥೆಗಳು ಹಳ್ಳಿಯ ಬದುಕಿನ ಬವಣೆ, ಛಲ, ಸೇಡು, ಅಸಹಾಯಕತೆ, ಧೈರ್ಯ ಎಲ್ಲವನ್ನೂ ತೆರೆದಿಡುತ್ತವೆ ಎಂದರು.
ಕಾರ್ಯಕ್ರಮವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಅರ್ಜುಣಗಿಯ ಕನ್ನಡ ಉಪನ್ಯಾಸಕಿ ಡಾ.ಸವಿತಾ ಝಳಕಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹೊಟೇಲ್ ಉದ್ಯಮಿ ನಾಗೇಶ್ ಶೆಟ್ಟಿ ಹಾಗೂ ಓಂ ಸಾಯಿ ಯೋಗ ಅಕಾಡೆಮಿಯ ಅಧ್ಯಕ್ಷೆ ಕೀರ್ತಿ ಮಠಪತಿ ಮಾತನಾಡಿ, ವ್ಯಾಯಾಮ, ಯೋಗ, ಧ್ಯಾನಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದಿವ್ಯ ಔಷಧವಾದರೆ ಸಾಹಿತ್ಯ ಮತ್ತು ಓದು ಜ್ಞಾನದ ಹಸಿವನ್ನು ಹಿಂಗಿಸಿ ಸುಂದರ ವ್ಯಕ್ತಿತ್ವ ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಾಹಿತಿ ಸುಭಾಷ್ ಯಾದವಾಡ ಮಾತನಾಡಿ, ಕಥೆ ಕಟ್ಟುವುದೂ ಒಂದು ಕಲೆ. ಬದುಕಿನ ಅನುಭವಗಳ ಸುರಳಿಯನ್ನು ಬಿಚ್ಚಿ ಕಾಲ ಗರ್ಭದ ಸತ್ಯಾಸತ್ಯತೆಗಳ ಅನಾವರಣ ಮಾಡುವುದು ಕಥೆಗಳ ಮುಖ್ಯ ದ್ಯೇಹ ಎಂದರು.
ವೇದಿಕೆ ಮೇಲೆ ಚಾವಡಿ ಬಳಗದ ಅಧ್ಯಕ್ಷ ಬಿ.ಆರ್.ಬನ್ಸೋಡೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕಾವ್ಯ, ಜಾಣ, ರತ್ನ ಪರೀಕ್ಷೆಗಳ ಪಠ್ಯಪುಸ್ತಕಗಳ ರಚನಾ ಸಮಿತಿಗೆ ಉತ್ತರ ಕರ್ನಾಟಕ ಭಾಗದ ಸದಸ್ಯರಾಗಿ ಆಯ್ಕೆಗೊಂಡ ಡಾ. ಎಸ್.ಟಿ ಮೇರವಾಡೆಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಓದುಗರ ಚಾವಡಿಯ ಸಂಚಾಲಕರಾದ ಶರಣು ಸಬರದ, ಡಾ.ವಿ.ಡಿ ಐಹೊಳ್ಳಿ ಡಾ.ಉಷಾ ದೇವಿ ಹಿರೇಮಠ, ಪ್ರಭಾವತಿ ದೇಸಾಯಿ, ಪ್ರೊ.ಎಂ.ಎಸ್ ಝಳಕಿ, ರಮೇಶ ಚವಾಣ್, ಸಂಗಮೇಶ ಮೇತ್ರಿ, ಡಾ. ರಾಜಕುಮಾರ ಜೊಲ್ಲೆ, ಮನು ಪತ್ತಾರ ಕಲಕೇರಿ, ಶಿವಶರಣಪ್ಪ ಶಿರೂರು, ಜಿ. ಸಿ. ಹಿರೇಮಠ್, ರಮೇಶ್ ತೇಲಿ, ಶ್ರೀಧರ ಪತ್ತಾರ, ರವೀಂದ್ರ ಝಳಕಿ, ಅಮರೇಶ ಸಾಲಕ್ಕಿ, ಸುಭಾಷಚಂದ್ರ ಕನ್ನೂರ, ಶರಣಗೌಡ ಪಾಟೀಲ, ಮಯೂರ ತಿಳಗೂಳಕರ್, ಡಾ.ಶಶಿಧರ ಶಿರಹಟ್ಟಿ, ಸೋಮಶೇಖರ ಕುರ್ಲೆ, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕು.ಶ್ರೀನಿಧಿ ಮಾಗಣಗೇರಿ ಪ್ರಾರ್ಥಿಸಿದರೆ ಬಳಗದ ಸದಸ್ಯ ಬಸವರಾಜ ಕುಂಬಾರ ನಿರೂಪಿಸಿ, ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಸಲು ಪೋಷಕರಿಗೆ ಮನವಿ

ಸಾಧಕರಾಗಲು ಭಗೀರಥ ಪ್ರಯತ್ನ ಮೈಗೂಡಿಸಿಕೊಳ್ಳಬೇಕು

ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

ಇಂಡಿ ತಾಲೂಕು ಅಭಿವೃದ್ದಿಗೆ ಮುಖ್ಯಮಂತ್ರಿಗಳ ಕೊಡುಗೆ ಅಪಾರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಸಲು ಪೋಷಕರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಸಾಧಕರಾಗಲು ಭಗೀರಥ ಪ್ರಯತ್ನ ಮೈಗೂಡಿಸಿಕೊಳ್ಳಬೇಕು
    In (ರಾಜ್ಯ ) ಜಿಲ್ಲೆ
  • ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ
    In (ರಾಜ್ಯ ) ಜಿಲ್ಲೆ
  • ಇಂಡಿ ತಾಲೂಕು ಅಭಿವೃದ್ದಿಗೆ ಮುಖ್ಯಮಂತ್ರಿಗಳ ಕೊಡುಗೆ ಅಪಾರ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಇತಿಹಾಸ ಬರೆದ ಹೆಚ್.ಡಿ.ಕೋಟೆ ತಾಲೂಕು
    In (ರಾಜ್ಯ ) ಜಿಲ್ಲೆ
  • ಕೊಲ್ಹಾರದಲ್ಲಿ ಸಿದ್ಧಸಿರಿ ಬ್ಯಾಂಕ್‌ ನೂತನ ಕಟ್ಟಡಕ್ಕೆ ಭೂಮಿ ಪೂಜೆ
    In (ರಾಜ್ಯ ) ಜಿಲ್ಲೆ
  • ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕಾ ಅಭಿಯಾನಕ್ಕೆ ಚಾಲನೆ
    In (ರಾಜ್ಯ ) ಜಿಲ್ಲೆ
  • ನಿಂಗಯ್ಯ ಗೆ ರಾಜ್ಯಪಾಲರಿಂದ ಪಿಎಚ್‌ಡಿ ಪದವಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ: ಕಾವ್ಯಾ ಪ್ರೌಢಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಏ.27 ರಿಂದ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಉಚಿತ ತಪಾಸಣೆ & ಚಿಕಿತ್ಸೆ ಶಿಬಿರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.