ಢವಳಗಿ: ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಎಪ್ರಿಲ್ 27ರಂದು ನಡೆದ ರಾಜ್ಯ ಮಟ್ಟದ ತರಬಂಡಿ ಸ್ಪರ್ಧೆಯಲ್ಲಿ(ಉತ್ತರ ಕರ್ನಾಟಕದ ಪ್ರಸಿದ್ಧ ಸ್ಪರ್ಧೆ ) ರೂಢಗಿ ಗ್ರಾಮದ ಶ್ರೀಶೈಲ ದೊಡಮನಿ ಮತ್ತು ಬ್ಯಾಲ್ಯಾಳ ಗ್ರಾಮದ ಅವ್ವನಗೌಡ ಗ್ವಾತಗಿ ಅವರ ಎತ್ತುಗಳು ಕಮೀಟಿಯ ನಿಗದಿತ ಸಮಯದಲ್ಲಿ 1335.1 ಅಡಿ ದೂರ ಕ್ರಮಿಸಿ ವಿಜಯಮಾಲೆ ಧರಿಸಿಕೊಂಡು ಸ್ಪ್ಲೇಂಡರ್ ಪ್ಲಸ್ ಬೈಕ್ ತಮ್ಮದಾಗಿಸಿಕೊಂಡವು.
ಶ್ರೀ ಪವಾಡ ಬಸವೇಶ್ವರರ ಜಾತ್ರಾ ಕಮೀಟಿಯ ಅಧ್ಯಕ್ಷ ಕೆ ವಾಯ್ ಬಿರಾದಾರ, ಶ್ರೀಶೈಲ ಮೇಟಿ, ಅಪ್ಪುದನಿ ನಾಡಗೌಡ, ವಿರೇಶ ಮಂಕಣಿ, ನಾಗರಾಜ ತಂಗಡಗಿ, ಬಸವರಾಜ ಮಂಕಣಿ, ನಾಗರಾಜ ಕಮತರ, ರಾಜು ಮೇಟಿ , ಸದಾಶಿವ ಸುಳಿಭಾವಿ, ಬಸವರಾಜ ಸಜ್ಜನ, ಆನಂದ ಬೀಳಗಿ ಮತ್ತು ಜಾತ್ರಾ ವ್ಯವಸ್ಥಾಪಕ ಮಂಡಳಿಯ ಸದಸ್ಯರು ಸೇರಿಕೊಂಡು ಪ್ರಥಮ ಸ್ಥಾನದಿಂದ 10ನೆ ಸ್ಥಾನದವರಗೆ ಬಹುಮಾನವನ್ನು ವಿತರಿಸಿದರು ಸ್ಪರ್ಧೆಯಲ್ಲಿ ಒಟ್ಟು 26 ಜೋಡಿ ಎತ್ತುಗಳು ಭಾಗವಹಿಸಿದ್ದವು.
ಸುತ್ತಮುತ್ತಲಿನ ಗ್ರಾಮದ ಅಭಿಮಾನಿಗಳು ಮತ್ತು ಬೆಂಬಲಿಗರು ಪಟಾಕಿ ಸಿಡಿಸಿ ಗುಲಾಲು ಎರಚಿಕೊಂಡು ವಿಜಯೋತ್ಸವವನ್ನು ಆಚರಿಸಿದರು. ಸಾವಿರಾರು ಅಭಿಮಾನಿಗಳು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

