ಮುದ್ದೇಬಿಹಾಳ: ಬಿರುಗಾಳಿಗೆ ಸರ್ವಿಸ್ ವೈರ್ ಮೇಲೆ ಮರವೊಂದು ಬಿದ್ದ ಪರಿಣಾಮ ಮೂರು ವಿದ್ಯತ್ ಕಂಬಗಳು ನೆಲಕ್ಕುರುಳಿದ ಘಟನೆ ತಾಲೂಕಿನ ಹಿರೇಮುರಾಳ ಗ್ರಾಮದ ಹೊಸ ಪ್ಲಾಟ್ ನಲ್ಲಿ ರವಿವಾರ ಮಧ್ಯರಾತ್ರಿ ಸಂಭವಿಸಿದೆ.
ಏಕಾಏಕಿ ಶುರುವಾದ ಬಿರುಗಾಳಿಗೆ ಮರ ಮುರಿದು ವಿದ್ಯುತ್ ಕಂಬದಿಂದ ಬಂದಿರುವ ತಂತಿಯ ಮೇಲೆ ಬಿದ್ದಿದೆ. ಭಾರ ತಾಳಲಾರದೇ ಮೂರೂ ಕಂಬಗಳು ನೆಲಕ್ಕುರುಳಿವೆ. ಜೋರಾಗಿ ಬಂದ ಶಬ್ಧದಿಂದ ಎಚ್ಚರವಾದ ನಿವಾಸಿ ಈರಯ್ಯ ಹಿರೇಮಠ ರಾತ್ರಿಯೇ ಹೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿ ವಿದ್ಯುತ್ ಕಡಿತಗೊಳಿಸುವಂತೆ ತಿಳಿಸಿದ್ದಾರೆ. ಘಟನೆಯಿಂದ ಯಾವುದೇ ವ್ಯಕ್ತಿಗೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

